Tuesday, April 30, 2024

ರಾಜ್ಯದಲ್ಲಿ 46,149 ರೌಡಿಶೀಟರ್ಗಳಿದ್ದಾರೆ : ಡಾ.ಜಿ ಪರಮೇಶ್ವರ್

ಬೆಂಗಳೂರು : ರಾಜ್ಯದಲ್ಲಿ ಪ್ರಸ್ತುತ 46,149 ರೌಡಿಶೀಟರ್‌ಗಳಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.

ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ್ ಅರಳಿ ಪ್ರಶ್ನೆಗೆ ಅವರು ಉತ್ತರ ನೀಡಿದರು.

ಕಳೆದ ಐದು ವರ್ಷಗಳಲ್ಲಿ 26,139 ಇದ್ದ ರೌಡಿಶೀಟರ್‌ಗಳಲ್ಲಿ 12,586 ಜನರನ್ನ ಕೈ ಬಿಡಲಾಗಿದೆ. ಯಾವ ಆಧಾರದ ಮೇಲೆ ರೌಡಿಶೀಟರ್‌ನಿಂದ ಕೈ ಬಿಡಲಾಗಿದೆ. ಇವರೆಲ್ಲಾ ಯಾವ ಜಾತಿ ಸಮುದಾಯಕ್ಕೆ ಸೇರಿದ್ದಾರೆ? ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ : ಸುಲಿಗೆ ಮಾಡುತ್ತಿದ್ದ ಮಂಗಳಮುಖಿಯರ ಗ್ಯಾಂಗ್ ಅರೆಸ್ಟ್

14,163 ಮಂದಿ ರೌಡಿಶೀಟರ್‌ಗೆ ಸೇರ್ಪಡೆ

ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ರಾಜ್ಯದಲ್ಲಿ ಪ್ರಸ್ತುತ 46,149 ರೌಡಿಶೀಟರ್‌ಗಳಿದ್ದಾರೆ. ಕಳೆದ 5 ವರ್ಷದಲ್ಲಿ 14,163 ಮಂದಿಯನ್ನು ರೌಡಿಶೀಟರ್‌ಗೆ ಸೇರಿಸಲಾಗಿದೆ. ಕಳೆದ 5 ವರ್ಷಗಳಲ್ಲಿ 27,294 ಮಂದಿಯನ್ನು ರೌಡಿ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಮಾಹಿತಿ ನೀಡಿದರು.

ರೌಡಿಯ ಜಾತಿಯನ್ನು ನಾನು ಹೇಳಲ್ಲ

ರೌಡಿ ಅಸಾಮಿ 65 ವರ್ಷ ಮೇಲ್ಪಟ್ಟಿದ್ದರೆ, ನಿಷ್ಕ್ರಿಯನಾಗಿದ್ರೆ, ರೌಡಿ ಶೀಟರ್ ಮೃತಪಟ್ಟಿದ್ದರೆ, ಅಂಗವಿಕಲ, ಮಾನಸಿಕ ಅಸ್ವಸ್ಥನಾಗಿದ್ದರೆ, ಕಳೆದ 10 ವರ್ಷಗಳಲ್ಲಿ ಯಾವುದೇ ಕೃತ್ಯ ಎಸಗದೆ ಸನ್ನಡತೆ ಕಂಡು ಬಂದಿದ್ದಲ್ಲಿ ಅಂತಹವರನ್ನ ಕೈ ಬಿಡಲಾಗುವುದು. ಆದರೆ, ರೌಡಿಶೀಟರ್‌ನಿಂದ ಕೈ ಬಿಡಲು ಜಾತಿಯನ್ನು ಪರಿಗಣಿಸುವುದಿಲ್ಲ. ರೌಡಿ ರೌಡಿನೇ, ರೌಡಿಯ ಜಾತಿಯ ಹೆಸರನ್ನು ನಾನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES