Tuesday, April 30, 2024

‘ಪವರ್ ಬಲೆ’ಗೆ ಬಿದ್ದ ಅರಸೀಕೆರೆ ‘ತೋಳ’ : ‘ಕೋತಿ ತಿಂದು ಮೇಕೆ ಮೂತಿಗೆ ಒರೆಸೋದು ಅಂದ್ರೆ ಇದೇ!

ಬೆಂಗಳೂರು : ಸದನದಲ್ಲಿ ಆಡಳಿತರೂಢ ಸರ್ಕಾರ ಹಾಗೂ ಅಧಿಕಾರಿಗಳ ಲಂಚ, ಭ್ರಷ್ಟಾಚಾರದ ಬಗ್ಗೆ ಇವರದು ಯದ್ವಾತದ್ವ ರೋಷಾವೇಶ. ಸ್ವಾಮಿ.. ನಿಮ್ಮ ಅಧಿಕಾರಿಗಳು ಬಿಡಿಗಾಸಿಗೂ ಕೈ ಚಾಚ್ತಾರೆ. ಭ್ರಷ್ಟಾಚಾರವೇ ತುಂಬಿ ತುಳುಕುತ್ತಿದೆ. ಹೀಗಾದ್ರೆ, ನಮ್ಮಂಥವರು ಬದುಕೋದು ಹೇಗೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ್ರು ಸದನದಲ್ಲಿ ಹಳ್ಳಿ ಸೊಗಡಿನಲ್ಲೆ ಆರ್ಭಟಿಸಿದ್ದೇ ಆರ್ಭಟಿಸಿದ್ದು!

ಅದೇನೋ ಹೇಳ್ತಾರಲ್ವಾ.. ‘ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿ ಹೋಯ್ತು’ ಅನ್ನೋ ಹಂಗಾಯ್ತು..! ಶಿವಲಿಂಗೇಗೌಡರ ಪರಿಸ್ಥಿತಿ. ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಲಂಚದ ಬಗ್ಗೆ ಗುಸುಗುಸು ಮಾತನಾಡುವ ಮೂಲಕ ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದಿದ್ದಾರೆ. ಇವರೇ ನಮ್ಮ ಮೆಗಾ ಬೇಟೆಯ ಸಿಕ್ಕಿಬಿದ್ದ 35ನೇ ಶಾಸಕ.

ವಾಟ್ಸಾಪ್ ಕರೆಯಲ್ಲಿ ಡೀಲ್​ಗೆ ಒಪ್ಪಿಗೆ

ಅರಸೀಕೆರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆಗೆ ಶಾಸಕ ಶಿವಲಿಂಗೇಗೌಡ ಡೀಲ್ ಮಾತುಕತೆ ನಡೆಸಿದರು. ಹಣ ಪಡೆಯಲು ಒಪ್ಪಿಕೊಳ್ಳುವ ಶಿವಲಿಂಗೇಗೌಡ್ರು, ನೇರಾನೇರ ಮಾತುಕತೆಯಲ್ಲಿ ಡೀಲ್ ಗೆ ನಿರಾಕರಿಸಿದರು. ಬಳಿಕ ಓಎಫ್​ಸಿ ಕೇಬಲ್ ಅಳವಡಿಕೆಗೆ ಪರ್ಮಿಶನ್ ನೀಡಲು ಡೀಲ್​ಗೆ ಒಪ್ಪಿಗೆ ನೀಡಿದರು.

ನೇರವಾಗಿ ಸಿಗೋಣ ಎಂದ ಶಿವಲಿಂಗೇಗೌಡ್ರು

ಒಟ್ಟು 5 ಲಕ್ಷ ರೂಪಾಯಿಗಳನ್ನು ಬಾಬು ಎಂಬುವವರಿಗೆ ತಲುಪಿಸಲು ಶಿವಲಿಂಗೇಗೌಡರು ಸೂಚನೆ ನೀಡಿದರು. ವಾಟ್ಸ್​ಆ್ಯಪ್ ಕರೆಯಲ್ಲಿ ಡೀಲ್​ಗೆ ಒಪ್ಪಿಗೆ ಸೂಚಿಸಿದ ಶಿವಲಿಂಗೇಗೌಡ್ರು, ಫೋನ್​​ನಲ್ಲಿ ಈ  ಬಗ್ಗೆ ಮಾತು ಬೇಡ, ನೇರವಾಗಿ ಸಿಗೋಣ ಎಂದರು. ಫೋನ್ ಮಾತುಕತೆ ವೇಳೆ ಹಣದ ಕುರಿತು ಶಾಸಕ ಶಿವಲಿಂಗೇಗೌಡ್ರು ಪಿಎ ಕೂಡ ಒಪ್ಪಿಗೆ ಸೂಚಿಸಿದರು.

ಹೆಸರು: ಶಿವಲಿಂಗೇಗೌಡ

ಪಕ್ಷ: ಜೆಡಿಎಸ್​ (ರಾಜೀನಾಮೆ)

ಕ್ಷೇತ್ರ: ಅರಸೀಕೆರೆ

ಜಿಲ್ಲೆ: ಹಾಸನ

ಸ್ಥಳ: ಅರಸೀಕೆರೆ

ಬೇಡಿಕೆ: 5 ಲಕ್ಷ ರೂಪಾಯಿ

 

ಹೀಗಿತ್ತು ಶಿವಲಿಂಗೇಗೌಡ್ರು ಡೀಲ್ ಸಂಭಾಷಣೆ

ಶಿವಲಿಂಗೇಗೌಡ, ಅರಸೀಕರೆ ಶಾಸಕ;  ಹಾ ಹೇಳಿ ಹೇಳಿ

ಪವರ್ ಪ್ರತಿನಿದಿ: ಅಣ್ಣಾ ಅದೇ ಕಿಲೋಮೀಟರ್ ಗೆ ಐದು ಲಕ್ಷ ಕೊಡ್ತಾ ಇದ್ದೀನಿ ಟೋಟಲ್. ಅದಕ್ಕೆ ಇವರ ಕೈಯಲ್ಲಿ ತಲುಪಿಸ್ಲಾ ಅಣ್ಣ

ಶಿವಲಿಂಗೇಗೌಡ, ಅರಸೀಕರೆ ಶಾಸಕ: ಹಾ ಇವರ ಕೈಯಲ್ಲಿ ತಲುಪಿಸಿ ಬಾಗೂರ್ ಗೆ

ಪವರ್ ಪ್ರತಿನಿಧಿ: ಮತ್ತೆ  ಈಗ ಒಂದು ಮಾತು ಹೇಳಬೇಕಾಗಿತ್ತಲ್ಲ ಅಣ್ಣ.

ಶಿವಲಿಂಗೇಗೌಡ, ಅರಸೀಕರೆ ಶಾಸಕ: ಹೇಳುತ್ತೇನೆ ತಗೊಳ್ಳಿ.

ಪವರ್ ಪ್ರತಿನಿಧಿ: ನೀವು ಏನಾದ್ರೂ ಹೂ ಅಂತಾ ಹೇಳಿದ್ರೆ, ನೆಕ್ಸ್ಟ್ ಬೇರೆ ಕೆಲಸಾನು ಒಪ್ಪಿಕೊಳ್ಳುತ್ತೇವೆ ಅಣ್ಣ ನಾವು.

ಶಿವಲಿಂಗೇಗೌಡ, ಅರಸೀಕರೆ ಶಾಸಕ: ಹಾ. ಸರಿ ನೀವು ಬನ್ನಿ,ಮುಕ್ತವಾಗಿ ಮಾತನಾಡಿ, ಫೋನ್ ನಲ್ಲಿ ಬೇಡ.

ಪವರ್ ಪ್ರತಿನಿಧಿ: ಇಲ್ಲಾ ಅಣ್ಣ ವಾಟ್ಸಪ್ ಕಾಲ್ ಅಣ್ಣ. ಅದಕ್ಕೆ ಬಂದಿದ್ದೆ ಅಣ್ಣ ನಾನು ನಿಮ್ಮ ಹತ್ತಿರ ಡೈರೆಕ್ಟ್ ಆಗಿ.

ಶಿವಲಿಂಗೇಗೌಡ, ಅರಸೀಕರೆ ಶಾಸಕ: ಆ ಆಯ್ತು ಆಯ್ತು

ಪವರ್ ಪ್ರತಿನಿಧಿ: ಯಾವಾಗ ಬರಲಿ ಅಣ್ಣ.. ನಾಳೆ ಬರಲಾ..

ಶಿವಲಿಂಗೇಗೌಡ, ಅರಸೀಕರೆ ಶಾಸಕ: ಆಯ್ತು ನಾಳೆ ನಾಳೆ ಸಿಗುತ್ತೇನೆ ಬನ್ನಿ. ಈ ಇದನ್ನು ನಮ್ಮ ಬಾಗೂರು ಹತ್ತಿರ ತಲುಪಿಸಿ.

ಪವರ್ ಪ್ರತಿನಿಧಿ: ಓಕೆ ಅಣ್ಣ

 

ಶಿವಲಿಂಗೇಗೌಡ್ರು ಪಿಎ ಡೀಲ್ ಸಂಭಾಷಣೆ

ಪವರ್ ಪ್ರತಿನಿಧಿ: ಸರ್, ಊಟ ಆಯ್ತಾ ಸರ್

ಎಂಎಲ್ ಎ ಪಿಎ: ಹೇಳಿ ಹೇಳಿ

ಪವರ್ ಪ್ರತಿನಿಧಿ: ನಾಳೆ ಎಷ್ಟೊತ್ತಿಗೆ ಬರಬೇಕು ಹೇಗೆ

ಎಂಎಲ್ ಎ ಪಿಎ: ಬೆಳಗ್ಗೆ ಒಂದು ಹತ್ತು ಗಂಟೆಗೆ ಬನ್ನಿ

ಪವರ್ ಪ್ರತಿನಿಧಿ: ಹತ್ತುಗಂಟೆ ಮೇಲಾದ್ರೂ ಪರವಾಗಿಲ್ಲವಾ

ಎಂಎಲ್ ಎ ಪಿಎ : ಬನ್ನಿ ಇರುತ್ತೇವೆ ಅರಸೀಕೆರೆನಲ್ಲೇ

ಪವರ್ ಪ್ರತಿನಿಧಿ: ನಾಳೆ ಒಂದು ನಾಲ್ಕು ಕೊಡುತ್ತೇನೆ. ಮಿಕ್ಕಿದ್ದು ಕೆಲಸ ಶುರು ಆದ ಕೂಡಲೇ ಕೊಡುತ್ತೇನೆ.

ಎಂಎಲ್ ಎ ಪಿಎ: ಲೇಟ್ ಆಗಿ ಬರಬೇಡಿ. ಸ್ವಲ್ಪ ಬೇಗ ಬನ್ನಿ.

ಪವರ್ ಪ್ರತಿನಿಧಿ: ಹಾಗಲ್ಲ ನಾಳೆ ನಾಲ್ಕು ಲಕ್ಷ ಕೊಡುತ್ತೇನೆ. ಮಿಕ್ಕಿದ್ದು ಕೆಲಸ ಸ್ಟಾರ್ಟ್ ಮಾಡಬೇಕಾದ್ರ ಕೊಡ್ಲಾ.

ಎಂಎಲ್ ಎ ಪಿಎ: ಆಯ್ತು ಬನ್ನಿ

ಪವರ್ ಪ್ರತಿನಿದಿ: ನಿಮ್ಮನ್ನೇನಾದರೂ ಸಪರೇಟ್ ನೋಡಬೇಕಾ ಹೇಗೆ ?

RELATED ARTICLES

Related Articles

TRENDING ARTICLES