Wednesday, May 8, 2024

ಅಪ್ಪಿ ತಪ್ಪಿಯೂ ಬಿಜೆಪಿಗೆ ವೋಟು ಹಾಕಬೇಡಿ : ಈಶ್ವರಪ್ಪ

ಶಿವಮೊಗ್ಗ : ಅಪ್ಪಿ ತಪ್ಪಿಯೂ ಬಿಜೆಪಿಗೆ ವೋಟು ಹಾಕಬೇಡಿ ಎಂದು ಬಿ.ವೈ. ರಾಘವೇಂದ್ರ ಹೆಸರೇಳದೆಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ನಾಯಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಿಂದೂತ್ವವನ್ನು ತುಳಿಯುತ್ತಿದೆ. ಹಿಂದುತ್ವ ಉಳಿವಿಗಾಗಿ ನಾನು ಚುನಾವಣೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ಸಂಸ್ಕೃತಿ ರಾಜ್ಯದಲ್ಲಿ ಬಂದಿದೆ, ಅಪ್ಪ-ಮಕ್ಕಳ ಕೈಯಲ್ಲಿ ಸಿಕ್ಕಿ ಬಿಜೆಪಿ ಒದ್ದಾಡುತ್ತಿದೆ. ಪ್ರತಿ ಬೂತ್ ನಲ್ಲಿ ಈಶ್ವರಪ್ಪ ನವರಿಗೆ ಹೆಚ್ಚಿನ ಬಹುಮತ ಕೊಡಬೇಕು. ಅಪ್ಪಿ ತಪ್ಪಿಯೂ ಬಿಜೆಪಿಗೆ ವೋಟ್ ಹಾಕಬೇಡಿ. ನಾನು ಈಗ ಪಕ್ಷೇತರರ ಸ್ಪರ್ಧಿಸುತ್ತಿದ್ದೇನೆ. ನಾನು ಸಾಯುವವರೆಗೆ ಬಿಜೆಪಿ ಮೋದಿ ಪರವಾಗಿರುತ್ತೇನೆ ಎಂದು ತಿಳಿಸಿದರು.

ನಿಮ್ಮಣ್ಣ ಸೋಲುತ್ತಾನೆ ಅಂತ ಭಯನಾ?

ರಾಘವೇಂದ್ರ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ತಾರೆ, ಈಗಲೂ ಕಾಲ ಮಿಂಚಿಲ್ಲ ಈಶ್ವರಪ್ಪ ಯೋಚನೆ ಮಾಡಲಿ ವಿಜಯೇಂದ್ರ‌ ಹೇಳಿಕೆಗೆ ತಿರುಗೇಟು ನೀಡಿದರು. ಈ ವಿಷಯ ನಿಮ್ಮ ಅಣ್ಣನಿಗೆ ಏಕೆ ಹೇಳಲ್ಲ, ತಾಕತ್ ಇಲ್ವಾ? ಏನು ನೀವೆ ಗೂಟ ಹೊಡ್ಕೊಂಡು ಇರಬೇಕಾ? ನಿಮ್ಮಣ್ಣ ಸೋಲುತ್ತಾನೆ ಅಂತ ಭಯನಾ? ನಿಮ್ಮಣ್ಣನಿಗೆ ಹೇಳು. ಈಶ್ವರಪ್ಪ ಗೆಲ್ಲಲ್ಲಿ ಬಿಡು, ನೀನು ವಾಪಸ್ ತೆಗೆದುಕೋ ಅಂತಾರಾಘವೇಂದ್ರ ಅವರಿಗೆ ಹೇಳು ಎಂದು ಕುಟುಕಿದರು.

ಮೋದಿ ನನ್ನ ಹೃದಯದಲ್ಲಿ ‌ಇದ್ದಾರೆ

ನಾನು ಈಗಲೂ ಕೂಡಾ ಬಿಜೆಪಿ. ನಾನು ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ. ನಾನು ಸ್ಪರ್ಧೆ ಮಾಡಿದರೆ ಬಿಜೆಪಿಯವರು ಏನು ಮಾಡಬಹುದು ಉಚ್ಚಾಟನೆ ಮಾಡಬಹುದು. ಅಷ್ಟೇ ತಾನೇ‌ ಇನ್ನೇನೂ ಮಾಡಲು ಸಾಧ್ಯ? ನಾನೇನು ಪಕ್ಷ ಬಿಟ್ಟು ಹೋಗಿದ್ದೇನಾ? ಮೋದಿ ವಿಶ್ವ ನಾಯಕ, ಮೋದಿ ಫೋಟೋ ಬಳಸಿಕೊಳ್ಳಬಾರದು ಅಂತ ಎಲ್ಲಿಯೂ ಇಲ್ಲ. ಮೋದಿ ನನ್ನ ಹೃದಯದಲ್ಲಿ ‌ಇದ್ದಾರೆ. ಅವರು ಕೇಸು ಹಾಕಿಕೊಳ್ಳುತ್ತಾರೆಂದೆ ನಾನು ಕೇವಿಯೇಟ್ ಹಾಕಿದ್ದೇನೆ ಎಂದು ಕೆ.ಎಸ್. ಈಶ್ವರಪ್ಪ ಹರಿಹಾಯ್ದರು.

RELATED ARTICLES

Related Articles

TRENDING ARTICLES