Thursday, May 2, 2024

ಯುಗಾದಿ ಹಬ್ಬ : ನಾಡಿನ ಜನತೆಗೆ ಸಿದ್ಧಲಿಂಗ ಸ್ವಾಮೀಜಿ ಸಂದೇಶ

ಬೆಂಗಳೂರು : ಶ್ರೀ ಕ್ರೋಧಿನಾಮ ಸಂವತ್ಸರ ಸಕಲ ಶಿಷ್ಯವೃಂದಕ್ಕೆ, ಭಕ್ತವೃಂದಕ್ಕೆ ಸನ್ಮಂಗಳವನ್ನು ಉಂಟುಮಾಡಲಿ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಶುಭ ಹಾರೈಸಿದ್ದಾರೆ.

ಈ ಕುರಿತು ಪವರ್​ ಟಿವಿಗೆ ಪ್ರತಿಕ್ರಿಯಿಸಿರುವ ಶ್ರೀಗಳು, ತಮ್ಮ ಆತ್ಮೀಯ ಶಿಷ್ಯವೃಂದ ಮತ್ತು ಭಕ್ತವೃಂದಕ್ಕೆ ಶ್ರೀ ಕ್ರೋಧಿ ನಾಮ ಸಂವತ್ಸರದ ಶುಭಾಷಯಗಳನ್ನು ಕೋರಿದ್ದಾರೆ.

ಈ ಯುಗಾದಿ ಕ್ರೋಧಿ ನಾಮ ಸಂವತ್ಸರದಲ್ಲಿ ಸಂತೋಷ, ಕೀರ್ತಿ, ಯಶಸ್ಸಗಳನ್ನು ಪಡೆಯೋಣ. ಬೇವು-ಬೆಲ್ಲವನ್ನು ಸ್ವೀಕರಿಸುತ್ತಾ ಸುಖ-ದುಃಖಗಳನ್ನು ಧರ್ಮ ಮಾರ್ಗದಿಂದ ಸ್ವೀಕರಿಸೋಣ ಎಂದು ಸಲಹೆ ನೀಡಿದ್ದಾರೆ.

ನಮ್ಮ ಮನದಲ್ಲಿ ಇರುವ ಅತ್ಯಂತ ಬಲಿಷ್ಠ ಶತ್ರುವಾದ ಕ್ರೋಧವನ್ನು, ಅಸೂಯೆ, ದುಃಖ, ಅಹಂಕಾರವನ್ನು, ಭಯ, ಅಪನಿಂದನೆ, ಅಪವಾದಗಳನ್ನು, ಮಾನಸಿಕ ಜನ್ನತೆ, ತನ್ನ ಬಗ್ಗೆ ತನಗೆ ಇರುವ ಕೀಳು ಭಾವನೆಯನ್ನು ಮತ್ತು ಇನ್ನೂ ಮುಂತಾದ ನಮ್ಮ ದೇಹದಲ್ಲಿ ನಮಗೇ ಗೊತ್ತಾಗದಂತೆ ಇರುವ ಅರಿಷಡ್ವರ್ಗಗಳೆಂಬ ರಾಕ್ಷಸರನ್ನು (ದುಷ್ಟ ಶತ್ರುಗಳನ್ನು) ಪರಿತ್ಯಜಿಸಿ, ಬಲಿಷ್ಟ ಮಿತ್ರರಾದ ಶಾಂತಿ, ಸಮಾಧಾನ. ನೆಮ್ಮದಿ, ವಿಜಯ ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು ನುಡಿದ್ದಾರೆ.

ಶ್ರೀಮಠದಲ್ಲಿ ಶ್ರೀ ಸಿದ್ಧಲಿಂಗೇಶ್ವರರ ಸಂಕಲ್ಪ

ಜೀವನದಲ್ಲಿ ಸಾಧನೆಯನ್ನು ಮಾಡಬೇಕೆಂದು ಹಂಬಲಿಸುತ್ತಿರುವರಿಗೆ ಈ ಯುಗಾದಿಯ ಪ್ರಯುಕ್ತ ಶ್ರೀ ಮಠದಲ್ಲಿ ಇಂದು (ಏಪ್ರಿಲ್ 9) ‘ಶ್ರೀ ಸಿದ್ಧಲಿಂಗೇಶ್ವರರ ಸಂಕಲ್ಪ’ವನ್ನು ಹಮ್ಮಿಕೊಳ್ಳಲಾಗಿದೆ. ತಾವುಗಳಲ್ಲದೇ ತಮ್ಮ ಬಂಧು-ಮಿತ್ರರನ್ನು, ಇತರರನ್ನು ಕರೆ ತನ್ನಿ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES