ಲಂಡನ್: ಲಂಡನ್‌ನ ಓವಲ್‌ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯ ವೀಕ್ಷಣೆಗೆ ಮದ್ಯದ ದೊರೆ ವಿಜಯ್ ಮಲ್ಯ ಅವರೂ ತೆರಳಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ತಮ್ಮ ಕ್ರಿಕೆಟ್ ಕ್ರೇಜ್ ಕುಗ್ಗಿಲ್ಲ ಅನ್ನೋದನ್ನ ತೋರಿಸಿದ್ದಾರೆ.
ಲಂಡನ್‌ನ ಓವಲ್‌ನಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವರ್ಲ್ಡ್ಕಪ್ ಪಂದ್ಯ ವೀಕ್ಷಿಸಲು ಮಲ್ಯ ಅವರೂ ತೆರಳಿದ್ದಾರೆ. ನಾನು ಕ್ರಿಕೆಟ್ ವೀಕ್ಷಿಸೋಕೆ ಬಂದಿದ್ದೀನಿ ಅಂದಿರುವ ಮಲ್ಯ ನೇರ ಸ್ಟೇಡಿಯಂ ಒಳಗೆ ನಡೆದಿದ್ದಾರೆ.
ಕಿಂಗ್ಫಿಶರ್ ಏರ್ಲೈನ್ಸ್ ಮಾಲೀಕರಾಗಿದ್ದ ಮಲ್ಯ ಭಾರತದಲ್ಲಿ ವಿವಿಧ ಬ್ಯಾಂಕ್ಗಳಿಗೆ 9000 ಕೋಟಿ ರೂಪಾಯಿ ವಂಚಿಸಿ ಲಂಡನ್ಗೆ ಪರಾರಿಯಾಗಿದ್ದರು.
Ooty Station on Dorset Street opening tomorrow. Was invited for a preview. Superb all around Sports Bar. Enjoyed the best South Indian Food and an exotic cocktail list watching exciting cricket. The only place to be in London to enjoy a premium Sports Bar and award winning food.
— Vijay Mallya (@TheVijayMallya) June 6, 2019