Sunday, May 5, 2024

ಸೌತ್ ಸ್ಟಾರ್ಸ್​ಗಳಿಂದ ಬಾಲಿವುಡ್ ಮೇಲೆ ಸರ್ಜಿಕಲ್ ಸ್ಟ್ರೈಕ್ !

ಫಿಲ್ಮ್​ಡೆಸ್ಕ್​: ಕೆಜಿಎಫ್, ತ್ರಿಬಲ್ ಆರ್ ಸಿನಿಮಾಗಳು ಬಾಲಿವುಡ್ ಬಾಕ್ಸ್ ಆಫೀಸ್ ಮೇಲೆ ಸವಾರಿ ಮಾಡೋ ಮೂಲಕ ಎಲ್ಲರ ಹುಬ್ಬೇರಿಸಿದ್ದವು. ಇದೀಗ ಮಗದೊಮ್ಮೆ ನಮ್ಮ ಸೌತ್ ಸೂಪರ್ ಸ್ಟಾರ್​​ಗಳ ಪ್ಯಾನ್ ಇಂಡಿಯಾ ಮೂವೀಸ್ ಬಿಟೌನ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡೋ ಮುನ್ಸೂಚನೆ ನೀಡಿವೆ. ಬಾಲಿವುಡ್ ಬಾಕ್ಸ್ ಆಫೀಸ್​ಗೆ ಬರ ಬಂದಿದ್ದು, ಈ ವರ್ಷ ಬಿಗ್ ಸ್ಟಾರ್ಸ್​ ಬಿಗ್ ಮೂವೀಸ್ ಎಲ್ಲಾ ಮಕಾಡೆ ಮಲಗಿವೆ. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಯೆಸ್.. ಕೊರೋನಾ ಸಮಯದಿಂದ ಬಾಲಿವುಡ್ ಸಿನಿದುನಿಯಾದ ಸಕ್ಸಸ್ ರೇಟ್ ನೋಡಿದ್ರೆ ಪಾತಾಳಕ್ಕೆ ಇಳಿದಿದೆ. ಅದ್ರಲ್ಲೂ ಸೌತ್ ಸಿನಿಮಾಗಳ ಅಬ್ಬರ, ಆರ್ಭಟಕ್ಕೆ ಅಕ್ಷರಶಃ ಹಿಂದಿ ಮಂದಿ ಬೆಚ್ಚಿಬಿದ್ದರು. ಅಷ್ಟರ ಮಟ್ಟಿಗೆ ಮೇಕಿಂಗ್ ಹಾಗೂ ಕಂಟೆಂಟ್​​ನಿಂದ ನಮ್ಮ ದಕ್ಷಿಣ ಭಾರತದ ಚಿತ್ರಗಳು ಬಾಲಿವುಡ್​ಗೆ ಎಫೆಕ್ಟ್ ನೀಡಿದ್ವು. ಕೆಜಿಎಫ್ ಚಾಪ್ಟರ್-2, ಕಾಂತಾರ, ರಾಜಮೌಳಿಯ ತ್ರಿಬಲ್ ಆರ್ ಚಿತ್ರಗಳಂತೂ ಗುಡಿಸಿ ಗುಂಡಾಂತರ ಮಾಡಿಬಿಟ್ಟವು.

ಕಳೆದ ವರ್ಷ ಹಿಂದಿ ಚಿತ್ರರಂಗದ ಅಷ್ಟೋ ಇಷ್ಟೋ ಮಾನ ಕಾಪಾಡಿದ ಚಿತ್ರಗಳು ಅಂದ್ರೆ ಶಾರೂಖ್ ಖಾನ್​ರ ಪಠಾಣ್ ಹಾಗೂ ಜವಾನ್. ಹೌದು.. ಇವೆರಡೂ ಸಿನಿಮಾಗಳು ಸಾವಿರ ಕೋಟಿ ಕ್ಲಬ್ ಸೇರೋ ಮೂಲಕ ಕಂಗಾಲಾಗಿದ್ದ ಇಂಡಸ್ಟ್ರಿಗೆ ಬೂಸ್ಟರ್ ಡೋಸ್ ನೀಡಿದವು. ರಣ್​ಬೀರ್ ಕಪೂರ್​ರ ಅನಿಮಲ್ ಕೂಡ ಅದಕ್ಕೆ ಸಾಥ್ ನೀಡಿತ್ತು. ಆದ್ರೆ ಈ ವರ್ಷ ಶುರುವಾಗಿ ನಾಲ್ಕು ತಿಂಗಳು ಕಳೆಯುತ್ತಾ ಬಂದ್ರೂ, ಬಾಲಿವುಡ್​​ನಲ್ಲಿ ಹೇಳಿಕೊಳ್ಳೋ ಅಂತಹ ಚೇತರಿಕೆ ಕಂಡಿಲ್ಲ.

ಹೃತಿಕ್ ರೋಷನ್​ರ ಫೈಟರ್, ಅಕ್ಷಯ್ ಕುಮಾರ್- ಟೈಗರ್ ಶ್ರಾಫ್ ಜುಗಲ್ಬಂದಿಯ ಬಡೇಮಿಯಾ ಚೋಟೆಮಿಯಾ, ಅಜಯ್ ದೇವಗನ್​ರ ಮೈದಾನ್, ಸಿದ್ದಾರ್ಥ್ ಮಲ್ಹೋತ್ರ ಅಭಿನಯದ ಯೋಧ ಹೀಗೆ ದೊಡ್ಡ ದೊಡ್ಡ ಸೂಪರ್ ಸ್ಟಾರ್​​ಗಳ ಬಹುನಿರೀಕ್ಷಿತ ಚಿತ್ರಗಳೇ ಬಾಕ್ಸ್ ಆಫೀಸ್​​ನಲ್ಲಿ ನೆಲಕಚ್ಚಿದವು. ಶೈತಾನ್, ಕ್ರ್ಯೂವ್, ಆರ್ಟಿಕಲ್ 370 ಚಿತ್ರಗಳಿಂದ 450 ಕೋಟಿ ಕಲೆಕ್ಷನ್ ಆಗಿದೆ ಅನ್ನೋದು ಬಿಟ್ರೆ ಬಿಗ್ ಸ್ಟಾರ್​ಗಳು ನಿರೀಕ್ಷೆಗಳನ್ನ ಹುಸಿಯಾಗಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಟ ಪ್ರಿನ್ಸ್ ಮಹೇಶ್ ಬಾಬು ಒಡೆತನದ ಮಲ್ಟಿಪ್ಲೆಕ್ಸ್ ಓಪನ್

ಇದನ್ನೆಲ್ಲಾ ನೋಡ್ತಿದ್ರೆ ನಮ್ಮ ಸೌತ್ ಸಿನಿಮಾಗಳು ಮಗದೊಮ್ಮೆ ಬಾಲಿವುಡ್ ಬಾಕ್ಸ್ ಆಫೀಸ್ ಮೇಲೆ ಸವಾರಿ ಮಾಡೋ ಸೂಚನೆ ಕೊಟ್ಟಿವೆ. ಈ ವರ್ಷ ತೆಲುಗು, ತಮಿಳು ಹಾಗೂ ಕನ್ನಡದಿಂದ ಐದಾರು ಬಿಗ್ ಬಜೆಟ್​ನ ವೆರೈಟಿ ಜಾನರ್ ಸಿನಿಮಾಗಳು ಬೆಳ್ಳಿಪರದೆ ಬೆಳಗೋಕೆ ತಯಾರಾಗ್ತಿವೆ. ಇದನ್ನ ಸರ್ಜಿಕಲ್ ಸ್ಟ್ರೈಕ್ 2.O ಅದ್ರೂ ತಪ್ಪಾಗಲ್ಲ. ಅಷ್ಟರ ಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿವೆ ರಿಲೀಸ್​ಗೆ ಸಜ್ಜಾಗ್ತಿರೋ ಸೌತ್ ಸೂಪರ್ ಸ್ಟಾರ್ಸ್​ ಸಿನಿಮಾಗಳು.

ಆ ಪೈಕಿ ಕಮಲ್ ಹಾಸನ್​ ಹಾಗೂ ಡೈರೆಕ್ಟರ್ ಶಂಕರ್ ಕಾಂಬಿನೇಷನ್​ನ ಇಂಡಿಯನ್-2 ಇದೇ ಜೂನ್ 13ಕ್ಕೆ ರಿಲೀಸ್ ಆಗ್ತಿದೆ. ಭ್ರಷ್ಟಾಚಾರದ ವಿರುದ್ದ ಮತ್ತೊಮ್ಮೆ ಗುಡುಗಲಿರೋ ಕಮಲ್​ರ ಈ ಚಿತ್ರಕ್ಕಾಗಿ ಬರೋಬ್ಬರಿ 250 ಕೋಟಿ ಬಂಡವಾಳ ಹೂಡಿದ್ದಾರೆ ನಿರ್ಮಾಪಕರು. ಇನ್ನು ಅಲ್ಲು ಅರ್ಜುನ್​ರ ಪುಷ್ಪ ಸೀಕ್ವೆಲ್ ಆಗಸ್ಟ್ 15ಕ್ಕೆ ತೆರೆಗಪ್ಪಳಿಸಲಿದ್ದು, 500 ಕೋಟಿ ಬಜೆಟ್​​ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡೋ ಲಕ್ಷಣ ತೋರಿದೆ.

ಜೂನಿಯರ್ ಎನ್​ಟಿಆರ್ ನಟನೆಯ ದೇವರ ಚಿತ್ರದ ಮೊದಲ ಭಾಗ ಅಕ್ಟೋಬರ್ 10ಕ್ಕೆ ರಿಲೀಸ್ ಆಗ್ತಿದ್ದು, 300 ಕೋಟಿ ಬಿಗ್ ಬಜೆಟ್​​ನ ಈ ಚಿತ್ರ ಅತೀವ ನಿರೀಕ್ಷೆ ಮೂಡಿಸಿದೆ. ಪ್ರಭಾಸ್, ಬಿಗ್​ಬಿ, ಕಮಲ್ ಹಾಸನ್ ಕಾಂಬೋನ ಕಲ್ಕಿ ಸಿನಿಮಾ 600 ಕೋಟಿಯಲ್ಲಿ ತಯಾರಾಗಿದ್ದು, ಆಂಧ್ರ ಎಲೆಕ್ಷನ್ಸ್ ಮುಗೀತಾ ಇದ್ದಂತೆ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ. ರಾಮ್ ಚರಣ್​ರ ಗೇಮ್ ಚೇಂಜರ್ ಕೂಡ 400 ಕೋಟಿ ಬೃಹತ್ ಮೊತ್ತದಲ್ಲಿ ತಯಾರಾಗಿದ್ದು, ಪ್ರೇಕ್ಷಕರನ್ನ ಕಾತುರಗೊಳಿಸಿದೆ.

ಇನ್ನು ನಮ್ಮ ಕನ್ನಡದ ಮಾರ್ಟಿನ್ ಸಿನಿಮಾ ಕೂಡ ಟೀಸರ್​ನಿಂದ ಪ್ಯಾನ್ ಇಂಡಿಯಾ ಪ್ರೇಕ್ಷಕರ ಗಮನ ಸೆಳೆದಿದೆ. 125 ಕೋಟಿ ವೆಚ್ಚದ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಬಾಕ್ಸ್ ಆಫೀಸ್​​ನಲ್ಲಿ ಮ್ಯಾಜಿಕ್ ಮಾಡೋದು ಕನ್ಫರ್ಮ್​. ಒಟ್ಟಾರೆ ಸೌತ್​​ನ ಈ ಎಲ್ಲಾ ಚಿತ್ರಗಳು ಹಿಂದಿ ಚಿತ್ರರಂಗವನ್ನು ಮತ್ತಷ್ಟು ಮಂಕಾಗಿಸಲಿದ್ದು, ಮತ್ತೆ ಪುಟಿದೇಳೋಕೆ ಬಿಟೌನ್ ಮಾಡ್ತಿರೋ ರಿವರ್ಸ್​ ಆಪರೇಷನ್​ನ ಕಾದು ನೋಡಬೇಕಿದೆ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES