Thursday, May 2, 2024

ಐಟಿ ಭರ್ಜರಿ ಬೇಟೆ : ಒಂದೇ ಫ್ಲ್ಯಾಟ್​ನಲ್ಲಿ ಬರೋಬ್ಬರಿ 18 ಕೋಟಿ ರೂ. ಜಪ್ತಿ

ಧಾರವಾಡ : ಧಾರವಾಡದಲ್ಲಿ ಐಟಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಒಂದೇ ಫ್ಲ್ಯಾಟ್​ನಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಝಣ ಝಣ ಕಾಂಚಾಣ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಫುಲ್ ಅಲರ್ಟ್​ ಆಗಿದ್ದಾರೆ. ಇಂದು ಧಾರವಾಡದಲ್ಲಿ ದಾಳಿ ನಡೆಸಿದ್ದಾರೆ.

ಧಾರವಾಡದ ಧಾಸನಕೊಪ್ಪ ಸರ್ಕಲ್ ಬಳಿ ಇರುವ ಅರ್ಣ ರೇಸಿಡೆನ್ಸಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಮನೆಯ ಲಾಕರ್​​ನಲ್ಲಿ 18 ಕೋಟಿ ಹಣ ಪತ್ತೆಯಾಗಿದೆ.

ಸುಮಾರು 6 ವಾಹನಗಳಲ್ಲಿ ಬಂದ ಐಟಿ ಅಧಿಕಾರಿಗಳು ಬಸವರಾಜ್ ದತ್ತುನವರು ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ವೇಳೆ ಇದ್ದರು ಎನ್ನಲಾಗಿದೆ.

ಪತ್ತೆಯಾದ ಹಣ ಯಾರಿಗೆ ಸೇರಿದ್ದು?

ಮದ್ಯ ಸಂಗ್ರಹ ಇದೆ ಎಂಬ ಮಾಹಿತಿ ಮೇರೆಗೆ ಅರ್ನಾ ರೆಸಿಡೆನ್ಸಿಯ 3ನೇ ಮಹಡಿಯಲ್ಲಿರುವ ಬಸವರಾಜ್‌ ದತ್ತನವರ್‌ ಎನ್ನುವರ ಪ್ಲಾಟ್‌ ನಂ.303ರ ನಿವಾಸದ ಮೇಲೆ ದಾಳಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮದ್ಯ ಸಂಗ್ರಹ ಹುಡುಕುತ್ತಿದ್ದಾಗ ಬರೋಬ್ಬರಿ 18 ಕೋಟಿ ರೂ. ನಗದು ಹಣ ಪತ್ತೆಯಾಗಿದೆ.

RELATED ARTICLES

Related Articles

TRENDING ARTICLES