Wednesday, May 8, 2024

ಹಿರಿಯ ನಟ ಕರುನಾಡ ಕುಳ್ಳ ದ್ವಾರಕೀಶ್ ನಿಧನ

ಬೆಂಗಳೂರು : ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕರುನಾಡ ಕುಳ್ಳ, ಹಿರಿಯ ನಟ ದ್ವಾರಕೀಶ್ ಇಂದು ಕೊನೆಯುಸಿರೆಳೆದಿದ್ದಾರೆ. ಇವರಿಗೆ 81 ವರ್ಷ ವಯಸ್ಸಾಗಿತ್ತು. ಈ ಕುರಿತು ದ್ವಾರಕೀಶ್​ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ತಮ್ಮ ವಿಲಕ್ಷಣ ನಟನೆಯಿಂದಲೇ ರಾಜ್ಯದ ಜನತೆಯನ್ನು ರಂಜಿಸಿದ ದ್ವಾರಕೀಶ್​ ಅವರು ಇಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ನಟ,ನಿರ್ಮಾಪಕ, ನಿರ್ದೇಶಕರಾಗಿ ಅವರದ್ದೆ ಆದ ಕೊಡುಗೆಯನ್ನು ನೀಡಿದ್ದ ನಟ ಇಂದು ಹಸ್ತಂಗತರಾಗಿದ್ದು ಕನ್ನಡ ಚಿತ್ರರಂಗದ ಕೊಂಡಿ ಕಳಚಿದಂತಾಗಿದೆ. ಸ್ಯಾಂಡಲ್​ವುಡ್​ನ ಅಗ್ರಗಣ್ಯ ನಡರೊಂದಿಗೆ  400ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ದ್ವಾರಕೀಶ್ ಆಗಸ್ಟ್ 19, 1942ರಂದು ಮೈಸೂರಿನ ಹುಣಸೂರು ನಲ್ಲಿ ಶಮಾರಾವ್ ಮತ್ತು ಜಯಮ್ಮ ದಂಪತಿಯ ಪುತ್ರನಾಗಿ ಜನಿಸಿದರು, ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ CPC ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು, ನಂತರ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು. 1962ರಲ್ಲಿ, ಅವರು ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು. ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು.

RELATED ARTICLES

Related Articles

TRENDING ARTICLES