Friday, May 10, 2024

ಸೋಲನ್ನು ಒಂದು ಕೆಟ್ಟ ಕನಸು ಅಂತ ಒಪ್ಪಿಕೊಳ್ಳಬೇಕು : ಕೆ.ಎಸ್ ಈಶ್ವರಪ್ಪ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸೋಲನ್ನು ಒಂದು ಕೆಟ್ಟ ಕನಸು ಅಂತ ಒಪ್ಪಿಕೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣೆ ನಂತರ ಹೇಳಿಕೆ ಮೇಲೆ ಹೇಳಿಕೆ ಕೊಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ಲಕ್ಷ ಲಕ್ಷ ಕಾರ್ಯಕರ್ತರು ಪಕ್ಷ ಕಟ್ಟಿದ್ದಾರೆ. ಗ್ಯಾರಂಟಿಗಳಿಂದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ‌ಬಂದಿದೆ. ಚುನಾವಣೆ ಸೋಲನ್ನು ನಾವು ಒಪ್ಪಿಕೊಳ್ಳಬೇಕು. ಸೋಲನ್ನು ಕೆಟ್ಟ ಕ‌ನಸು ಅಂತ ಒಪ್ಪಿಕೊಳ್ಳಬೇಕು. ಮುಂಬರುವ ಲೋಕಸಭಾ ಚುನಾವಣೆಗೆ ನಾವು ರೆಡಿಯಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ : ಬಿಜೆಪಿ ಅವ್ರಿಗೆ ಮಾಡೋಕೆ ಇನ್ನೇನು ಕೆಲಸ ಇದೆ : ಸಚಿವ ವೆಂಕಟೇಶ್

ಮೋದಿಯನ್ನು ಮತ್ತೆ ಪ್ರಧಾನಿ ಮಾಡ್ತೇವೆ

ನಾವು ಪಕ್ಷವನ್ನು ಮತ್ತೆ ಕಟ್ಟುತ್ತೇವೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಾವು ಗೆಲ್ತೇವೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡ್ತೇವೆ. ಅಲ್ಲಿ, ಇಲ್ಲಿ ಕೆಲವರು ಮಾತನಾಡಿದ್ದಾರೆ. ಈಗ ಎಲ್ಲರೂ ಒಟ್ಟಿಗೆ ಕುಳಿತು ಚರ್ಚೆ ಮಾಡಿದ್ದಾರೆ. ಗೊಂದಲದ ಗೂಡು ಇಂದಿಗೆ ಮುಕ್ತಾಯವಾಗಿದೆ ಎಂದು ಹೇಳಿದರು.

ನಾಲ್ಕು ‌ಗೋಡೆ ಮಧ್ಯೆ ಬಗೆಹರಿಸಿಕೊಳ್ಳಿ

ಅಸಮಾಧಾನವಿದ್ದರೆ ನಾಲ್ಕು ‌ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು. ಆಪಾದನೆ ಮಾಡೋದು ಸೂಕ್ತ ಅಲ್ಲ ಅಂತ ಸಭೆ ಮಾಡಿ ಆಗಿದೆ. ಇಂದಿಗೆ ಎಲ್ಲಾ ಬಹಿರಂಗ ಹೇಳಿಕೆ ಮುಕ್ತಾಯ ಆಗಿದೆ. ನಾವು ಹೋರಾಟ ಮಾಡುತ್ತೇವೆ. ಪಕ್ಷ ಸಂಘಟನೆಗೆ ಒತ್ತು ಕೊಡುವ ಕೆಲಸ ಮಾಡಬೇಕಿದೆ ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.

RELATED ARTICLES

Related Articles

TRENDING ARTICLES