Thursday, May 2, 2024

ಭಾರತದ ಮೊದಲ ಪ್ರಧಾನಿ ‘ಸುಭಾಷ್ ಚಂದ್ರ ಬೋಸ್’ : ನಟಿ ಕಂಗನಾ ಸಖತ್‌ ಟ್ರೋಲ್‌

ಬೆಂಗಳೂರು : ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್​ ಅವರು ಭಾರತದ ಮೊದಲ ಪ್ರಧಾನಿ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಎಂದು ಹೇಳುವ ಮೂಲಕ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.

ಮಾರ್ಚ್ 27ರಂದು ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಕಂಗನಾ ಭಾಗವಹಿಸಿದ್ದರು. ಸುಮಾರು ಒಂದು ವಾರದ ನಂತರ ಆಕೆಯ ಸಂದರ್ಶನದ ಕ್ಲಿಪ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಭಾರತದ ಮೊದಲ ಪ್ರಧಾನಿ ‘ಜವಾಹರಲಾಲ್ ನೆಹರೂ’ ಅಲ್ಲ, ‘ಸುಭಾಷ್ ಚಂದ್ರ ಬೋಸ್’ ಎಂದು ಹೇಳಿದ್ದಾರೆ. ನನ್ನ ಪ್ರಕಾರ, ಸುಭಾಷ್ ಚಂದ್ರ ಬೋಸ್ ಅವರು ದೇಶದ ಮೊದಲ ಪ್ರಧಾನಿ ಎಂದ ಕಂಗನಾ ರಣಾವತ್​ ಹೇಳಿದ್ದಾರೆ.

ಬೋಸ್ ಪ್ರಧಾನಿ ಆಗಿರಲಿಲ್ಲ ಎಂದು ಯೂಟರ್ನ್

ಕೂಡಲೇ ನಿರೂಪಕಿ, ಬೋಸ್ ಅವರು ಭಾರತದ ಮೊದಲ ಪ್ರಧಾನಿ ಅಲ್ಲ ಎಂದು ನೆನಪಿಸಿದರು. ತಕ್ಷಣ ಎಚ್ಚೆತ್ತ ಕಂಗನಾ, ಸುಭಾಷ್ ಚಂದ್ರ ಬೋಸ್ ಅವರು ಪ್ರಧಾನಿ ಆಗಿರಲಿಲ್ಲ ಹೌದು, ಆದರೆ, ಏಕೆ? ಅವರು ಎಲ್ಲಿಗೆ ಹೋದರು? ಅವರು ಹೇಗೆ ಕಣ್ಮರೆಯಾದರು ಎಂದು ಪ್ರಶ್ನಿಸಿದ್ದಾರೆ.

ಮೋದಿ ಬಂದ ನಂತರ ಸ್ವಾತಂತ್ರ್ಯ ಸಿಕ್ಕಿದ್ದು

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ವಿವಿಧಿ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಎಂದು ಕಂಗನಾ ಹೇಳಿದ್ದರು.

RELATED ARTICLES

Related Articles

TRENDING ARTICLES