Thursday, May 9, 2024

ಮುನಿಸು ಮರೆತು ಒಂದಾದ ಶಾಸಕ ವಿಶ್ವನಾಥ್​ ಮತ್ತು ಡಾ.ಕೆ ಸುಧಾಕರ್​

ಬೆಂಗಳೂರು : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಬೇಸರಗೊಂಡಿದ್ದ ಯಲಹಂಕ ಶಾಸಕ ಹಾಗು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಅವರು ಇಂದು ಮುನಿಸು ಮರೆತು ಒಂದಾಗಿದ್ದಾರೆ.

ಬಿಜೆಪಿ ಹೈಕಮಾಂಡ್​ ಜೊತೆ ನಡೆದ ಸಂಧಾನ ಸಭೆಯ ಬಳಿಕ ಇಂದು ಯಲಹಂಕ ಶಾಸಕ ಎಸ್​ ಆರ್​ ವಿಶ್ವನಾಥ್​ ಅವರ ನಿವಾಸಕ್ಕೆ ಆಗಮಿಸಿದ್ದ ಮಾಜಿ ಸಚಿವ ಹಾಗು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್​ ಅವರಿಗೆ ಹೂಗುಚ್ಚ ನೀಡುವ ಮೂಲಕ ಸ್ವಾಗತಕೋರಿದ್ದಾರೆ.

ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಶಾಸಕ ವಿಶ್ವನಾಥ್​ ಅವರು, ನಮ್ಮ ಪಾಡಿಗೆ ನಾವು ಯಾರು ಹೇಳಲಿ ಬಿಡಲಿ ಬಹುಮತ ಕೊಡುತ್ತೇವೆ, ಏ.7ರಂದು ನಮ್ಮ ಕ್ಷೇತ್ರದಲ್ಲಿ ನಮ್ಮ ಎಲ್ಲಾ ಕಾರ್ಯಕರ್ತರ ಸಭೆಯನ್ನು ಕರೆಯುತ್ತಿದ್ದೇನೆ ನಮ್ಮ ಅಭ್ಯರ್ಥಿಯನ್ನು ಸಹ ಸಭೆಗೆ ಬರುವಂತೆ ಹೇಳದ್ದೇನೆ ಎಂದರು.

ಇದನ್ನೂ ಓದಿ: ಎಸ್​.ಆರ್​ ವಿಶ್ವನಾಥ್​ ಭೇಟಿಗೆ ಬಂದ ಸುಧಾಕರ್ ಗೆ ಬಾರಿ ಮುಜುಗರ

ಈಗಾಗಲೇ ನಮ್ಮ ಅಭ್ಯರ್ಥಿ ನಾಮಪತ್ರವನ್ನು ಸಲ್ಲಿಸಿದ್ದು ನಾಳೆ ನಾಮಕೆವಾಸ್ಥೆ ಮತ್ತೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ನಾನು ಭಾಗಿಯಾಗಿ ಬೆಂಬಲ ಸೂಚಿಸಲಿದ್ದೇನೆ. ಇನ್ನು ಯಲಹಂಕ ಕೋರ್ ಕಮಿಟಿ ಸಭೆಯನ್ನು ಜೆಡಿಎಸ್ ಒಳಗೊಂಡು ಮಾಡಲಿದ್ದೇವೆ ಎಂದರು.

ಈ‌ ಭಾರಿಯ ಚುನಾವಣೆ ಸುಲಭವಿಲ್ಲ ಅನ್ನೋದನ್ನ ಹೇಳಿದ್ದೀ‌ನಿ. ನಾನು ಆದಷ್ಟು ಯಲಹಂಕದಲ್ಲೆ ಇದ್ದು ಕೆಲಸ ಮಾಡ್ತೀನಿ. ಪ್ರಮುಖರು ಬಂದಾಗಾ ಮಾತ್ರ ಹೊರಗಡೆ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ. ಈಗಗಲೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಎಂದು ಬಿಂಬಸಲಾಗಿದ್ದ ಅಲೋಕ್ ವಿಶ್ವನಾಥ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ಕಲ್ಪಿಸುವ ಭರವಸೆಯನ್ನು ನೀಡಿದ್ದು ಇದೊಂದು ಬಾರಿ ಮಾತ್ರ ತಾನು ಸ್ಫರ್ಧೆ ಮಾಡುವುದಾಗಿ ಸುಧಾಕರ್ ಹೇಳಿದ್ದಾರೆ ಎಂದು  ವಿಶ್ವನಾಥ್​ ಸ್ಪಷ್ಟನೆ ನೀಡಿದರು.

RELATED ARTICLES

Related Articles

TRENDING ARTICLES