Sunday, April 28, 2024

RR ರಾಕ್, ಡೆಲ್ಲಿ ಡುಮ್ಕಿ.. ರಿಷಬ್ ಪಂತ್ ನಾಯಕತ್ವದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು

ಬೆಂಗಳೂರು : ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ತವರು ಅಂಗಳದಲ್ಲಿ ಸಂಜು ಸ್ಯಾಮನ್ಸ್​ ಸಾರಥ್ಯದ ರಾಜಸ್ಥಾನ್ ರಾಯಲ್ಸ್ 12 ರನ್​ಗಳ​ ರೋಚಕ ಗೆಲುವು ದಾಖಲಿಸಿತು. ರಿಷಬ್ ಪಂತ್ ನಾಯಕತ್ವದಲ್ಲಿ ಡೆಲ್ಲಿ ಬ್ಯಾಕ್​ ಟು ಬ್ಯಾಕ್ ಸೋಲು ಕಂಡಿತು.

ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ರಾಜಸ್ಥಾನ ಮೊದಲು ಬ್ಯಾಟಿಂಗ್ ಮಾಡಿತು. ಆರಂಭದಲ್ಲಿ ಡೆಲ್ಲಿ ಲೆಕ್ಕಾಚಾರ ಚೆನ್ನಾಗಿಯೇ ಇತ್ತು. ಬಳಿಕ, ಆರ್​ಆರ್​ ಬ್ಯಾಟರ್ ಪರಾಗ್ ರಿಷಬ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದರು.

ರಾಜಸ್ಥಾನ ನೀಡಿದ್ದ 186 ರನ್​ಗಳ ಸವಾಲಿನ ಟಾರ್ಗೆಟ್​ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 173 ರನ್​ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಸೋಲು ಅನುಭವಿಸಿತು. ಪಂದ್ಯ ಗೆದ್ದ ರಾಜಸ್ಥಾನ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಭದ್ರಪಡಿಸಿಕೊಂಡಿತು.

ಟ್ರಿಸ್ಟಾನ್ ಸ್ಟಬ್ಸ್ ಏಕಾಂಗಿ ಹೋರಾಟ ವ್ಯರ್ಥ

ಡೆಲ್ಲಿ ಕ್ಯಾಪಿಟಲ್ಸ್​ ಪರ ಡೇವಿಡ್ ವಾರ್ನರ್ 49 ರನ್​ ಗಳಿಸಿ ಒಂದು ರನ್​ನಿಂದ ಅರ್ಧಶತಕ ವಂಚಿತರಾದರು. ಟ್ರಿಸ್ಟಾನ್ ಸ್ಟಬ್ಸ್ 23 ಎಸೆತಗಳಲ್ಲಿ 3 ಸಿಕ್ಸ್​ ಹಾಗೂ 2 ಬೌಂಡರಿಗಳೊಂದಿಗೆ ಅಜೇಯ 44 ರನ್ ಚಚ್ಚಿದರು. ಆದರೆ, ಸ್ಟಬ್ಸ್​ ಏಕಾಂಗಿ ಹೋರಾಟ ಡೆಲ್ಲಿಗೆ ಗೆಲುವು ತಂದುಕೊಡಲಿಲ್ಲ.

ರಿಯಾನ್ ಪರಾಗ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ

ಉಳಿದಂತೆ ಮಿಚೆಲ್ ಮಾರ್ಷ್ 23, ರಿಷಬ್ ಪಂತ್ 28, ಅಕ್ಸರ್ ಪಟೇಲ್ ಅಜೇಯ 15 ರನ್​ ಗಳಿಸಿದರು. ರಾಜಸ್ಥಾನ ಪರ ಬರ್ಗರ್ ಹಾಗೂ ಯುಜ್ವೇಂದ್ರ ಚಾಹಲ್ ತಲಾ 2, ಅವೇಶ್ ಖಾನ್ ಒಂದು ವಿಕೆಟ್ ಪಡೆದರು. ಆರ್​ಆರ್​ ಗೆಲುವಿನ ರುವಾರಿ ರಿಯಾನ್ ಪರಾಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

RELATED ARTICLES

Related Articles

TRENDING ARTICLES