Thursday, May 9, 2024

ಲೋಕಸಭಾ ಚುನಾವಣೆ: 79 ಸಾವಿರಕ್ಕು ಅಧಿಕ ನೀತಿ ಸಂಹಿತೆ ಉಲ್ಲಂಘನೆ ದೂರುಗಳು ದಾಖಲು!

ನವದೆಹಲಿ : ಸಿ-ವಿಜಿಲ್ ಆ್ಯಪ್ ಮೂಲಕ ಇದುವರೆಗೆ 79,000 ಕ್ಕೂ ಹೆಚ್ಚು ನೀತಿ ಸಂಹಿತೆ ಉಲ್ಲಂಘನೆಯ ದೂರು ಸ್ವೀಕರಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.

ಲೋಕಸಭಾ ಚುನಾವಣೆ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೂ ದಿನಾಂಗ ಘೋಷಣೆಯಾಗಿದ್ದು ನೀತಿ ಸಂಹಿತೆ ಉಲ್ಲಂಘನೆಯ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ಸ್ವೀಕರಿಸಲಾದ ದೂರುಗಳ ಪೈಕಿ ಶೇ.90 ಕ್ಕಿಂತ ಹೆಚ್ಚಿನ ದೂರುಗಳನ್ನು ಪರಿಹರಿಸಲಾಗಿದೆ. ಶೇ. 89 ರಷ್ಟು ದೂರುಗಳನ್ನು 100 ನಿಮಿಷಗಳಲ್ಲಿ ಬಗೆಹರಿಸಲಾಗಿದೆ. ಅಕ್ರಮ ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳ ವಿರುದ್ಧ 58,500 ಕ್ಕೂ ಹೆಚ್ಚು ದೂರುಗಳುಸ್ವೀಕರಿಸಲ್ಪಟ್ಟಿವೆ, ಹಣ, ಉಡುಗೊರೆಗಳು ಮತ್ತು ಮದ್ಯ ವಿತರಣೆಗೆ ಸಂಬಂಧಿಸಿದಂತೆ 1,400 ಕ್ಕೂ ಹೆಚ್ಚು ದೂರುಗಳು ಬಂದಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ: ಇನ್ನೆರಡು ದಿನಗಳಲ್ಲಿ 40 ಡಿಗ್ರಿಗೆ ಏರಿಕೆ

ಶೇ. 3 ರಷ್ಟು ಅಂದರೆ 2,454 ದೂರುಗಳು ಆಸ್ತಿ ಹಾನಿಗೆ ಸಂಬಂಧಿಸಿದೆ. ಬಂದೂಕು ಪ್ರದರ್ಶನ ಮತ್ತು ಬೆದರಿಕೆಗೆ ಸಂಬಂಧಿಸಿದಂತೆ 535 ದೂರುಗಳು ಬಂದಿದ್ದು, 529 ದೂರುಗಳನ್ನು ಪರಿಹರಿಸಲಾಗಿದೆ. ಅನುಮತಿ ಅವಧಿ ಮೀರಿ ಸ್ಪೀಕರ್ ಬಳಕೆಗೆ ಸಂಬಂಧಿಸಿದ ದೂರುಗಳು ಸೇರಿದಂತೆ ಅವಧಿ ಮೀರಿದ ಪ್ರಚಾರಕ್ಕಾಗಿ ಒಟ್ಟು 1,000 ದೂರುಗಳು ಬಂದಿರುವುದಾಗಿ ಚುನಾವಣಾ ಸಮಿತಿ ಹೇಳಿದೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಮತದಾರರಲ್ಲಿ ಯಾವುದೇ ರೀತಿಯ ಪ್ರಚೋದನೆಗಳ ಬಗ್ಗೆ ವರದಿ ಮಾಡಲು ಆ್ಯಪ್ ಬಳಸಬೇಕೆಂದು ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದನ್ನು ಚುನಾವಣಾ ಆಯೋಗ ಉಲ್ಲೇಖಿಸಿದೆ.

RELATED ARTICLES

Related Articles

TRENDING ARTICLES