Thursday, May 2, 2024

ನನ್ನ ಹಾಗೂ ಅವರ ಬಗ್ಗೆ ಅನೇಕ ಗಾಸಿಪ್ ಇತ್ತು : ಕಹಿ ನೆನಪು ಬಿಚ್ಚಿಟ್ಟ ನಟಿ ಭವ್ಯ

ಬೆಂಗಳೂರು : ನನಗೆ ಒಂದು ಬ್ರೇಕ್, ಸ್ಟಾರ್ ಡಂ ಸಿಕ್ಕಿದೆ ಅವರ ಸಿನಿಮಾದಿಂದ. ದೇವರಾಗಿ ಬಂದು ನನಗೆ ಆ ಅವಕಾಶ ಕೊಟ್ಟರು ಎಂದು ಹಿರಿಯ ನಟಿ ಭವ್ಯ ಹೇಳಿದ್ದಾರೆ.

ದ್ವಾರಕೀಶ್​ ಪಾರ್ಥಿವ ಶರೀರ ದರ್ಶನ ಪಡೆದ ಬಳಿಕ ಮಾತನಾಡಿ, ಏನು ಮಾತನಾಡಬೇಕು ಗೊತ್ತಗ್ತಿಲ್ಲ. ಅವರೊಂದು ಸಿನಿಮಾ ರಂಗಕ್ಕೆ ಶಕ್ತಿ ಇದ್ದಂತೆ. ನಟರಾಗಿ, ನಿರ್ದೇಶಕ, ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಒಂದು ಪರಿಪೂರ್ಣ ಜೀವನ ನಡೆಸಿಕೊಂಡು ಬಂದವರು. ಇವತ್ತು ನಮ್ಮನ್ನ ಅಗಲಿದ್ದಾರೆ. ಅವರೊಂದು ಹೆಮ್ಮೆ. ವಿದೇಶದಲ್ಲಿ ಸಿನಿಮಾ ಶೂಟ್ ಮಾಡಿದ್ದಾರೆ. ಅವರ ಬ್ಯಾನರ್‌ನಲ್ಲಿ‌ ಕೆಲಸ ಮಾಡೋದು ಅಂದ್ರೆ ಒಂದು ಭಾಗ್ಯ. ಅವರು ಒಂದು ದಿನ ಕಾಲ್ ಮಾಡಿ ಒಂದು ಸಿನಿಮಾ ತೆಗಿತಾ ಇದ್ದೀನಿ. ನೀನು ಅದರಲ್ಲಿ ಆ್ಯಕ್ಟ್ ಮಾಡ್ಬೇಕು ಅಂತ ಬಹಳ ಆತ್ಮೀಯವಾಗಿ ಮಾತನಾಡಿದ್ದರು. ಅದನ್ನ ಪ್ರತಿದಿನ ಪ್ರತಿಕ್ಷಣ ನೆನಪು ಮಾಡಿಕೊಳ್ಳುತ್ತೀನಿ‌ ಎಂದು ಹೇಳಿದ್ದಾರೆ.

ಇಬ್ಬರ ಬಗ್ಗೆ ಅನೇಕ ಗಾಸಿಪ್‌ ಬಂತು

ನನಗೆ ಒಂದು ಬ್ರೇಕ್, ಸ್ಟಾರ್ ಡಂ ಸಿಕ್ಕಿದೆ ಅವರ ಸಿನಿಮಾದಿಂದ. ನಿಜವಾಗಲೂ ಆರ್ಟಿಸ್ಟ್‌ಗಳಿಗೆ ಅಂತ ಕ್ಯಾರೆಕ್ಟರ್ ಸಿಗೋದು ಕಷ್ಟ. ಆದರೆ, ದೇವರಾಗಿ ಬಂದು ನನಗೆ ಆ ಅವಕಾಶ ಕೊಟ್ಟರು. ಆದಾದ ಮೇಲೆ ಅನೇಕ ಗಾಸಿಪ್‌ ಬಂತು. ಆದರೂ ಅದ್ಯಾವುದಕ್ಕೂ ಅವರು ತಲೆ ಕಡಿಸಿಕೊಂಡಿರಲಿಲ್ಲ. ಕಳೆದ ವರ್ಷ ಅವರ ಹುಟ್ಟುಹಬ್ಬವನ್ನ ಆಚರಿಸಿದ್ವಿ. ಆದರೆ, ಇವತ್ತು ನಮ್ಮನ್ನ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನಟಿ ಭವ್ಯ ಭಾವುಕರಾಗಿದ್ದಾರೆ.

RELATED ARTICLES

Related Articles

TRENDING ARTICLES