Friday, May 3, 2024

ಮಾತೃಪಕ್ಷ ಬಿಜೆಪಿಗೆ ಮರಳಿದ ನಿತಿನ್ ಗುತ್ತೇದಾರ್ : ತಮ್ಮನ ನಡೆಗೆ ಮಾಲೀಕಯ್ಯ ಗುತ್ತೇದಾರ್ ಕೆಂಡಾಮಂಡಲ

ಬೆಂಗಳೂರು : ಲೋಕಸಭಾ ಚುನಾವಣೆ ಸನ್ನಿಹದಲ್ಲೇ ರಾಜ್ಯ ರಾಜಕಾರಣದಲ್ಲಿ ಆಪರೇಷನ್‌ಗಳು ಭರ್ಜರಿಯಾಗಿ ನಡೆತೀದೆ. ಸಾಲು ಸಾಲು ಆಪರೇಷನ್ ಮಾಡಿದ್ದ ಕಾಂಗ್ರೆಸ್‌ಗೆ ಇದೀಗ ಬಿಜೆಪಿ ಒಂದಾದ ಮೇಲೊಂದು ಶಾಕ್ ನೀಡಿದೆ. ಆಪರೇಷನ್ ಹಸ್ತಕ್ಕೆ ಕಮಲ ರಿವರ್ಸ್ ಆಪರೇಷನ್ ಮಾಡಿದೆ.

ಅಣ್ಣನಿಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ನಿತಿನ್ ಗುತ್ತೇದಾರ್ ಇಂದು ಮತ್ತೆ ತನ್ನ ಮಾತೃಪಕ್ಷ ಬಿಜೆಪಿಗೆ ಮರಳಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ನಿತಿನ್ ಗುತ್ತೇದಾರ್‌ ಬಿಜೆಪಿ ಸೇರ್ಪಡೆಗೊಂಡರು.

ಇದೇ, ವೇಳೆ ಮಾತನಾಡಿದ ವಿಜಯೇಂದ್ರ, ನಿತೀನ್ ಸೇರ್ಪಡೆ ಪಕ್ಷಕ್ಕೆ ದೊಡ್ಡ ಶಕ್ತಿ ತಂದುಕೊಟ್ಟಿದೆ ಎಂದರು. ಇನ್ನು, ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ನಿತಿನ್ ಗುತ್ತೇದಾರ್, ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವುದರ ಮೂಲಕ ರಾಜ್ಯಾಧ್ಯಕ್ಷರ ‘ಕೈ’ ಬಲಪಡಿಸೋಣ ಎಂದು ಹೇಳಿದರು.

ಆಪರೇಷನ್‌ ಹಸ್ತಕ್ಕೆ, ಕಮಲ ರಿವರ್ಸ್ ಆಪರೇಷನ್..!

ಇತ್ತ ಮೈಸೂರಿನಲ್ಲಿ ಕೈ ಆಪರೇಷನ್‌ಗೆ ಕಮಲ ರಿವರ್ಸ್ ಆಪರೇಷನ್ ಮಾಡಿದ್ದು, ಸಿಎಂ ಸ್ವಕ್ಷೇತ್ರದ ಲಿಂಗಾಯತ ಮುಖಂಡನಿಗೆ ಬಿಜೆಪಿ ಗಾಳ ಹಾಕಿದೆ. ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ. ಸದ್ಯ, ಸಿಎಂ ಸಿದ್ದರಾಮಯ್ಯ ಗೆಲುವಿಗೆ ಶ್ರಮಿಸಿದ್ದರೂ, ನನ್ನನ್ನ ಯಾರೂ ಗುರುತಿಸಿಲ್ಲ ಎಂದು ಗುರುಪಾದಸ್ವಾಮಿ ಅಸಮಧಾನಗೊಂಡಿದ್ದರು. ಇದನ್ನೇ ಲಾಭವನ್ನಾಗಿಸಿಕೊಂಡ ಬಿಜೆಪಿ, ಲಿಂಗಾಯತ ನಾಯಕನನ್ನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಾಯಕರು

ಇನ್ನು, ಚಿಕ್ಕಮಗಳೂರಿನಲ್ಲೂ ಪ್ರಬಲ ನಾಯಕರು ಕೈ ತೊರೆದು ಬಿಜೆಪಿ ಸೇರಿದ್ದು, ಕಾಂಗ್ರೆಸ್‌ಗೆ ಮತ್ತೊಂದು ಶಾಕ್ ನೀಡಿದ್ದಾರೆ. ತರೀಕೆರೆ ಕಾಂಗ್ರೆಸ್ ಮಾಜಿ ಶಾಸಕ ಎಸ್​.ಎಂ. ನಾಗರಾಜು ಹಾಗೂ ಮುಖಂಡ ಧ್ರುವ ಕುಮಾರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರಚಾರದ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿ.ಟಿ. ರವಿ ಸಮ್ಮುಖದಲ್ಲಿ ಹಲವು ಕೈ ಮುಖಂಡರು ಹಾಗೂ ನಾಗರಾಜು ಬೆಂಬಲಿಗರು ಕೂಡ ಬಿಜೆಪಿ ಸೇರ್ಪಡೆಯಾದರು.

RELATED ARTICLES

Related Articles

TRENDING ARTICLES