Thursday, May 9, 2024

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಡಿಕೆಶಿ : ಹೀಗಿತ್ತು ಸಿದ್ದು-ಡಿಕೆಶಿ ಮಾತು ಮಂಥನ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಚುನಾವಣೆ ಹೊತ್ತಿನಲ್ಲೇ ರಾಜ್ಯದ ಮತದಾರರನ್ನು ಸೆಲೆಯುವ ಪ್ರಯತ್ನ ಮಾಡಿದ್ದಾರೆ. ಇಬ್ಬರೂ ಸಹ ತಮ್ಮ ಮನದಾಳದ ಮಾತು ಹಂಚಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ಉಭಯ ಕುಶಲೋಪರಿ, ರಾಜ್ಯ ರಾಜಕೀಯದ ಆಗು-ಹೋಗುಗಳು, ಕಾಂಗ್ರೆಸ್ ಗ್ಯಾರಂಟಿಗಳ ಅನುಷ್ಠಾನ, ಜನರಿಗೆ ಕಾಂಗ್ರೆಸ್ ಮೇಲಿರುವ ನಂಬಿಕೆಯ ಕುರಿತು ಸಿದ್ದು-ಡಿಕೆಶಿ ಮಾತು ಮಂಥನ ನಡೆಸಿದ್ದಾರೆ.

ಡಿ.ಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ಇತ್ತೀಚೆಗೆ ಸಂಭವಿಸಿದ ಹೆಲಿಕಾಫ್ಟರ್​​ ಅವಘಡದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯ ಪ್ರವಾಸದ ಬಗ್ಗೆ ಮಾತುಕತೆ ನಡೆಸಿದ ಕೈ ನಾಯಕರು, ಮಂಡ್ಯ ಕನಿಷ್ಠ 5 ಕ್ಷೇತ್ರ ಗೆಲ್ಲುತ್ತೇವೆ. ನಮ್ಮ ಪ್ರಣಾಳಿಕೆ ಬಜೆಟ್​ ಗೃಹಿಣಿಯರ ಮನಸ್ಸು ಗೆದ್ದಿದೆ ಎಂದು ಬಜೆಟ್​ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ : ಲಿಂಗಾಯತರು ‘ಕಾಂಗ್ರೆಸ್​ಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ’ : ಪ್ರಧಾನಿ ನರೇಂದ್ರ ಮೋದಿ

ಹೀಗಿತ್ತು ಸಿದ್ದುಡಿಕೆಶಿ ಮಂಥನ

ಸಿದ್ದು : ಹೈ ಕರ್ನಾಟಕ ಕೂಡ ಕಳೆದಭಾರಿಗಿಂತ ಹೆಚ್ಚಿಗೆ ಗೆಲ್ಲುತ್ತೇವೆ

ಡಿಕೆಶಿ : ನಾವು 13ನೇ ತಾರೀಕು ರಿಸಲ್ಟ್​ ಬಂದ ತಕ್ಷಣ ಜಾರಿಗೊಳಿಸಬೇಕು. ಖಂಡಿತವಾಗಿಯು ನಾವು ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕು. ಬಿಜೆಪಿಯವರ ರೀತಿ ಈಗ,ನಾಳೆ ನಾಡಿದ್ದು ಎಂದು ಹೇಳುವುದಕ್ಕಾಗುವುದಿಲ್ಲ. ನಾವು ಬಂದ ತಕ್ಷಣ ಮೊದಲ ಕ್ಯಾಬಿನೆಟ್​ನಲ್ಲಿಯೇ ಒಪ್ಪಿಗೆ ಪಡೆದು

ಸಿದ್ದು : ನಮ್ಮ 5 ಗ್ಯಾರಂಟಿಗಳನ್ನು ಜಾರಿಗೊಳಿಸಬೇಕು. ಏಕೆಂದರೆ ನಾನು ಮತ್ತು ನೀವು ಜನರಿಗೆ ಮಾತು ಕೊಟ್ಟಿದ್ದೇನೆ.

ಡಿಕೆಶಿ : ನಾವೇನಾದರೂ ಜಾರಿಗೊಳಿಸದಿದ್ದರೆ ಓಟು ಕೇಳುವುದಿಲ್ಲ ಎಂದಿದ್ದೇನೆ.

ಸಿದ್ದು : ಹೌದು, ನಾನು ಕೂಡ ಹೇಳಿದ್ದೇನೆ ಕೊಟ್ಟ ಮಾತು ಈಡೇರಿಸದಿದ್ದರೆ, ಅಧಿಕಾರದಲ್ಲಿ ಒಂದು ಸೆಕೆಂಡ್​ ಕೂರುವುದಿಲ್ಲ ಎಂದು ಹೇಳಿದ್ದೇನೆ. ನರೇಂದ್ರ ಮೋದಿಯವರು ನಮ್ಮ ಗ್ಯಾರಂಟಿ ಬಗ್ಗೆ ಇದರ ಬಗ್ಗೆ ಚರ್ಚಿಸಿದ್ದಾರೆ.

RELATED ARTICLES

Related Articles

TRENDING ARTICLES