Friday, May 17, 2024

ವಿಚಾರಣೆಗೆ ಬರುವಂತೆ ರೇವಣ್ಣಗೆ ನೋಟೀಸ್​, ಬರದಿದ್ದರೇ ಬಂಧನ: ಗೃಹಸಚಿವ ಜಿ.ಪರಮೇಶ್ವರ್​

ಕಲಬುರಗಿ: ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿ ಎ1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರಿಗೆ 24 ಗಂಟೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್​ ನೀಡಲಾಗಿದೆ, ಹಾಜರಾಗದಿದ್ದರೇ ಬಂಧನ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್​ ತಿಳಿಸಿದ್ದಾರೆ.

ಕಲಬುರ್ಗಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಜ್ವಲ್​ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ, ಇವಾಗ ಇತರೇ ದೇಶಗಳಿಗೂ ಈ ವಿಷಯ ತಲುಪಿದೆ, ನೂರಾರು ಜನ ಮಹಿಳೆಯರಿಗೆ ಅನ್ಯಾಯವಾಗಿದೆ ಎಂದರು.

ಹಿಂದೆ ನಿಮ್ಮ ಗಮನಕ್ಕೆ ಬಂದಿಲ್ವಾ ಎಂದು ನೀವು ಕೇಳಬಹುದು? ಆದರೇ, ದೂರು ಯಾರು ನೀಡಿರಲಿಲ್ಲ, ಮಹಿಳಾ ಆಯೋಗದ ಗಮನಕ್ಕೆ ಬಂದ ತಕ್ಷಣ ದೂರು ನೀಡಿದ್ದಾರೆ. ತಕ್ಷಣ ಎಸ್​ಐಟಿ ರಚನೆ ಮಾಡಿ ತನಿಖೆ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ: Prajwal Revanna Pendrive Case: ಲುಕ್​ಔಟ್​ ನೋಟೀಸ್​ ಜಾರಿ

ಇನ್ನು ಪ್ರಕರಣ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಪ್ರಜ್ವಲ್​ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ. ಹೊರ ದೇಶಕ್ಕೆ ಹೋಗುವಾಗ ಕೇಂದ್ರ ಸರ್ಕಾರ ಅವರಿಗೆ ಡಿಪ್ಲೋಮೆಟಿಕ್​ ಪಾಸ್​ ಪೋರ್ಟ್​ ಕೊಟ್ಟಿದೆ, ಈ ಬಗ್ಗೆ ಹೆಚ್ಚಿನ ಪ್ರಶ್ನೆ ಮಾಡಲ್ಲ ಎಂದು ಹೇಳಿದರು.

ವಿಚಾರಣೆ ಹಾಜರಾಗುವಂತೆ ರೇವಣ್ಣಗೆ ನೋಟೀಸ್​:

ಈ ಪ್ರಕರಣಕ್ಕೆ ಸಂಬಂಧಿಸಿ ಎ1 ಆರೋಪಿ ಹೆಚ್​.ಡಿ ರೇವಣ್ಣ ಅವರಿಗೆ 41(a) ಸೆಕ್ಷನ್​ ಅಡಿ ನೊಟೀಸ್​ ಜಾರಿ ಮಾಡಲಾಗಿದೆ, 24 ಗಂಟೆಯ ಒಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು, ಹಾಜರಾಗದೇ ಇದ್ದರೇ ರೇವಣ್ಣ ಅವರನ್ನು ಬಂಧಿಸಲಾಗುತ್ತದೆ.

ಇದನ್ನೂ ಓದಿ: ಪ್ರಜ್ವಲ್‌ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಸಿಎಂ ಮನವಿ

ಪ್ರಜ್ವಲ್​ ಗೆ ಲುಕೌಟ್​ ನೋಟೀಸ್​:

ಪೆನ್​ಡ್ರೈವ್​ ಪ್ರಕರಣದ ಎ2 ಆರೋಪಿ ಪ್ರಜ್ವಲ್​ ರೇವಣ್ಣ ಅವರು ವಿದೇಶಕ್ಕೆ ತೆರಳಿರುವ ಹಿನ್ನೆಲೆ ಅವರಿಗೂ ಲುಕೌಟ್​ ನೋಟೀಸ್​ ಜಾರಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಲು ಪ್ರಜ್ವಲ್​ ಪರ ವಕೀಲರು ಕಾಲಾವಕಾಶ ಕೋರಿದ್ದಾರೆ, ಈ ಪ್ರಕರಣದಲ್ಲಿ ಸಮಯ ಕೊಡೋದಕ್ಕೆ ಸಾಧ್ಯವಿಲ್ಲ ಹಾಗಾಗಿ ಅವರನ್ನು ಅರೆಸ್ಟ್​ ಮಾಡಲು ಎಲ್ಲಾ ಕ್ರಮ ಕೈಗೊಳ್ಳಲು ಎಸ್​ಐಟಿ ಮುಂದುವರೆಯುತ್ತದೆ ಎಂದು ಸ್ಪಷ್ಟನೆ ನೀಡಿದರು.

ಪೆನ್​ಡ್ರೈವ್​ ಪ್ರಕರಣದ ಬಗ್ಗೆ ಸರ್ಕಾರ ಗಂಭೀರ ನಿಲುವು:

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಯಾರನ್ನು ರಕ್ಷಣೆ ಮಾಡೋದಕ್ಕೆ ಸಾಧ್ಯವೇ ಇಲ್ಲ, ಈ ಪ್ರಕರಣದಲ್ಲಿ ಇಬ್ಬರು ಮಹಿಳೆಯರಿಂದ ದೂರ ದಾಖಲಾಗಿದೆ, ಸಾವಿರಾರು ಮಹಿಳೆಯರು ಈ ವೀಡಿಯೋದಲ್ಲಿ ಇದ್ದಾರೆ ಹಾಗಾಗಿ ಈ ಕೇಸ್​ ಹೇಗೆ ಬೇಕೋ ಹಾಗೇ ಮಾಡೋದಕ್ಕೆ ಆಗೋದಿಲ್ಲ, ಸಂತ್ರಸ್ತೆಯರ ಕುಟುಂಬದ ಬಗ್ಗೆ ಕೂಡ ನಾವು ಆಲೋಚನೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES