Friday, May 10, 2024

ಯಡಿಯೂರಪ್ಪ ಭೇಟಿಯಾದ ಗುತ್ತಿಗೆದಾರರ ಸಂಘ

ಬೆಂಗಳೂರು : ಬಾಕಿ ಬಿಲ್ ಪಾವತಿ ಮಾಡದೆ ಇರೋದರ ವಿರುದ್ಧ ಬಿಬಿಎಂಪಿ ಗುತ್ತಿಗೆದಾರರು ಸಿಡಿದು ನಿಂತಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದ ಗುತ್ತಿಗೆದಾರರ ಸಂಘದ ಸದಸ್ಯರು, ರಾಜ್ಯಪಾಲರಿಗೂ ದೂರು ನೀಡಿದೆ.

ಈ ಮಧ್ಯೆ ಇದೀಗ ಇಂದು ಮಂಜುನಾಥ್ ನೇತೃತ್ವದ ಗುತ್ತಿಗೆದಾರರ ಸಂಘ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದೆ. ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಯಡಿಯೂರಪ್ಪರನ್ನ ಭೇಟಿ ಮಾಡಿ ತಮ್ಮ ಹೋರಾಟಕ್ಕೆ ಸಹಕಾರ ಕೋರಿದರು.

ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಬಿಬಿಎಂಪಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಮೇಲೆಯೂ ಕೆಲಸ ಆಗುತ್ತಿಲ್ಲ. ಪಕ್ಷಾತೀತವಾಗಿ ಬೆಂಗಳೂರಿನ ಎಲ್ಲಾ ಶಾಸಕರಿಗೆ ದೂರು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಯಾರನ್ನೂ ಟಾರ್ಗೆಟ್ ಮಾಡಿಲ್ಲ

ನಾವು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನಮ್ಮ‌ ಹಿಂದೆ ಯಾರು ಇಲ್ಲ ಗುತ್ತಿಗೆದಾರು ಇದ್ದಾರೆ. ಸರ್ಕಾರದ ಬಂದು ಮೂರು ತಿಂಗಳು ಆಗಿದೆ . ಅದರೂ, ನಮ್ಮ ಹಣ ಬಿಡುಗಡೆ ವಿಳಂಬ ಆಗುತ್ತಿದೆ. ಇದರ ಹಿಂದೆ ಮಧ್ಯವರ್ತಿಗಳು ಇದ್ದಾರೆ ಎಂದು ಗುತ್ತಿಗೆದಾರು ಆರೋಪಿಸಿದ್ದಾರೆ.

RELATED ARTICLES

Related Articles

TRENDING ARTICLES