Monday, May 6, 2024

ಮೋದಿ ಗ್ಯಾರಂಟಿ ಸೋಲ್ತಾನೆ, ಅವನ ಪಾರ್ಟಿ ಸೋಲುತ್ತೆ : ಮಲ್ಲಿಕಾರ್ಜುನ ಖರ್ಗೆ ಭವಿಷ್ಯ

ಕಲಬುರಗಿ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಖಂಡಿತವಾಗಿ ಸೋತೆ ಸೋಲ್ತಾನೆ. ಅವನ ಪಾರ್ಟಿ ಸೋಲುತ್ತೆ ಎಂದು ಏಕವಚನದಲ್ಲೇ ಪ್ರಧಾನಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್​ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಅವನು ವಾರಣಾಸಿಯಲ್ಲಿ ಗೆಲ್ಲುವ ರೀತಿ ವಾತಾವರಣ ಮಾಡಿಕೊಂಡಿದ್ದಾನೆ. ಅಬ್ ಕಿ ಬಾರ್ 400 ಪಾರ್ ಅಂತಾ ಹೇಳ್ತಿದ್ದಾನೆ, 200 ಪಾರ್ ಕೂಡ ಬರಲ್ಲ ಎಂದು ಕುಟುಕಿದ್ದಾರೆ.

ಕಾಂಗ್ರೆಸ್ ನವರು ಬಂದರೆ ಮಂಗಳಸೂತ್ರ ಕಿತ್ತಿಕೊಳ್ಳತ್ತಾರೆ ಅಂತ ಹೇಳಿದ್ದಾರೆ. ನಾಚಿಕೆ ಆಗಬೇಕು ಇವರಿಗೆ, ನಾವು 55 ವರ್ಷ ದೇಶ ಆಳಿದ್ದೇವೆ. ಯಾರಿಂದ ಕಿತ್ತುಕೊಂಡು, ಯಾರಿಗೆ ಕೊಟ್ಟಿದ್ದೇವೆ ತೋರಿಸಲಿ. ಕಾಂಗ್ರೆಸ್​ನವರು ತಾಳಿ ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ ಎಂದು ಗುಡುಗಿದ್ದಾರೆ.

ಇಂದಿರಾ ಗಾಂಧಿ ತಾಳಿಯನ್ನೇ ಕೊಟ್ರು

ಇಂಡಿಯಾ ಹಾಗೂ ಪಾಕಿಸ್ತಾನ ಯುದ್ದದ ಸಂಧರ್ಭದಲ್ಲಿ ಎಲ್ಲವನ್ನು ತಂದು ಕೊಟ್ಟಿದ್ದೇವೆ. ಸೋನಿಯಾ ಗಾಂಧಿ ತಮ್ಮ ತಾಳಿಯನ್ನ ಕೊಟ್ಟರು. ಇಂದಿರಾ ಗಾಂಧಿ ತಮ್ಮ ತಾಳಿ ಸೇರಿದಂತೆ ಆಸ್ತಿ ಪಾಸ್ತಿ ಎಲ್ಲ ಕೊಟ್ಟರು. ರಾಹುಲ್ ಗಾಂಧಿಗೆ‌ ಮೆಂಬರ್ ಶಿಪ್ ಕೊಡಲಿಲ್ಲ. ರಾಜೀವ್ ಗಾಂಧಿ ಕುಟುಂಬದಲ್ಲಿ ರಾಜೀವ್ ಗಾಂಧಿ ಬಳಿಕ ಒಬ್ಬರೂ ಮುಖ್ಯಮಂತ್ರಿ, ಪ್ರಧಾನಿ ಆಗಿಲ್ಲ ಎಂದು ಹೇಳಿದ್ದಾರೆ.

ನಮ್ಮ ಪ್ರಣಾಳಿಕೆ ‘ಮುಸ್ಲಿಂ ಲೀಗ್’ ಅಂತಾರೆ

ಇತ್ತೀಚೆಗೆ ಮೋದಿ ಮತ್ತೊಂದು ಶುರು ಮಾಡಿದ್ದಾನೆ. ನಮ್ಮ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಪ್ರಣಾಳಿಕೆ ಅಂತ ಹೇಳ್ತಿದ್ದಾನೆ. ನೌಕರಿ ಘೋಷಣೆ ಮಾಡಿರೋದು ಬರೀ ಮುಸ್ಲಿಮರಿಗೆ ಮಾತ್ರ ಕೊಡ್ತಿದ್ದೆವಾ ಹೇಗೆ? ಮೋದಿ ಎಲ್ಲಿಗೆ ಕರೆದರು ಕೂಡ ಹೋಗಿ ಅವರಿಗೆ ನಮ್ಮ ಪ್ರಣಾಳಿಕೆ ಬಗ್ಗೆ ತಿಳಿಸ್ತೇನೆ. ಮೋದಿಗೆ ಪತ್ರ ಕೂಡ ಬರೆದಿದ್ದೇನೆ, ಅದು ಹೋಗಿ ಮುಟ್ಟಿದೆಯೋ? ಇಲ್ಲವೋ? ಗೊತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES