Sunday, May 5, 2024

ಬೆಂಗಳೂರಿನಲ್ಲಿ ನಟ ಪ್ರಿನ್ಸ್ ಮಹೇಶ್ ಬಾಬು ಒಡೆತನದ ಮಲ್ಟಿಪ್ಲೆಕ್ಸ್ ಓಪನ್

ಫಿಲ್ಮ್ ಡೆಸ್ಕ್​: ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ ಬ್ಯುಸಿನೆಸ್​​ನ ಬೆಂಗಳೂರಿಗೂ ವಿಸ್ತರಿಸುತ್ತಿದ್ದಾರೆ. ನಟನೆ, ನಿರ್ಮಾಣದಲ್ಲಿ ತೊಡಗಿಸಿಕೊಳ್ತಿದ್ದ ಪ್ರಿನ್ಸ್, ಸದ್ಯ ರಾಜಮೌಳಿಯ ಬಹುನಿರೀಕ್ಷಿತ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೆ ತಮ್ಮ AMB ಸಿನಿಮಾಸ್​ನ ಹೈದ್ರಾಬಾದ್​​ನಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೂ ತರ್ತಿದ್ದಾರೆ. ಮೆಜೆಸ್ಟಿಕ್​​ನಲ್ಲಿ ತಲೆ ಎತ್ತುತ್ತಿರೋ ಐದು ಅಂತಸ್ತಿನ ಬೃಹತ್ ಕಟ್ಟಡವನ್ನ ಸಿದ್ದವಾಗುತ್ತಿದೆ.

48 ವರ್ಷದ ಪ್ರಿನ್ಸ್ ಮಹೇಶ್ ಬಾಬುಗೆ ಬರೀ ಆಂಧ್ರದಲ್ಲಷ್ಟೇ ಅಲ್ಲ, ಸೌತ್ ಇಂಡಿಯಾ ಸೇರಿದಂತೆ ದೇಶಾದ್ಯಂತ ಎಲ್ಲೆಡೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಸೂಪರ್ ಸ್ಟಾರ್ ಕೃಷ್ಣ ಅವರ ಮಗ ಅನ್ನೋದಕ್ಕಿಂತ ಹೆಚ್ಚಾಗಿ ನಮ್ಮ ಅಪ್ಪು ರೀತಿ 70ರ ದಶಕದಿಂದಲೇ ಚೈಲ್ಡ್ ಆರ್ಟಿಸ್ಟ್ ಆಗಿ ಬಣ್ಣದಲೋಕಕ್ಕೆ ಕಾಲಿಟ್ಟರು ಮಹೇಶ್ ಬಾಬು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋ ಮೂಲಕ ನಿರಂತರವಾಗಿ ಚಿತ್ರಪ್ರೇಮಿಗಳನ್ನ ರಂಜಿಸುತ್ತಲೇ ಇದ್ದಾರೆ.

ಶ್ರೀಮಂತುಡು, ಭರತ್ ಅನೆ ನೇನು, ಮಹರ್ಷಿ ಸಿನಿಮಾಗಳು ಬಹುದೊಡ್ಡ ಹಿಟ್ ಆದವು. ಅದರಲ್ಲಿ ಕಮರ್ಷಿಯಲ್ ಅಂಶಗಳ ಜೊತೆ ಸಾಮಾಜಿಕ ಕಳಕಳಿಯ ಅಂಶಗಳೂ ಇದ್ದವು. ಹಾಗಾಗಿ ಇವ್ರ ಸ್ಟಾರ್​​ಡಮ್ ಮತ್ತಷ್ಟು ಹೆಚ್ಚಿದೆ. ಸದ್ಯ ರಾಜಮೌಳಿ ಅಂತಹ ಗ್ರೇಟ್ ಡೈರೆಕ್ಟರ್ ಹಾಲಿವುಡ್ ಶೈಲಿಯ ಸಿನಿಮಾ ಮಾಡೋಕೆ ಪ್ರಿನ್ಸ್ ಜೊತೆ ಕೈ ಜೋಡಿಸಿದ್ದಾರೆ. ಅದಕ್ಕಾಗಿ ಹಗಲಿರುಳು ಎಫರ್ಟ್​ ಹಾಕಿ, ಮೌಳಿಗೆ ಸಾಥ್ ಕೊಡ್ತಿದ್ದಾರೆ ಮಹೇಶ್ ಬಾಬು.

ಇದನ್ನೂ ಓದಿ: ಅಮಿತಾಬ್ ಬಚ್ಚನ್​, ಎಆರ್​ ರೆಹಮಾನ್​ ಗೆ ಲತಾ ಮಂಗೇಶ್ಕರ್ ಪ್ರಶಸ್ತಿ ಪ್ರಧಾನ

ಬ್ಯುಸಿನೆಸ್​​ಮ್ಯಾನ್ ಚಿತ್ರದ ಈ ಸೀಕ್ವೆನ್ಸ್ ನೋಡಿದ್ರೆ ವ್ಹಾವ್ ಅನಿಸುತ್ತೆ. ಬ್ಯುಸಿನೆಸ್​​ನ ಮುಂಬೈನಿಂದ ಇಡೀ ದೇಶಾದ್ಯಂತ ಪ್ರಮುಖ ಸಿಟಿಗಳಿಗೆ ವಿಸ್ತರಿಸೋ ದೃಶ್ಯ ಮೈ ಜುಮ್ಮೆನಿಸುತ್ತೆ. ಇದು ರೀಲ್ ಆದ್ರೂ ಫ್ಯಾನ್ಸ್ ಇದನ್ನ ಕಂಡು ಶಿಳ್ಳೆ ಹಾಕಿ ಚಪ್ಪಾಳೆ ಹೊಡೆದಿದ್ರು. ಇದೀಗ ಅದೇ ರೀತಿ ರಿಯಲ್ ಲೈಫ್​ನಲ್ಲೂ ತಮ್ಮ ಬ್ಯುಸಿನೆಸ್​​​ನ ಬೇರೆ ಬೇರೆ ಸಿಟಿಗಳಿಗೆ ವಿಸ್ತರಿಸುತ್ತಿದ್ದಾರೆ ಮಹೇಶ್ ಬಾಬು. ಏಷಿಯನ್ ಸಿನಿಮಾಸ್ ಜೊತೆಗೂಡಿ AMB ಸಿನಿಮಾಸ್​ ಮಲ್ಟಿಪ್ಲೆಕ್ಸ್​​ನ ಹೈದ್ರಾಬಾದ್​​ನಲ್ಲಿ ಈಗಾಗ್ಲೇ ಆರಂಭಿಸಿದ್ರು ಪ್ರಿನ್ಸ್ ಬಾಬು.

ಅದು ಸಕ್ಸಸ್ ಆದ ಬೆನ್ನಲ್ಲೇ ನಮ್ಮ ಬೆಂಗಳೂರಿನಲ್ಲೂ AMB ಸಿನಿಮಾಸ್ ಶುರು ಮಾಡ್ತಿದ್ದಾರೆ. ಹೌದು.. ಮೆಜೆಸ್ಟಿಕ್​​ನ ಕಪಾಲಿ ಚಿತ್ರಮಂದಿರ ಇದ್ದ ಜಾಗವನ್ನು ಖರೀದಿಸಿ, ಅಲ್ಲಿ ಐದು ಅಂತಸ್ಥಿತ ಬೃಹತ್ ಕಟ್ಟಡ ನಿರ್ಮಿಸಿದ್ದಾರೆ. ಕಟ್ಟದ ನಿರ್ಮಾಣ ಕಾರ್ಯ ಕಂಪ್ಲೀಟ್ ಆಗಿದ್ದು, ಇಂಟೀರಿಯರ್ಸ್​ ಕಾರ್ಯ ಭರದಿಂದ ಸಾಗುತ್ತಿದೆ. ಈ ಕಟ್ಟಡದಲ್ಲಿ ಸುಮಾರು ಮೂರು ಐಶಾರಾಮಿ ಸ್ಕ್ರೀನ್ಸ್​​ ಸಿದ್ದವಾಗಲಿದ್ದು, ಎಲ್ಲಾ ಭಾಷೆಯ ಚಿತ್ರಗಳ ಪ್ರದರ್ಶನ ನಡೆಯಲಿದೆಯಂತೆ.

ಇತ್ತೀಚೆಗೆ ಕಟ್ಟದ ನಿರ್ಮಾಣ ಕಾರ್ಯ ಕಂಪ್ಲೀಟ್ ಆದ ಹಿನ್ನೆಲೆ ವಿಶೇಷ ಪೂಜೆ ನಡೆದಿದ್ದು, ಪೂಜೆಯಲ್ಲಿ ಮಹೇಶ್ ಬಾಬು ಗೈರಾಗಿದ್ದರೂ ಸಹ ಅವ್ರ ಪಾರ್ಟ್ನರ್ ಏಷಿಯನ್ ಸಿನಿಮಾಸ್ ಮಾಲೀಕ ಸುನಿಲ್ ನಾರಂಗ್ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಅವರಿಗೆ ನಮ್ಮ ಕನ್ನಡದ ಹೆಮ್ಮೆಯ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಕೂಡ ಸಾಥ್ ನೀಡಿದ್ದಾರೆ. ಮೆಜೆಸ್ಟಿಕ್​​​ನಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ಸ್​ ಒಂದೊಂದೇ ಮಾಯವಾಗ್ತಿದ್ದು, AMB ಸಿನಿಮಾಸ್ ನಂತಹ ಮಲ್ಟಿಪ್ಲೆಕ್ಸ್​ಗಳು ಬರ್ತಿರೋದು ನೋಡುಗರಿಗೆ ವಿಶೇಷ ಅನುಭವ ನೀಡಲಿದೆ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES