Sunday, May 5, 2024

ಮಗನಿಗೆ ಕಳ್ಳತನದ ಟ್ರೈನಿಂಗ್​ ಕೊಡುತ್ತಿದ್ದ ತಾಯಿ: ಚೋರ್​ ಗುರು, ಚಂಡಾಳ್​ ಶಿಷ್ಯ ತಾಯಿ ಮಗನ ಬಂಧನ!

ಬೆಂಗಳೂರು : ಮಗನಿಗೆ ದರೋಡೆ ಮಾಡುವಂತೆ ಪ್ರೇರೇಪಿಸಿ ಮನೆಕಳ್ಳತನಕ್ಕೆ ಕಳಿಸುತ್ತಿದ್ದ ಖತರ್ನಾಕ್​ ಚೋರ್​ ಗುರು ಚಂಡಾಳ್​ ಶಿಷ್ಯ ತಾಯಿ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ರೋಜ (32), ಚೋರ್​ ಗುರು ತಾಯಿ, ಮತ್ತು ಅಪ್ರಾಪ್ತ ಆರೋಪಿ ಮಗನನ್ನು ಅನ್ನಪೂರ್ಣೆವೇಶ್ವರಿ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಚೋರ್​ ಗುರು ತಾಯಿ ರೋಜ, ಪ್ರತಿನಿತ್ಯ ಬೆಳಗ್ಗೆ ಎದ್ದು ಏರಿಯಾಗಳ ರೌಂಡ್ಸ್​ ಹಾಕುತ್ತಿದ್ದಳು, ಯಾವ ಯಾವ ಮನೆಯಲ್ಲಿನ ಮಹಿಳೆಯರು ಎಷ್ಟೊತ್ತಿಗೆ ಒಂಟಿಯಾಗಿರುತ್ತಾರೆ ಎನ್ನುವ ಮಾಹಿತಿಯನ್ನು ಎರಡು ಮೂರು ದಿನಗಳ ಕಾಲ ವಾಚ್​ ಮಾಡಿ ಬ್ಲೂ ಪ್ರಿಂಟ್​ ತಯಾರಿಸುತ್ತಿದ್ದಳು. ಇದಾದ ಬಳಿಕ ತನ್ನ ಅಪ್ರಾಪ್ತ ಮಗನಿಗೆ ಮಾಹಿತಿ ನೀಡಿ ಸುಫಾರಿ ನೀಡುತ್ತಿದ್ದಳು.

ಇದನ್ನೂ ಓದಿ: ಫಾರ್ಮ್ ಹೌಸ್ ಗೆ ನುಗ್ಗಿ ಒಂಟಿ ಮಹಿಳೆ ಕೊಲೆ!

ತಾಯಿಯ ಮಾಹಿತಿಯ ಪ್ರಕಾರವೇ ಚಂಡಾಳ್​ ಶಿಷ್ಯ ಅಪ್ರಾಪ್ತ ಮಗ ಕೈಯಲ್ಲಿ ಮಚ್ಚು ಹಿಡಿದು ಫೀಲ್ಡಿಗಿಳಿಯುತ್ತಿದ್ದ. ಒಂಟಿ ಮಹಿಳೆಯರು ಮೇಲೆ ಎರಗಿ ಹೆದರಿಸಿ ಚಿನ್ನದ ಸರಗಳನ್ನು ಕಸಿದು ಪರಾರಿಯಾಗುತ್ತಿದ್ದ.

ಈ ರೀತಿ ಕಳ್ಳತನ ಮಾಡಿಕೊಂಡು ಬರುತ್ತಿದ್ದ ತಾಯಿ ಮಗನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದು ಬಂಧಿತರಿಂದ 5 ಲಕ್ಷ ಮೌಲ್ಯದ 103 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದು ವಿಚಾರಣೆಯನ್ನು ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES