Sunday, May 5, 2024

ವೀಣಾ ಕಾಶಪ್ಪನವರ್ ಸಂಧಾನ ಸಭೆ ವಿಫಲ: ಮುಂದಿನ ನಡೆ ನಿಗೂಢ

ಬೆಂಗಳೂರು: ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಸಂಧಾನಸಭೆ ವಿಫಲವಾಗಿದೆ ಎಂದು ಮೂಲಗಳು ತಿಳಿಸಿದೆ.

ವೀಣಾ ಕಾಶಪ್ಪನವರ್​ ಬಂಡಾಯ ವಿಚಾರಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಸಂಧಾನ ಸಭೆ ಇಂದು ಬೆಂಗಳೂರಿನಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಟಿಕೆಟ್​ ನೀಡುವಂತೆ ವೀಣಾ ಕಾಶಪ್ಪನವರ್​ ಪಟ್ಟು ಹಿಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಡಿಕೆಸು 593 ಕೋಟಿ ಒಡೆಯ, 150 ಕೋಟಿ ‘ಸಾಲಗಾರ’, ಇವ್ರ ಬಳಿ ‘ಕಾರು’ ಇಲ್ವಂತೆ : ಇಲ್ಲಿದೆ ಆಸ್ತಿ ವಿವರ

ಇದಕ್ಕೆ ಸೊಪ್ಪು ಹಾಕದ ಸಿಎಂ ಮತ್ತ ಡಿಸಿಎಂ, ಕಾಂಗ್ರೆಸ್​ ಪಕ್ಷಕ್ಕಾಗಿ ದುಡಿದಿರುವ ನಿನ್ನ ಒಳ್ಳೆಯ ಕೆಲಸದ ಬಗ್ಗೆ ನಮಗೂ ಅರಿವಿದೆ. ಆದರೇ, ಟಿಕೆಟ್​ ಘೋಷಣೆ ನಿರ್ಧಾನ ಹೈಕಮಾಂಡ್​ ತೀರ್ಮಾನ, ಸದ್ಯಕ್ಕೆ ಟಿಕೆಟ್ ಬದಲಾವಣೆಯ ಪ್ರಶ್ನೆಯೆ ಇಲ್ಲ, ಮುಂದಿನ ದಿನಗಳಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ, ಚುನಾವಣೆ ಮುಗಿದ ಬಳಿಕ ಒಳ್ಳೆಯ ಸ್ಥಾನ ನೀಡುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ, ದುಡುಕಿ ನಿರ್ಧಾರವನ್ನು ಕೈಗೊಳ್ಳದಂತೆ ಸಿಎಂ, ಡಿಸಿಎಂ ಮನವಿ ಮಾಡಿಕೊಂಡಿದ್ದಾರೆ.

ಸಂಧಾನಸಭೆಯಲ್ಲಿ ಸಿಎಂ ಮಾತುಗಳನ್ನು ಕೇಳುತ್ತಲೇ ಕಣ್ಣೀರು ಹಾಕುತ್ತ ವೀಣಾ ಕಾಶಪ್ಪನವರ್ ಯಾವುದೇ ಉತ್ತರ ನೀಡದೇ ಹೊರ ನಡೆದಿದ್ದು ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

RELATED ARTICLES

Related Articles

TRENDING ARTICLES