Monday, May 6, 2024

ಪ್ರಿಯಕರನ ಮೇಲೆಯೇ ಆಸಿಡ್ ಎರಚಿದ ಪ್ರಿಯತಮೆ

ಉತ್ತರ ಪ್ರದೇಶ : ಪ್ರಿಯಕರನ ಮೇಲೆ ಆತನ ಪ್ರಿಯತಮೆಯೇ ಆಸಿಡ್​ ಎರಚಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ.

ಆಸಿಡ್ ದಾಳಿಗೆ ಒಳಗಾದ ಯುವಕ ಹಾಗೂ ಯುವತಿ ಹಲವು ದಿನಗಳಿಂದ ಸಂಬಂಧದಲ್ಲಿದ್ದರು. ಇದು ವರನ ಕಡೆಯವರಿಗೆ ಇಷ್ಟವಾಗಿರಲಿಲ್ಲ.

ಯುವಕನ ಪೋಷಕರು ಕೆಲಸದ ನೆಪ ಹೇಳಿ ಆತನನ್ನ ಬೇರೆ ಊರಿಗೆ ಕಳುಹಿಸಿದ್ದರು. ಅಲ್ಲದೇ, ತಮ್ಮ ಪುತ್ರನಿಗೆ ಬೇರೆ ಯುವತಿಯೊಂದಿಗೆ ಮದುವೆ ಸಹ ಮಾಡಿಸಿಲು ಮುಂದಾಗಿದ್ದರು. ಈ ವಿಷಯ ತಿಳಿದ ಪ್ರಿಯತಮೆ ಕೆರಳಿ ಕೆಂಡವಾಗಿದ್ದಾಳೆ.

ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಿಯಕರನ ಮದುವೆ ಮೆರವಣಿಗೆ ನಡೆಯುವ ಸ್ಥಳಕ್ಕೆ ಯುವತಿ ಹೋಗಿದ್ದಾಳೆ. ವರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾಗ ಏಕಾಏಕಿ ಪ್ರಿಯಕರನ ಮುಖದ ಮೇಲೆ ಆಸಿಡ್​ ಎರಚಿದ್ದಾಳೆ. ಘಟನೆ ಬಳಿಕ ಪರಾರಿಯಾಗಲು ಯತ್ನಿಸಿದ ಯುವತಿಯನ್ನು ವರನ ಕಡೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ತಪ್ಪಿದ ಭಾರಿ ದುರಂತ, ಯುವಕ ಬಚಾವ್

ಅದೃಷ್ಟವಶಾತ್ ಈ ಘಟನೆಯಲ್ಲಿ ವರನಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ ಎಂದು ವರನ ಸಂಬಂಧಿಕರು ತಿಳಿಸಿದ್ದಾರೆ. ಕೂಡಲೇ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಾಗಲ್ ಪ್ರಿಯತಮೆಯನ್ನು ವಶಕ್ಕೆ ಪಡೆದಿದ್ದಾರೆ. ಯುವಕನ ತಾಯಿ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES