Sunday, May 19, 2024

ಇದು ಕಾಂಗ್ರೆಸ್ ಮೈತ್ರಿ ಅವಧಿಯ ವಿಡಿಯೋ ಅಂತ ಮೋದಿ ಹೇಳಿದ್ದಾರೆ : ಸಚಿವ ಪರಮೇಶ್ವರ್

ಬೆಂಗಳೂರು : ಕುಮಾರಸ್ವಾಮಿ ಅವರು ಇಂತಹ ಸಂದರ್ಭದಲ್ಲಿ ಕೋಪಗೊಳ್ಳುವುದು, ಅಸಮಾಧಾನಗೊಳ್ಳೋದು ಸಹಜ. ನನ್ನ ಮೇಲೂ ಕೋಪಗೊಂಡು ಮಾತಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್​ಐಟಿ ಅಂತಹ ಕಾನೂನಾತ್ಮಕ ಸಂಸ್ಥೆ ಮೇಲೆ ಅನುಮಾನ ಪಟ್ಟರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯ ಸರ್ಕಾರಕ್ಕೆ ಒಂದು ಜವಬ್ದಾರಿ ಇದೆ. ಇಂತಹ ಘಟನೆಯನ್ನು ಲೈಟ್​ ಆಗಿ ತಗೆದುಕೊಳ್ಳಲು ಆಗಲ್ಲ. ಕುಮಾರಸ್ವಾಮಿ ಅವರಿಗೂ ಗೊತ್ತು, ಅವರು ಮುಖ್ಯಮಂತ್ರಿ ಆಗಿದ್ದವರು. ವಕೀಲ ದೇವರಾಜೇಗೌಡ ಆರೋಪಕ್ಕೆ ನಾವು ಏನು ಹೇಳೋಕೆ ಆಗಲ್ಲ. ಎಲ್ಲವನ್ನೂ ಎಸ್​ಐಟಿಯವರು ಗಮನಿಸುತ್ತಾರೆ. ಪೆನ್​ಡ್ರೈವ್ ಮೂಲ ಎಲ್ಲವನ್ನೂ ಎಸ್​ಐಟಿ ಗಮನಹರಿಸುತ್ತದೆ ಎಂದು ತಿಳಿಸಿದ್ದಾರೆ.

ಅನುಮಾನ ಪಡುವುದು ಬೇಡ, ಸರ್ಕಾರ‌ ಸರಿಯಾಗಿ ನಿಭಾಯಿಸುತ್ತಿದೆ. ಡಿ.ಕೆ. ಶಿವಕುಮಾರ್ ಹಾಗೂ ಸರ್ಕಾರದ ವಿರುದ್ಧ ಆರೋಪ ಏನೇ ಇದ್ದರೂ ಎಸ್​ಐಟಿ ತನಿಖೆಯಲ್ಲಿ ಗೊತ್ತಾಗುತ್ತದೆ. ಇದು ಕಾಂಗ್ರೆಸ್ ಮೈತ್ರಿ ಅವಧಿಯ ವಿಡಿಯೋ ಎಂದು ಪ್ರಧಾನಿ ಹೇಳಿದ್ದಾರೆ. ನೋಡೋಣ ಅದು ಯಾವ ಅವಧಿಯಲ್ಲಿ ಆಗಿದ್ದು ಅಂತ. ಎಸ್​ಐಟಿ ತನಿಖೆಯಲ್ಲಿ ಅದೂ ಗೊತ್ತಾಗಲಿದೆ ಎಂದು ಕುಟುಕಿದ್ದಾರೆ.

ನಮಗೆ ಎಸ್​ಐಟಿ ಮಾಹಿತಿ ತಿಳಿಸಲ್ಲ

ಒಮ್ಮೆ‌ ಪ್ರಕರಣದ ತನಿಖೆ ಮುಗಿದ ಮೇಲೆ ಅದು ಪಬ್ಲಿಕ್ ಡೊಮೈನ್​ಗೆ ಬರುತ್ತದೆ. ಯಾವುದನ್ನು ಮುಚ್ಚಿಡಲು ಆಗಲ್ಲ. ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿರಬಹುದು. ಆದರೆ, ನಮಗೆ ಅವರು ಆ ಮಾಹಿತಿ ತಿಳಿಸಲ್ಲ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES