Friday, May 10, 2024

ನಾವು ಕೇಂದ್ರದಿಂದ ಭಕ್ಷೀಸ್ ಕೇಳುತ್ತಿಲ್ಲ : ದಿನೇಶ್ ಗುಂಡೂರಾವ್

ಬೆಂಗಳೂರು : ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಸ್ಥಗಿತಗೊಳಿಸಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಾವು ಕೇಂದ್ರ ಸರ್ಕಾರದಿಂದ ಭಕ್ಷೀಸ್ ಕೇಳುತ್ತಿಲ್ಲ ಎನ್ನುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ತನ್ನ ಪಿತ್ರಾರ್ಜಿತ ಆಸ್ತಿಯಿಂದ ರಾಜ್ಯಗಳಿಗೆ ಅನುದಾನ ಕೊಡುವುದಿಲ್ಲ. ನಾವು ತೆರಿಗೆಯ ರೂಪದಲ್ಲಿ ಕೇಂದ್ರಕ್ಕೆ ಭಿಕ್ಷೆ ಕೊಡುತ್ತಿದ್ದೇವೆ ಎಂಬುದು ನೆನಪಿರಲಿ. ನ್ಯಾಯವಾಗಿ ನಮಗೆ ಸಲ್ಲಬೇಕಾದ ತೆರಿಗೆ ಪಾಲನ್ನು ಕೇಳುತ್ತಿದ್ದೇವೆ. ನಮ್ಮ ಪಾಲಿನ ಹಣ ಕೊಡಲು ಕಷ್ಟವೇನು? ಎಂದು ಪ್ರಶ್ನಿಸಿದ್ದಾರೆ.

ನಡ್ಡಾ ಬೆದರಿಕೆಗೆ ಜನ ಜಗ್ಗಲಿಲ್ಲ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಚುನಾವಣಾ ಪೂರ್ವದಲ್ಲಿ ಬಿಜೆಪಿಯನ್ನು ಗೆಲ್ಲಿಸದಿದ್ದರೆ ಅನುದಾನ ಸ್ಥಗಿತಗೊಳಿಸುವ ಬೆದರಿಕೆಯನ್ನು ಹಾಕಿದ್ದರು. ಆದರೂ, ನಡ್ಡಾ ಬೆದರಿಕೆಗೆ ಜಗ್ಗದ ಜನ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ್ದರು. ಈಗ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಸ್ಥಗಿತಗೊಳಿಸಿದೆ. ಇದನ್ನು ಯಾವ ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು? ಎಂದು ಗುಡುಗಿದ್ದಾರೆ.

RELATED ARTICLES

Related Articles

TRENDING ARTICLES