Wednesday, May 1, 2024

ಬಿಪಿಎಲ್​ ಕಾರ್ಡ್​ ಹೊಂದಿರುವವರಲ್ಲಿ ಸರ್ಕಾರಿ ನೌಕರರೇ ಹೆಚ್ಚು!: ಕ್ರಮಕ್ಕೆ ಸಿದ್ದತೆ

ಬೆಂಗಳೂರು : ಅರ್ಹತೆ ಇಲ್ಲದಿದ್ದರು ಬಿಪಿಎಲ್​ ಕಾರ್ಡ್ ಹೊಂದಿ ಉಚಿತ ಅನ್ನಭಾಗ್ಯ ರೇಷನ್ ಪಡೆಯುತಿದ್ದವರಿಗೆ ಸರ್ಕಾರದಿಂದ ಬಿಗ್​ ಶಾಕ್​ ನೀಡಲು ತಯಾರಿ ನಡೆಸಿದೆ.

ರಾಜ್ಯ ಆಹಾರ ಇಲಾಖೆಯೂ ಈಗಾಗಲೆ ಬಿಪಿಎಲ್​ ಕಾರ್ಡ್​ ಹೊಂದಿರುವವರ ಸದ್ಯದ ಆರ್ಥಿಕ ಸ್ಥತಿಗತಿಯನ್ನು ತಿಳಿಯಲು ಪ್ರಮುಖವಾಗಿ ಆರು ಮಾನದಂಡಗಳ ಆಧಾರದ ಮೇಲೆ ಸರ್ವೆ ಕಾರ್ಯ ನಡೆಸುತ್ತಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ! 

ಈ ಮಾನದಂಡಗಳ ಪ್ರಕಾರ ಬಿಪಿಎಲ್​ ಕಾರ್ಡ್​ದಾರರು ​ ವೈಟ್ ಬೋರ್ಡ್ ಕಾರು, ನಿಗದಿತ ವಾರ್ಷಿಕ ಆದಾಯ, ಸರ್ಕಾರಿ ನೌಕರರು, ನಿಗದಿತ ಜಮೀನು ಸೇರಿದಂತೆ ಒಟ್ಟು ಆರು ಮಾನದಂಡಗಳ ಆಧಾರದ ಮೇರೆಗೆ ಬಿಪಿಎಲ್ ಕಾರ್ಡ್ ಬಳಕೆದಾರರಿಗೆ  ಶಾಕ್​ ನೀಡಲು ತಯಾರಿ ನಡೆಸಿದೆ.

ಈ ಹಿಂದೆ ಮಾನದಂಡಗಳ ವ್ಯಾಪ್ತಿಗೆ ಬಂದು ಈಗ ಆರ್ಥಿಕ‌ ಸ್ಥಿತಿ ಸುಧಾರಿಸಿದ್ದರೂ BPL ಕಾರ್ಡ್ ರದ್ದುಮಾಡಲಾಗುತ್ತಿದೆ, ಸಾವನ್ನಪ್ಪಿರುವ ಸುಮಾರು  4.55 ಲಕ್ಷ ಜನರ ಹೆಸರುಗಳನ್ನ ಅಳಿಸಿ 35ಸಾವಿರಕ್ಕೂ ಅಧಿಕ BPL ಕಾರ್ಡ್ಗಳನ್ನು ಆಹಾರ ಇಲಾಖೆ ರದ್ದುಮಾಡಿದೆ.

ಬಿಪಿಎಲ್​ ಕಾರ್ಡ್​ ಹೊಂದಿರುವವರಲ್ಲಿ ಸರ್ಕಾರಿ ನೌಕಕರು ಮತ್ತು ವೈಟ್​ ಬೋರ್ಡ್ ಕಾರು ಹೊಂದಿದವರದ್ದೆ ಸಿಂಹಪಾಲು:

ಆಹಾರ ಇಲಾಖೆಯಿಂದ  ಅನಧಿಕೃತವಾಗಿ ಬಿಪಿಎಲ್​ ಕಾರ್ಡ್ ಹೊಂದಿದವರಿಂದ 8 ಕೋಟಿಗೂ ಅಧಿಕ ದಂಡ ವಸೂಲಿ ಮಾಡಲಾಗಿದ್ದು, BPL ಕಾರ್ಡ್ ಹೊಂದಿರುವವರ ಪೈಕಿ ಸರ್ಕಾರಿ ನೌಕರರು & ವೈಟ್ ಬೋರ್ಡ್ ಕಾರು ಇರುವವರೇ ಹೆಚ್ಚು, RTO ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 44,62,107 ವೈಟ್ ಬೋರ್ಡ್ ಕಾರುಗಳಿವೆ. ಆದಾಯ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆಗೂ ಮಾಹಿತಿ ಕೋರಿ ಆಹಾರ ಇಲಾಖೆ ಮನವಿ ಮಾಡಿದೆ.

ಸದ್ಯ ರಾಜ್ಯದಲ್ಲಿ 1 ಕೋಟಿ 28 ಲಕ್ಷ ಮಂದಿ BPL ಕಾರ್ಡ್ ಹೊಂದಿದ್ದು, ಅನ್ನಭಾಗ್ಯದ ಫಲಾನುಭವಿಗಳಾಗಿದ್ದಾರೆ. ಇದೀಗ ಸರ್ವೇ ಶುರುವಾಗಲಿದ್ದು ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚಿನ ಮಂದಿಯ BPL ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES