ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕಾಮಕಾಂಡವನ್ನು ಮಾಜಿ ಕಾರು ಚಾಲಕ ಕಾರ್ತಿಕ್ ಬಿಚ್ಚಿಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಅದೆಷ್ಟರ ಮಟ್ಟಿಗೆ ಕಾಮಿಯಾಗಿದ್ದನು ಎಂದರೆ ಮನೆಗೆ ಬರುವ ಪ್ರತಿಯೊಬ್ಬ ಹೆಣ್ಣು ಮಕ್ಕಳನ್ನು ಬಿಡ್ತಾ ಇರಲಿಲ್ಲ ಎಂದು ಹೇಳಿದ್ದಾರೆ.
ಪವರ್ ಟಿವಿಯಲ್ಲಿ ನಡೆದ ಸಂದರ್ಶನದಲ್ಲಿ ಮಾತನಾಡಿದ ಕಾರ್ತಿಕ್, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪೌರ ಕಾರ್ಮಿಕರನ್ನು ಬಿಡ್ತಿರಲಿಲ್ಲ ಎಂಬ ಸ್ಫೋಟಕ ಅಂಶ ಬಾಯ್ಬಿಟ್ಟಿದ್ದಾರೆ. ರೇವಣ್ಣ ಮನೆಗೆ ಪೌರ ಕಾರ್ಮಿಕರು ಬರಲು ಭಯಪಡುತ್ತಿದ್ದರು. ರೇವಣ್ಣ ಪೌರ ಕಾರ್ಮಿಕರನ್ನು ತನ್ನ ಕಾಮತೃಷೆಗೆ ಬಳಸಿಕೊಳ್ತಿದ್ದರು ಎಂದು ಆರೋಪಿಸಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಗುತ್ತಿಗೆದಾರರ ಬಳಿ ಕೆಲಸ ಮಾಡಿಸಿ ಹಣ ಪಾವತಿ ಮಾಡುತ್ತಿರಲಿಲ್ಲವಂತೆ. ಎಷ್ಟೋ ಜನ ಕಾಂಟ್ರ್ಯಾಕ್ಟರ್ ಹಣ ಪಾವತಿ ಮಾಡಲು ಮನವಿ ಮಾಡಿದ್ರೆ, ಅವರ ಪತ್ನಿಯರನ್ನು ಈತನ ಬಳಿ ಬಿಡಬೇಕಾಗಿತ್ತು. ಯಾರ ಅಕ್ಕ, ತಂಗಿಯಾದ್ರೂ ಆತನಿಗೆ ಬೇಕಿತ್ತು. ಯಾರ ಹೆಂಡತಿ, ತಾಯಿಯನ್ನಾದರೂ ಆತ ಕಾಮಕೇಳಿಗೆ ಬಳಸಿಕೊಳ್ತಿದ್ದ ಎಂದು ತಿಳಿಸಿದ್ದಾರೆ.
ಪಾಸ್ಪೋರ್ಟ್ ಇಲ್ಲ, ಇನ್ನೆಲ್ಲಿ ಮಲೇಷ್ಯಾ?
ಮಾಜಿ ಕಾರು ಚಾಲಕ ಕಾರ್ತಿಕ್ ಮಲೇಷ್ಯಾಕ್ಕೆ ತೆರಳಿದ್ದಾನೆ ಎಂದ ಮಾಜಿ ಸಿಎಂ H.D.ಕುಮಾರಸ್ವಾಮಿ ಆರೋಪಕ್ಕೆ ಕಾರ್ತಿಕ್ ಪ್ರತಿಕ್ರಿಯಿಸಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿಗಳು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಬಳಿ ಪಾಸ್ಪೋರ್ಟ್ ಇಲ್ಲ. ನಾನು ಹೇಗೆ ಮಲೇಷ್ಯಾಗೆ ತೆರಳಲಿ. ನನ್ನ ಮನೆ ಬಳಿಯೇ ಸಾಕಷ್ಟು ಕೆಲಸವಿದೆ. ನಾನ್ಯಾಕೆ ಮಲೇಷ್ಯಾಕ್ಕೆ ಹೋಗಲಿ ಎಂದು ಪ್ರಶ್ನಿಸಿದ್ದಾರೆ.
ವಿಡಿಯೋ ವೈರಲ್ ಮಾಡಿದ್ದು ದೇವರಾಜೇಗೌಡ
ನಾನು ವಕೀಲ ದೇವರಾಜೇಗೌಡರಿಗೆ ನನ್ನ ಬಳಿ ಇದ್ದ ಮೆಮೋರಿ ಕಾರ್ಡ್ಗಳನ್ನು ನೀಡಿದ್ದೆ. ಅದನ್ನ ಅವರು ಮಿಸ್ ಯೂಸ್ ಮಾಡಿದ್ದಾರೆ. ಕೇಸ್ ಸಂಬಂಧ ಕೊಟ್ಟಿರೋ ಮೆಮೋರಿ ಕಾರ್ಡ್ಗಳನ್ನು ಸಾರ್ವಜನಿಕವಾಗಿ ಹಂಚಿದ್ದಾರೆ ಎಂದು ಕಾರ್ತಿಕ್ ಆರೋಪಿಸಿದ್ದಾರೆ.