Saturday, May 4, 2024

‘ರಾಹುಲ್ ಗಾಂಧಿಯನ್ನೇ ಬಿಡಲಿಲ್ಲ’, ಇನ್ನು ನನ್ನ ಬಿಡ್ತಾರಾ? : ಡಿ.ಕೆ ಶಿವಕುಮಾರ್

ಬೆಂಗಳೂರು : ರಾಹುಲ್ ಗಾಂಧಿ ಅವರನ್ನೇ ಬಿಡಲಿಲ್ಲ, ಇನ್ನು ನನ್ನನ್ನು ಬಿಡುತ್ತಾರಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದೆ. ಈ ನಡುವೆ ತನಿಖೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಕೂಡ ಹೈಕೋರ್ಟ್ ವಜಾ ಗೊಳಿಸಿದೆ. ಚುನಾವಣೆ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಇದು ದೊಡ್ಡ ಸಂಕಷ್ಟ ತಂದೊಡ್ಡಿದೆ.

ನಾನು ಸರೆಂಡರ್ ಆಗಲ್ಲ

ಈ ಬಗ್ಗೆ ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರು ಏನೇ ಮಾಡಿದರೂ ಡಿ.ಕೆ ಶಿವಕುಮಾರ್ ಸರೆಂಡರ್ ಆಗಲ್ಲ ಎಂದು ಬಿಜೆಪಿ ನಾಯಕರು ವಿರುದ್ಧ ಗುಡುಗಿದ್ದಾರೆ.

7ಕ್ಕೆ 7 ಕ್ಷೇತ್ರದಲ್ಲಿ ಗೆಲ್ಲಿಸಿ

ಈಗಿರುವ ಬಿಜೆಪಿ ಅಭ್ಯರ್ಥಿ ಮೊದಲು ನನ್ನನ್ನ ಸಂಪರ್ಕಿಸಿದ್ದರು. ನಮ್ಮ ಅಂಗಡಿ ಕ್ಲೋಸ್ ಆಗಿದೆ. ಇನ್ನು ನಿಮಗೆ ಎಲ್ಲಿಂದ ಖುರ್ಚಿ ಕೊಡಲಿ ಎಂದೆ. ಜಗದೀಶ್ ಶೆಟ್ಟರ್, ಸೌಥಿ, ಲಿಂಬೆಕಾಯಿ, ಮೆಣಸಿನಕಾಯಿ ಎಲ್ಲಾ ಬಿಜೆಪಿ ಬಿಟ್ಟು ಬಂದಿದ್ದಾರೆ. ನೀವು 7ಕ್ಕೆ 7 ಕ್ಷೇತ್ರದಲ್ಲಿ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಡಿ.ಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ : ‘ಮಿಲ್ಟ್ರಿ ಹೋಟೆಲಿಂದಲೇ ಪ್ರಚಾರ’ ಆರಂಭ : ಡಿಕೆಶಿಗೆ ಬೊಮ್ಮಾಯಿ ಟಕ್ಕರ್

ಸ್ವಾಭಿಮಾನ ಧಕ್ಕೆ ಬರಬಾರದು

ಮಂಡ್ಯದಲ್ಲಿ 10 ರಿಂದ 16 ಮಂದಿ ಟಿಕೆಟ್ ಗಾಗಿ ಅರ್ಜಿ ಹಾಕಿದ್ದರು. 10 ಜನ ಅಭ್ಯರ್ಥಿಗಿಂತ ತುಂಬಾ ಸೀನಿಯರ್ ಆಗಿದ್ದರು. ಅರ್ಹತೆ ಕೂಡ ಇತ್ತು. ಎಲ್ಲರು ಒಗ್ಗಟ್ಟು ಪ್ರದರ್ಶನ ಮಾಡ ಬೇಕು, ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಸರ್ವರಿಗೂ ಸಮಬಾಳು ಸಮಪಾಲು ರೀತಿ ಇರಬೇಕು. ಯಾರ ಸ್ವಾಭಿಮಾನ ಧಕ್ಕೆ ಬರಬಾರದು ಎಂದು ಹೇಳಿದ್ದಾರೆ.

ಮಂಡ್ಯದ ಜೀವಾಳ ಮೈ ಶುಗರ್ ಕಾರ್ಖಾನೆ, ಶುಗರ್ ಕಾರ್ಖಾನೆಗೆ ಶಾಶ್ವತ ಪರಿಹಾರ ಮಾಡಿಕೊಡುವ ಶಕ್ತ ನನಿಗೆ ನೀಡಿ ಎನ್ನುವ ಮೂಲಕ ಪರೋಕ್ಷವಾಗಿ ಮತ್ತೊಮ್ಮೆ ಡಿ.ಕೆ ಶಿವಕುಮಾರ್ ಸಿಎಂ ಆಸೆ ಬಿಚ್ಚಿಟ್ಟಿದ್ದಾರೆ. ಈ ವೇಳೆ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ.

RELATED ARTICLES

Related Articles

TRENDING ARTICLES