Monday, May 6, 2024

ಸಾವಿರಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ 777ಚಾರ್ಲಿ ಮ್ಯಾಜಿಕ್​​​

777 ಚಾರ್ಲಿ ಸಿನಿಮಾ ಇಷ್ಟ ಪಡದವರು ಯಾರು ಇಲ್ಲ. ಸಿನಿಮಾ ನೋಡಿ ಕಣ್ಣಲ್ಲಿ ನೀರು ಹಾಕದವರೂ ಇಲ್ಲ. ಚಾರ್ಲಿ ಈಗ ಎಲ್ಲರ ಮನೆಯ ಮುದ್ದಿನ ನಾಯಿಯಾಗಿದ್ದಾಳೆ. ಅವಳ ನಟನೆಯ ಮೋಡಿಗೆ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ ವಿಚಾರದಲ್ಲಿ ದೂಳೆಬ್ಬಿಸ್ತಿರೋ 777 ಚಾರ್ಲಿಯ ಕಲೆಕ್ಷನ್​ ಎಷ್ಟು ಗೊತ್ತಾ ..? 8ನೇ ದಿನವೂ ಗೆಲುವಿನ ನಾಗಾಲೋಟದಲ್ಲಿ ಮುನ್ನುಗ್ತಿರೋ ಚಾರ್ಲಿಯ ಒಟ್ಟು ಗಳಿಕೆಯ ಬಗ್ಗೆ ನಾವ್​ ಹೇಳ್ತೀವಿ. ಜಸ್ಟ್​ ವಾಚ್​​.

ಏಳೇ ದಿನದಲ್ಲಿ ಚಾರ್ಲಿ ಗಳಿಸಿದ್ದೆಷ್ಟು..?ಪಕ್ಕಾ ರಿಪೋರ್ಟ್

ಚಾರ್ಲಿಗೆ ಬಂತು ಒಳ್ಳೆ ಟೈಮ್​​.. ಬಾಕ್ಸ್​ ಆಫೀಸ್  ಬ್ಯಾಂಗ್​​

ನಾಯಿಗೂ ಒಳ್ಳೆ ಟೈಮ್​ ಬರುತ್ತೆ ಅನ್ನೋ ಗಾದೆ ಮಾತು ಖಂಡಿತ ಸುಳ್ಳಲ್ಲ. 777 ಚಾರ್ಲಿ ಚಿತ್ರದ  ಸಕ್ಸಸ್​​ ಕ್ರೆಡಿಟ್​ ಕೂಡ ಚಾರ್ಲಿಗೆ  ಸೇರಬೇಕು. ಚಾರ್ಲಿ ಸಿನಿಮಾ ನೋಡಿದವ್ರು ರಿಯಲ್​ ಹೀರೋ ಚಾರ್ಲಿ ಅಂತಾ ಹಾಡಿ ಹೊಗಳುತ್ತಿದ್ದಾರೆ. ಎಲ್ಲಾ ಕಡೆ ಹೌಸ್​ ಫುಲ್​ ಪ್ರದರ್ಶನ ಕಂಡು ಮುನ್ನುಗ್ತಿದೆ 777ಚಾರ್ಲಿ. ಬಾಕ್ಸ್​ ಆಫೀಸ್​ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿ ಗೆಲುವಿನ ನಗೆ ಬೀರಿದೆ ಚಿತ್ರತಂಡ.

ಚಾರ್ಲಿ ಸಿನಿಮಾ ರಿಲೀಸ್ ಆದಾಗಿನಿಂದ ಬಾಕ್ಸ್ ಆಫೀಸ್​ ಕಲೆಕ್ಷನ್​ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಸಿನಿಮಾ ಥಿಯೇಟರ್​​ಗಳಿಗೆ ಲಗ್ಗೆ ಇಡೋ ಮುನ್ನವೇ ಪ್ರೀ ರಿಲೀಸ್​ ಶೋ​ ಮೂಲಕ ಕೋಟಿ ಕೋಟಿ ಹಣ ಲೂಟಿ ಮಾಡಿತ್ತು. ಸಖತ್​ ಪ್ಲ್ಯಾನ್​ ಮಾಡಿಕೊಂಡಿದ್ದ  ಚಿತ್ರತಂಡ ದೇಶದ 21 ಮಹಾನಗರಗಳಲ್ಲಿ ಪ್ರೀಮಿಯರ್​ ಶೋ ಮೂಲಕವೇ ಸಿಕ್ಕಾಪಟ್ಟೆ ಹನ ಗಳಿಸಿಬಿಡ್ತು.

ಕರುನಾಡಿನಲ್ಲಿ ಭರ್ಜರಿ  ಕಲೆಕ್ಷನ್​​.. ರಕ್ಷಿತ್​​ ಶೆಟ್ಟಿ ಸೇಫ್​

ಎಲ್ಲಾ ಭಾಷೆಯ ಪ್ರೇಕ್ಷಕರು 777ಚಾರ್ಲಿಯನ್ನು ಮೆಚ್ಚಿಕೊಂಡಿದ್ದಾರೆ. ಈಗಾಗ್ಲೇ ಚಿತ್ರದ ಕಲೆಕ್ಷನ್​ ಎರಡಮಕಿಯನ್ನುದಾಟಿ ಮುನ್ನುಗ್ತಿದೆ. ಐಬಿಟೈಮ್ಸ್​ ವರದಿ ಪ್ರಕಾರ ಕರ್ನಾಟಕದಲ್ಲೇ 40 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದೆ. ತಮಿಳುನಾಡು, ಕೇರಳದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಚಾರ್ಲಿ ಧರ್ಮನ ಕಾಂಬಿನೇಷನ್​ಗೆ ಫ್ಯಾನ್ಸ್​ ಫಿದಾ ಆಗಿದ್ದು ಈ ವೀಕೆಂಡ್​ಗೆ ಬಾಕ್ಸ್​ ಆಫೀಸ್​ ಕಲೆಕ್ಷನ್​ ಡಬಲ್​ ಆಗೋ ಸಾಧ್ಯತೆ ಇದೆ.

ಕೇವಲ ಕರ್ನಾಟಕವೊಂದರಲ್ಲೇ ವಾರದ ಗಳಿಕೆ 40 ಕೋಟಿ ದಾಟಿದ್ರೆ, ಆಂಧ್ರ-ತೆಲಂಗಾಣ ಸೇರಿ 3 ಕೋಟಿ ದಾಟಿದೆ. ಕೇರಳ ತಮಿಳುನಾಡು ಸೇರಿ 5 ಕೋಟಿ ದಾಟಿದ್ದು, ಬಾಲಿವುಡ್​ ಹಾಗೂ ಉಳಿದ ಭಾಗಗಳಲ್ಲಿ 4 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಒಟ್ಟಾರೆಯಾಗಿ ವಿದೇಶದಲ್ಲಿ 8 ಕೋಟಿ ಮೀರುವ ದಾಖಲೆಯ ಕಲೆಕ್ಷನ್​ ಮಾಡಿ ಚಿತ್ರತಂಡ ಬೀಗ್ತಿದೆ.

ಅಂದಾಜಿನ ಪ್ರಕಾರ 20 ಕೋಟಿಗೂ ಅಧಿಕ ಬಜೆಟ್​ನಲ್ಲಿ ನಿರ್ಮಾಣವಾಗಿರೋ 777ಚಾರ್ಲಿ ಸಿನಿಮಾ ಸ್ಯಾಟಲೈಟ್​ ಹಾಗೂ ಡಿಜಿಟಲ್ ರೈಟ್ಸ್​​ನಲ್ಲೂ ಕೋಟಿ ಕೋಟಿ ಗಳಿಸಿದೆ. ಇದ್ರ ಜೊತೆಯಲ್ಲಿ ದೇಶ ವಿದೇಶಗಳಲ್ಲಿ ಅಬ್ಬರಿಸ್ತಾ ಇರೋ ಚಾರ್ಲಿಗೆ ಸಖತ್​ ರೆಸ್ಪಾನ್ಸ್ ಸಿಗ್ತಾ ಇದೆ. ಒಟ್ಟಾರೆ ಅಂದಾಜಿನ ಪ್ರಕಾರ 60 ಕೋಟಿ ಮೀರಿದ ಕಲೆಕ್ಷನ್​ ಮಾಡಿದೆ 777 ಚಾರ್ಲಿ.

ಸಹಕಲಾವಿದರಾದ ರಾಜ್​ ಬಿ ಶೆಟ್ಟಿ, ಬಾಬಿ ಸಿಂಹ, ನಟಿ ಸಂಗೀತಾ ಶೃಂಗೇರಿ ಕ್ಲಾಸ್​ ಆ್ಯಕ್ಟಿಂಗ್ ಮಾಡಿದ್ದಾರೆ. ನಿರ್ದೇಶಕ ಕಿರಣ್​ರಾಜ್​​ ನಿರ್ದೇಶನಕ್ಕೆ ಚಿತ್ರರಸಿಕರು ಫುಲ್​ಮಾರ್ಕ್ಸ್​ ಕೊಟ್ಟಿದ್ದು. ಅವರ ಹಾರ್ಡ್​ವರ್ಕ್​​, ಡೆಡಿಕೇಷನ್​​, ಕ್ರಿಯೇಟಿವಿಟಿಗೆ ಫಿದಾ ಆಗಿದ್ದಾರೆ. ನಟ ರಕ್ಷಿತ್​ ಶೆಟ್ಟಿ ಹಾಗೂ ಜಿ ಎಸ್​ ಗುಪ್ತಾ  ನಿರ್ಮಾಣದಲ್ಲಿ ಸಕ್ಸಸ್​ ಕಂಡಿದೆ ಚಾರ್ಲಿ ಸಿನಿಮಾ. ನೋಬಿನ್ ಪೌಲ್​ ಮ್ಯೂಸಿಕ್​​, ಅರವಿಂದ್​ ಕಶ್ಯಪ್​ ಕ್ಯಾಮೆರಾ ಮೋಡಿ ಮಾಡಿದೆ. ಎನಿವೇ ಇಂತಹ ಅದ್ಭುತ ಸಿನಿಮಾ ಮಿಸ್​ ಮಾಡಿದ್ರೆ , ವೀಕೆಂಡ್​ಗೆ ತಪ್ಪದೇ ಹೋಗಿ ಸಿನಿಮಾ ನೋಡಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES