Friday, May 17, 2024

ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ: ಇನ್ನೆರಡು ದಿನಗಳಲ್ಲಿ 40 ಡಿಗ್ರಿಗೆ ಏರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ದಾಖಲೆಯ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆ ಆಗಿದೆ. ಇದರಿಂದಾಗಿ ಜನರು ಪರಿತಪಿಸುವಂತಾಗಿದೆ ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ಸೇರಿದಂತೆ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ನಿನ್ನೆ ಗುರುವಾರ ಒಂದೇ ದಿನ ತಾಪಮಾನ ಏರಿಕೆ ಆಗಿದೆ.

ರಾಜಧಾನಿ ಬೆಂಗಳೂರಲ್ಲಿ ಗರಿಷ್ಠ ತಾಪಮಾನವು 37.8 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಕಳೆದ 28 ವರ್ಷದಲ್ಲೇ ಗರಿಷ್ಠ ತಾಪಮಾನ ಇದಾಗಿದೆ. ಕಳೆದೊಂದು ವಾರದಿಂದ 36 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನವು ನಿನ್ನೆ ಗುರುವಾರ 37.8 ಡಿ.ಸೆಗೆ ಏರಿಕೆ ಆಗಿತ್ತು. 1996ರಲ್ಲಿ ಬೆಂಗಳೂರಲ್ಲಿ 37.3 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತು, ಇಷ್ಟೊಂದು ತಾಪಮಾನದಲ್ಲಿ ಜನರು ತಿರುಗಾಡಿದರೆ ಖಂಡಿತವಾಗಿಯೂ ಅನಾರೋಗ್ಯಕ್ಕೆ ತುತ್ತಾಗಲಿದ್ದಾರೆ.

ಇದನ್ನೂ ಓದಿ: ವೀಣಾ ಕಾಶಪ್ಪನವರ್ ಸಂಧಾನ ಸಭೆ ವಿಫಲ: ಮುಂದಿನ ನಡೆ ನಿಗೂಢ

ಬೆಂಗಳೂರು ಮಾತ್ರವಲ್ಲ ಕಲಬುರಗಿ, ಬಾಗಲಕೋಟೆ, ರಾಯಚೂರು, ಬಳ್ಳಾರಿ ಹಾಗೂ ವಿಜಯಪುರ, ಕೊಪ್ಪಳದಲ್ಲಿ ಅತ್ಯಾಧಿಕ ತಾಪಮಾನ ದಾಖಲಾಗಿದೆ. ಈ ಬಗ್ಗೆ ಗರಿಷ್ಠ ಉಷ್ಣಾಂಶ ದಾಖಲಾದ ಬಗ್ಗೆ ಹವಾಮಾನ ಇಲಾಖೆ ಪಟ್ಟಿ ಬಿಡುಗಡೆ ಮಾಡಿದೆ.

ಬೇಸಿಗೆ ಆರಂಭವಾಗುವ ಮೊದಲೇ ಜನರು ಬೇಸಿಗೆಯ ಅನುಭವಿಸಿದ್ದರು. ಮಾರ್ಚ್‌ ಮುಗಿಯುವ ಮೊದಲೇ ಸೂರ್ಯ ದಿನೇದಿನೆ ಪ್ರಖರವಾಗುತ್ತಿದ್ದಾನೆ. ಎಲ್ಲ ರಾಜ್ಯಗಳಲ್ಲೂ ಬೇಸಿಗೆಯನ್ನು ಎದುರಿಸಲು, ಅಗತ್ಯ ಪರಿಹಾರ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಈ ಬೆನ್ನಲ್ಲೇ ಮುಂದಿನ ಐದು ದಿನಗಳು ಕೆಲವು ಕಡೆ 40 ರಿಂದ 50 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ಖಂಡಿತವಾಗಿಯೂ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾದ ತಾಪಮಾನವಾಗಿದೆ.

RELATED ARTICLES

Related Articles

TRENDING ARTICLES