Friday, May 17, 2024

ಪ್ರಜ್ವಲ್‌ ರಾಸಲೀಲೆ- ಕುಟುಂಬಸ್ಥರ ಜೊತೆ HDD ಚರ್ಚೆ: ಎಸ್ ಐ ಟಿ ಮುಂದೆ ಹಾಜರಾಗ್ತಾರಾ ರೇವಣ್ಣ?

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ಸಂಬಂಧ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರು ತಮ್ಮ ಕುಟುಂಬಸ್ಥರ ಜೊತೆ ಚರ್ಚಿಸಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಚರ್ಚೆ ನಡೆದಿದೆ. ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್​​.ಡಿ. ರೇವಣ್ಣ ಜೊತೆ ಹೆಚ್‌.ಡಿ. ದೇವೇಗೌಡರು ಚರ್ಚೆ ನಡೆಸಿದ್ದಾರೆ. ತಮ್ಮ ಮುಂದಿನ ನಡೆ ಕಾನೂನು ಹೋರಾಟದ ಬಗ್ಗೆ ಕುಟುಂಬಸ್ಥರು ಸಭೆ ನಡೆಸಿದ್ದಾರೆ.

ಇದನ್ನೂ ಓದಿ: Prajwal Revanna Pendrive Case: ಲುಕ್​ಔಟ್​ ನೋಟೀಸ್​ ಜಾರಿ

ಎಸ್ ಐ ಟಿ ಮುಂದೆ ಹಾಜರಾಗ್ತಾರಾ ರೇವಣ್ಣ?

ಪ್ರಜ್ವಲ್ ರೇವಣ್ಣ ಕಾಮಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರ ಸಮಯ ಕೇಳಿದ್ದ ಪ್ರಜ್ವಲ್ ರೇವಣ್ಣ ಮನವಿಯನ್ನು ಎಸ್ ಐಟಿ ತಂಡ ತಿರಸ್ಕರಿಸಿದೆ. ತಕ್ಷಣವೇ ತನಿಖೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣಗೆ ಎಸ್ ಐಟಿ ಅಧಿಕಾರಿಗಳು ಖಡಕ್ ಸೂಚನೆ ರವಾನಿಸಿದ್ದಾರೆ.

ಎಸ್ ಐಟಿ ವಿಚಾರಣೆ ಬಳಿಕ ಪ್ರಜ್ವಲ್ ರೇವಣ್ಣನನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಈ ನಡುವೆ ತನಿಖೆಗೆ ಹಾಜರಾಗುವಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಎಸ್ ಐಟಿ ತಂಡ ನೊಟೀಸ್ ನೀಡಿದೆ. 24 ಗಂಟೆಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ಪೊಲೀಸರು ಹೆಚ್.ಡಿ.ರೇವಣ್ಣಗೆ ಸೂಚನೆ ನೀಡಿ, ರೇವಣ್ಣ ಮನೆ ಬಾಗಿಲಿಗೆ ಸಮನ್ಸ್ ಅಂಟಿಸಿ ಬಂದಿದ್ದರು. ಹಾಗಾಗಿ ಇಂದು ಅಥವಾ ನಾಳೆ ಹೆಚ್.ಡಿ.ರೇವಣ್ಣ ಅವರು ಎಸ್ ಐಟಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES