Sunday, May 5, 2024

ಐತಿಹಾಸಿಕ ಬೆಂಗಳೂರು ಕರಗಕ್ಕೆ ಕ್ಷಣಗಣನೆ

ಬೆಂಗಳೂರು : ಐತಿಹಾಸಿಕ ಬೆಂಗಳೂರು ಕರಗಕ್ಕೆ ಕ್ಷಣಗಣನೆ ಶುರುವಾಗಿದ್ದು, ನಾಳೆಯಿಂದ 23ರವರೆಗೆ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ ನಡೆಯಲಿದೆ.

ಏಪ್ರಿಲ್ 23ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದ್ದು. ಈ ಬಾರಿಯೂ ಕರಗದ ಪೂಜಾರಿ ಎ. ಜ್ಞಾನೇಂದ್ರ ಕರಗವನ್ನ ಹೊರಲಿದ್ದಾರೆ. ಸತತ ಹದಿಮೂರನೇ ಬಾರಿ ಬೆಂಗಳೂರು ಕರಗವನ್ನ ಹೊರುತ್ತಿರುವ ಎ.ಜ್ಞಾನೇಂದ್ರ ಸ್ವಾಮಿಯವರನ್ನ ಮುಜರಾಯಿ ಇಲಾಖೆ ಹಾಗೂ ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಆಯ್ಕೆ ಮಾಡಿದೆ.

ಇದನ್ನೂ ಓದಿ: ಮೋದಿ, ಶ್ರೀರಾಮನ ಅಲೆ ಯಾವುದು ಇಲ್ಲ : ಸಿಎಂ ಸಿದ್ದರಾಮಯ್ಯ ಸ್ಫೋಟಕ ಸಂದರ್ಶನ

ನಾಳೆ ರಾತ್ರಿ 10ಕ್ಕೆ ರಥೋತ್ಸವ ಧ್ವಜಾರೋಹಣ ನಡೆಯಲಿದ್ದು. ಏಪ್ರಿಲ್ 16 ರಿಂದ 19ರವೆಗೂ ಪ್ರತಿ ದಿನ ವಿಶೇಷ ಪೂಜೆ ಮತ್ತು ಮಂಗಳಾರತಿ ನಡೆಯಲಿದೆ. ಇನ್ನು, ಏಪ್ರಿಲ್ 21ಕ್ಕೆ ಹಸಿ ಕರಗ ಆಯೋಜಿಸಲಾಗಿದೆ. ಏಪ್ರಿಲ್ 23 ರಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯ ಸ್ವಾಮಿ ರಥೋತ್ಸವ ನಡೆಯಲಿದ್ದು. ಏಪ್ರಿಲ್ 24ರಂದು ದೇವಸ್ಥಾನದಲ್ಲಿ ಗಾವು ಪೂಜೆ ಹಾಗೂ ಏಪ್ರಿಲ್ 25ಕ್ಕೆ ಕೊನೆಯ ದಿನದ ವಸಂತೋತ್ಸವ ಧ್ವಜಾರೋಹಣ ನಡೆಯಲಿದೆ.

RELATED ARTICLES

Related Articles

TRENDING ARTICLES