Sunday, April 28, 2024

ಡಿಕೆಸು 593 ಕೋಟಿ ಒಡೆಯ, 150 ಕೋಟಿ ‘ಸಾಲಗಾರ’, ಇವ್ರ ಬಳಿ ‘ಕಾರು’ ಇಲ್ವಂತೆ : ಇಲ್ಲಿದೆ ಆಸ್ತಿ ವಿವರ

ಬೆಂಗಳೂರು : ಡಿ.ಕೆ. ಸುರೇಶ್ ಕೋಟಿ ಕುಳ. ಬರೋಬ್ಬರಿ 593 ಕೋಟಿ ರೂ. ಒಡೆಯ. ಆದರೆ, ಡಿಕೆಸು 150 ಕೋಟಿ ಸಾಲಗಾರ!

ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ ಸುರೇಶ್‌ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ 593 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಹಾಲಿ ಸಂಸದರಾಗಿರುವ ಡಿಕೆಸು ಬಳಿ ಯಾವುದೇ ಕಾರು ಇಲ್ವಂತೆ. ಒಟ್ಟು 150.06 ಕೋಟಿ ರೂ. ಸಾಲವನ್ನು ಹೊಂದಿದ್ದೇನೆ. 7.27 ಕೋಟಿ ರೂ. ಸಾಲಕ್ಕೆ ಸಂಬಂಧಿಸಿದಂತೆ ವಿವಾದ ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಕಳೆದ (2019) ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸುರೇಶ್ 338 ಕೋಟಿ ರೂ. ಆಸ್ತಿ ಘೋಷಿಸಿದ್ದರು. ಈ ಬಾರಿ ಒಟ್ಟು 106.71 ಕೋಟಿ ರೂ. ಚರಾಸ್ತಿ, ಒಟ್ಟು 486.33 ಕೋಟಿ ರೂ. ಸ್ಥಿರಾಸ್ತಿ ಘೋಷಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಡಿ.ಕೆ. ಸುರೇಶ್ ಅವರ ಆಸ್ತಿಯಲ್ಲಿ 259.19 ಕೋಟಿ ಏರಿಕೆಯಾಗಿದೆ.

ಡಿಕೆಸು ಬಳಿ ಇರುವ ಚಿನ್ನ, ಬೆಳ್ಳಿ ಎಷ್ಟು?

ಡಿ.ಕೆ. ಸುರೇಶ್ ಬಳಿ ಒಟ್ಟು 21,35,500 ರೂ. ಮೌಲ್ಯದ 1260 ಗ್ರಾಂ ಚಿನ್ನ ಮತ್ತು 2,10,000 ರೂ. ಮೌಲ್ಯದ 4886 ಗ್ರಾಂ ಬೆಳ್ಳಿ ಇದೆ. ಒಟ್ಟು 32,75,50,472 ರೂ. ಮೌಲ್ಯದ ಕೃಷಿ ಭೂಮಿ, 210,47,68,159 ರೂ. ಮೌಲ್ಯದ ಕೃಷಿಯೆತರ ಭೂಮಿಯ ಒಡೆಯರಾಗಿದ್ದಾರೆ. ಒಟ್ಟು 211,91,41,888 ರೂ. ಮೌಲ್ಯದ ವಾಣಿಜ್ಯ ಕಟ್ಟಡ ಡಿ.ಕೆ ಸುರೇಶ್‌ ಹೆಸರಿನಲ್ಲಿದೆ.

ನನ್ನ ಕೆಲಸಕ್ಕೆ ಜನ ಕೂಲಿ ಕೊಡ್ತಾರೆ

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಸಂಸದ ಡಿ.ಕೆ. ಸುರೇಶ್ ಅವರು, ‘ನನ್ನ ಕೆಲಸಕ್ಕೆ ಜನ ಕೂಲಿ ಕೊಡ್ತಾರೆ ಎಂಬ ನಂಬಿಕೆ ಇದೆ. ನನ್ನ ಕೆಲಸಗಳೇ ನನ್ನ ಕೈಹಿಡಿಯುತ್ತದೆ’ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES