Friday, May 17, 2024

ದುಬೈನಲ್ಲಿ ಮತ್ತೆ ಮಳೆ: ವಿಮಾನ ಹಾರಾಟದಲ್ಲಿ ವ್ಯತ್ಯಯ

ದುಬೈ: ಅರಬ್‌ ಸಂಯುಕ್ತ ಸಂಸ್ಥಾನ (UAE)ದಲ್ಲಿ ಎರಡು ವಾರಗಳ ನಂತರ ಮತ್ತೆ ಭಾರೀ ಮಳೆ ಸುರಿಯುತ್ತಿದೆ. ಹಲವಾರು ಅಂತಾರಾಷ್ಟ್ರೀಯ ವಿಮಾನಗಳ ರದ್ದತಿಗೆ ಇದು ಕಾರಣವಾಗಿದೆ.

ಏಪ್ರಿಲ್ ತಿಂಗಳಲ್ಲಿ ದುಬೈನಾದ್ಯಂತ ಸುರಿದ  ಮಳೆಯ ತೀವ್ರತೆಗಿಂತ ಈ ಮಳೆಯು ಕಡಿಮೆ ತೀವ್ರತೆಯಿಂದ ಕೂಡಿರಲಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. 1949 ರ ಬಳಿಕ ದುಬೈನಲ್ಲಿ ದಾಖಲೆಯ ಮಳೆಯಾಗಿದೆ. ಯುಎಇಯಾದ್ಯಂತ ಹವಾಮಾನ ವೈಪರೀತ್ಯವಾಗಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಪ್ರಮುಖ ನಗರಗಳಾದ್ಯಂತ ಭಾರೀ ಗಾಳಿ ಬೀಸುವುದರೊಂದಿಗೆ ಲಘು ಮಳೆ ಬೀಳುತ್ತಿದೆ. ಗುರುವಾರ ಮತ್ತು ಶುಕ್ರವಾರದಂದು ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯಗಳಿಗೆ ರಿಮೋಟ್ ವರ್ಕ್ ಸಿಸ್ಟಮ್‌ಗೆ ಸೂಚಿಸಲಾಗಿದೆ.
ಪ್ರವಾಹಪೀಡತ ಪ್ರದೇಶಗಳಿಂದ ದೂರ ಇರಲು ಸ್ಥಳೀಯರಿಗೆ ಸೂಚಿಸಲಾಗಿದೆ. ಈ ಪ್ರದೇಶಗಳಿಂದ ದೂರವಿರಲು ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ತಿಳಿಸಲಾಗಿದೆ. ಯುಎಇ ಪಶ್ಚಿಮ ಪ್ರದೇಶಗಳು, ಕರಾವಳಿ ಹಾಗೂ ಕೆಲವು ಪೂರ್ವ ಪ್ರದೇಶಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ, ಸಣ್ಣ ಆಲಿಕಲ್ಲು ಮಳೆಯಾಗಿದೆ.

RELATED ARTICLES

Related Articles

TRENDING ARTICLES