Friday, May 17, 2024

ಬಿಸಿಗಾಳಿ ಎಫೆಕ್ಟ್: ತೆಲಂಗಾಣದಲ್ಲಿ ಮತದಾನ ಸಮಯ ಬದಲಾವಣೆ

ಹೈದರಾಬಾದ್: ವಿಪರೀತ ಬಿಸಿಲು ಹಾಗೂ ಬಿಸಿ ಗಾಳಿಯ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಲೋಕಸಭಾ ಚುನಾವಣಾ ಮತದಾನದ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.

 

ರಾಜ್ಯದಲ್ಲಿ ಬಿಸಿ ಅಲೆ ಮತದಾರರ ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ, ಈ ಕುರಿತು ವಿವಿಧ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಂದ ಮನವಿ ಮಾಡಿಕೊಳ್ಳಲಾಗಿದೆ, ತೆಲಂಗಾಣ ಮುಖ್ಯ ಚುನಾವಣಾ ಅಧಿಕಾರಿಯ ಕೋರಿಕೆಯ ಮೇರೆಗೆ ಸಮಯವನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಪ್ರಕಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಇರುತ್ತದೆ.

ಏಳು ಹಂತದ ಚುನಾವಣೆಯ ನಾಲ್ಕನೇ ಸುತ್ತಿನಲ್ಲಿ ರಾಜ್ಯದ ಎಲ್ಲಾ 17 ಲೋಕಸಭಾ ಸ್ಥಾನಗಳಿಗೆ ಮೇ 13 ರಂದು ಮತದಾನ ನಡೆಯಲಿದೆ. ಮತದಾನದ ಸಮಯವು ಕರೀಂನಗರ, ನಿಜಾಮಾಬಾದ್, ಜಹೀರಾಬಾದ್, ಮೇದಕ್, ಮಲ್ಕಾಜ್‌ಗಿರಿ, ಸಿಕಂದರಾಬಾದ್, ಹೈದರಾಬಾದ್, ಚೆವೆಲ್ಲಾ, ಮಹಬೂಬ್‌ನಗರ, ನಾಗರ್‌ಕರ್ನೂಲ್ (SC), ನಲ್ಗೊಂಡ ಮತ್ತು ಭೋಂಗಿರ್ ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.

ಇದನ್ನೂ ಓದಿ: ವಿಚಾರಣೆಗೆ ಬರುವಂತೆ ರೇವಣ್ಣಗೆ ನೋಟೀಸ್​, ಬರದಿದ್ದರೇ ಬಂಧನ: ಗೃಹಸಚಿವ ಜಿ.ಪರಮೇಶ್ವರ್​

ಆದಿಲಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 5 ವಿಧಾನಸಭಾ ಕ್ಷೇತ್ರಗಳು, ಪೆದ್ದಪಲ್ಲೆ ಕ್ಷೇತ್ರದ 3 ಕ್ಷೇತ್ರಗಳು, ವಾರಂಗಲ್ (SC) ಕ್ಷೇತ್ರದಲ್ಲಿ 6, ಮಹಬೂಬಾಬಾದ್ (ST) ಕ್ಷೇತ್ರದಲ್ಲಿ 3 ಮತ್ತು ಖಮ್ಮಂ ಲೋಕಸಭಾ ಕ್ಷೇತ್ರದ 5 ಕ್ಷೇತ್ರಗಳು ನವೀಕರಿಸಿದ ಸಮಯಲ್ಲಿ ಮತದಾನ ಮಾಡಬಹುದಾಗಿದೆ.

ರಾಜ್ಯವು ಆದಿಲಾಬಾದ್, ಪೆದ್ದಪಲ್ಲೆ, ಕರೀಂನಗರ, ನಿಜಾಮಾಬಾದ್, ಜಹೀರಾಬಾದ್, ಮೇದಕ್, ಮಲ್ಕಾಜ್‌ಗಿರಿ, ಸಿಕಂದರಾಬಾದ್, ಹೈದರಾಬಾದ್, ಚೆವೆಲ್ಲಾ, ಮಹೆಬೂಬ್‌ನಗರ, ನಾಗರ್‌ಕರ್ನೂಲ್, ನಲ್ಗೊಂಡ, ಭೋಂಗಿರ್, ವಾರಂಗಲ್, ಮಹಬೂಬಾಬಾದ್ ಮತ್ತು ಖಮ್ಮಮ್ ಎಂಬ 17 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

RELATED ARTICLES

Related Articles

TRENDING ARTICLES