Friday, May 17, 2024

ಪ್ರಜ್ವಲ್ 400 ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾನೆ : ರಾಹುಲ್ ಗಾಂಧಿ

ಶಿವಮೊಗ್ಗ : ಹಾಸನ ಸಂಸದ ಪ್ರಜ್ವಲ್ ರೇವಣ್ಣ 400 ಜನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದು ಕೇವಲ ಸೆಕ್ಸ್ ಸ್ಕ್ಯಾಂಡಲ್ ಅಲ್ಲ. ಇದು ಸಾಮೂಹಿಕ ಅತ್ಯಾಚಾರ ಕಾಂಡವಾಗಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪ್ರಜ್ವಲ್ ಕೃತ್ಯದ ವಿಡಿಯೋ ಕೂಡ ಮಾಡಿಕೊಂಡಿದ್ದಾನೆ. ಇದು ಬರೀ ಲೈಂಗಿಕ ಹಗರಣವಲ್ಲ, ಸಾಮೂಹಿಕ ಅತ್ಯಾಚಾರ. ಅತ್ಯಾಚಾರ ಮಾಡಿದ ಪ್ರಜ್ವಲ್ ರೇವಣ್ಣ ಜೊತೆಗೆ ಪ್ರಧಾನಮಂತ್ರಿ ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಅತ್ಯಾಚಾರಿ ಪ್ರಜ್ವಲ್​ನ ಸಮರ್ಥನೆ ಮಾಡಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣಗೆ ವೋಟು ಹಾಕಿದರೆ ನನಗೆ ಮತ ಹಾಕಿದಂತೆ ಅಂದಿದ್ದರು. ಬಿಜೆಪಿ ನಾಯಕರಿಗೆ ಪ್ರಜ್ವಲ್ ಅತ್ಯಾಚಾರಿ ಎನ್ನುವುದು ಗೊತ್ತಿತ್ತು. ಪ್ರಧಾನಿ ಮೋದಿಯವರು ಪ್ರಜ್ವಲ್ ಅವರ ಕೈ ಹಿಡಿದು ನಿಂತಿದ್ದರು ಎಂದು ಕುಟುಕಿದರು.

ಪ್ರಜ್ವಲ್ ರೇವಣ್ಣ ಪರ ಮತ ಕೇಳಲು ಬಂದ ಪ್ರಧಾನಿ ಬಗ್ಗೆಯೂ ದೇಶದ ಮಹಿಳೆಯರಿಗೆ ತಿಳಿಯಬೇಕು. ಬಿಜೆಪಿ ಹಾಗೂ ದೇಶದ ಮಹಿಳೆಯರಿಗೆ ಇದು ತಿಳಿಯಬೇಕು. ಪ್ರಜ್ವಲ್ ರೇವಣ್ಣ ಜೊತೆ ಪ್ರಧಾನಿ ವೇದಿಕೆ ಹಂಚಿಕೊಂಡಿದ್ದು ಇಡೀ ದೇಶಕ್ಕೆ ಗೊತ್ತಾಗಬೇಕು. ದೇಶದ ಎಲ್ಲಾ ಮಹಿಳೆಯರಲ್ಲಿ ಕೈ ಮುಗಿದು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಮೋದಿ ದೇಶದ ಜನರ ಕ್ಷಮೆ ಕೋರಬೇಕು

ಜಗತ್ತಿನಲ್ಲಿ ಯಾವ ರಾಜಕೀಯ ವ್ಯಕ್ತಿಯೂ ಈ ರೀತಿ ಮಾಡಿಲ್ಲ. ಸಾಮೂಹಿಕ ಅತ್ಯಾಚಾರ ಮಾಡಿದವರ ಪರವಾಗಿ ಮೋದಿ ಮತ ಕೇಳಿದ್ದಾರೆ. ಇದಕ್ಕೆ ಮೋದಿ ದೇಶದ ಜನರ ಕ್ಷಮೆ ಕೋರಬೇಕು. ಸಾಮೂಹಿಕ ಅತ್ಯಾಚಾರಿಗೆ ಮತಯಾಚಿಸಿದ್ದು ವಿಷಾಧವಿದೆ. ಅಧಿಕಾರಕ್ಕಾಗಿ ಬಿಜೆಪಿಯವರು ಏನೂ ಬೇಕಾದರೂ ಮಾಡುತ್ತಾರೆ ಎಂದು ಕಿಡಿಕಾರಿದರು.

ಪ್ರಜ್ವಲ್ ಓಡಿ ಹೋಗಲು ಬಿಟ್ಟಿದ್ದಾರೆ

ಸಾಮೂಹಿಕ ಅತ್ಯಾಚಾರಿಗೆ ದೇಶದಿಂದ ಓಡಿ ಹೋಗಲು ಬಿಟ್ಟಿದ್ದಾರೆ. ಎಲ್ಲಾ ರೀತಿಯ ಅಧಿಕಾರವಿದ್ದು, ಕಸ್ಟಮ್ಸ್, ಇಂಟಿಜೆನ್ಸಿ ವ್ಯವಸ್ಥೆ ಇದ್ದರೂ ಪ್ರಜ್ವಲ್ ರೇವಣ್ಣ ಓಡಿ ಹೋಗಲು ಬಿಟ್ಟಿದ್ದಾರೆ. ಇದು ದೇಶದ ಜನರಿಗೆ ತಿಳಿಯಬೇಕಿದೆ ಎಂದು ರಾಹುಲ್ ಗಾಂಧಿ ಹೇಳಿದರು.

RELATED ARTICLES

Related Articles

TRENDING ARTICLES