Thursday, May 2, 2024

‘ಸೋತಿದ್ದೀವಿ ಆದರೆ ಸತ್ತಿಲ್ಲ’, ಈ ರೀತಿ ಹೇಳೋಕೆ ದೇಹದಲ್ಲಿ ಉಸಿರಿಲ್ಲ : ಸಿಂಪಲ್ ಸುನಿ

ಬೆಂಗಳೂರು : ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ತವರು ಅಂಗಳದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲು ಅನುಭವಿಸಿದ್ದಕ್ಕೆ ನಿರ್ದೇಶಕ ಸಿಂಪಲ್ ಸುನಿ ಬೇಸರ ಹೊರಹಾಕಿದ್ದಾರೆ.

ಈ ಕುರಿತು ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ‘ಸೋತಿದ್ದೀವಿ ಆದರೆ ಸತ್ತಿಲ್ಲ’. ಈ ರೀತಿ ಹೇಳೋಕೆ ದೇಹದಲ್ಲಿ ಉಸಿರಿಲ್ಲ ಎಂದು ಹೇಳಿದ್ದಾರೆ.

ಮುಂದಿನ ಅಧ್ಯಾಯ, ಬದಲಾವಣೆ ಸಮಯ. Come Back Stronger Guys. ನಾವು ಬರೀ ಗೆಲ್ಲುವ RCB ಫ್ಯಾನ್ಸ್ ಅಲ್ಲ. ಆದರೆ, ಸದಾ ಸೋಲುವುದು ಸರಿ ಇಲ್ಲ. ಕಟ್ಟಕಡೆಯ ಪ್ರಶ್ನೆ? ಇವತ್ತು(ಇಂಟೆಂಟ್) ಬ್ಯಾಟ್ ಮಾಡಿದ ಹಾಗೆ 200 ಚೇಸ್​ಗೂ ಮಾಡಬಹುದಲ್ಲ ಅಂತ ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದುವರಿದು, RCB ತಂಡಕ್ಕೆ ಅಭಿನಂದನೆಗಳು. ಹೊಸ IPL ದಾಖಲೆಗಾಗಿ. ಐಪಿಎಲ್​ನಲ್ಲಿ ಚೇಸ್ ಮಾಡುವಾಗ ತಂಡವೊಂದರ ಗರಿಷ್ಠ ರನ್​ ದಾಖಲೆ RCB. 262 ರನ್​ಗಳು. ಸೆಲ್ಯೂಟ್ ದಿನೇಶ್​ ಕಾರ್ತಿಕ್ ಎಂದು ಸಿಂಪಲ್ ಸುನಿ ಬರೆದುಕೊಂಡಿದ್ದಾರೆ.

ದಿನೇಶ್ ಕಾರ್ತಿಕ್ ಬೆಂಕಿ ಬ್ಯಾಟಿಂಗ್

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ ಆರ್​ಸಿಬಿ ಸೋಲು ಅನುಭವಿಸಿತು. 288 ರನ್​ ಗುರಿ ಬೆನ್ನಟ್ಟಿದ ಆರ್​ಸಿಬಿ 7 ವಿಕೆಟ್ ನಷ್ಟಕ್ಕೆ 262 ರನ್​ ಗಳಿಸಿತು. ಆರ್​ಸಿಬಿ ಪರ ಬೆಂಕಿ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ 83, ನಾಯಕ ಡು ಪ್ಲೆಸಿಸ್ 62, ವಿರಾಟ್ ಕೊಹ್ಲಿ 42 ರನ್​ ಗಳಿಸಿದರು.

RELATED ARTICLES

Related Articles

TRENDING ARTICLES