Monday, May 6, 2024

ಈಶ್ವರಪ್ಪ ಮೋದಿ ಫೋಟೋ ಬಳಕೆ; ಈಶ್ವರಪ್ಪ ಗೆಲ್ಲುವ ಪ್ರಶ್ನೆಯೇ ಇಲ್ಲ- ಶಾಸಕ ಚನ್ನಬಸಪ್ಪ

ಶಿವಮೊಗ್ಗ: ಈಶ್ವರಪ್ಪ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್​ ಈಶ್ವರಪ್ಪ ಅವರು ಗೆಲ್ಲುವ ಪ್ರಶ್ನೆಯೆ ಇಲ್ಲ ಎಂದು ಅವರ ಪರಮಾಪ್ತ ಶಿಷ್ಯ ಹಾಗು ಶಾಸಕ ಎಸ್​.ಎನ್​ ಚನ್ನಬಸಪ್ಪ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಶ್ವರಪ್ಪ ಪಕ್ಷಕ್ಕೆ ವಾಪಸ್ಸಾದರೆ ಕರೆದುಕೊಳ್ಳುತ್ತೇವೆ. ಬಾರದಿದ್ದರೆ ಅವರನ್ನು ಬಿಟ್ಟು ಬಿಡುತ್ತೇವೆ. ಅವರು ಲಕ್ಷಕ್ಕೂ ಹೆಚ್ಚು ಮತಗಳಿಸುತ್ತಾರೆ ಎಂದರೆ ನಮಗೆ ನಗು ಬರುತ್ತದೆ ಅಷ್ಟೇ. ಈಗ ಅವರ ಹತ್ತಿರ ಕೇವಲ 6 ಜನ ಮಾಜಿ ಕಾರ್ಪೋರೇಟರ್ ಗಳಿದ್ದಾರೆ ಅಷ್ಟೇ ಎಂದಿದ್ದಾರೆ. ಆದರೆ, ಈಶ್ವರಪ್ಪ ಅವರು ವಾಪಸ್ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಇನ್ನು, ಈಶ್ವರಪ್ಪ ಪ್ರಧಾನಿ ಮೋದಿ ಫೋಟೋ ಬಳಕೆ ವಿಚಾರದಲ್ಲಿ ಮಾತನಾಡಿದ ಅವರು, ಯಾವಾಗ ನಮಗೆ ತಾಕತ್ತಿರುವುದಿಲ್ಲವೋ ಆಗ ಬಲಿಷ್ಟರನ್ನು ಜೊತೆಗೆ ಇಟ್ಟುಕೊಳ್ಳುವುದು ಸಹಜ ಎಂದು ಹೇಳುವುದರ ಮೂಲಕ, ಈಶ್ವರಪ್ಪಗೆ ಟಾಂಗ್ ನೀಡಿದ್ದಾರೆ. ಮೋದಿಗೆ ಓಟು ಹಾಕಬೇಕೆಂದರೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದರೆ, ಆಗ ಎಲ್ಲರೂ ಬಿಜೆಪಿಗೆ ಓಟು ಹಾಕಬೇಕು. ಕಮಲದ ಚಿಹ್ನೆ ಇರುವ ಬಿಜೆಪಿಗೆ ಓಟು ಹಾಕಿ ರಾಘವೇಂದ್ರ ಅವರು ಗೆದ್ದರೆ ಮಾತ್ರ ಮೋದಿ ಗೆದ್ದಂತೆ ಎಂದು ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ.

ಹೋಗಲಿ ಈಶ್ವರಪ್ಪ ಗೆಲ್ತಾರಾ ಎಂದು ಅವರ ಆಪ್ತ ಚನ್ನಬಸಪ್ಪನವರೇ ಪ್ರಶ್ನೆ ಮಾಡಿರುವುದು ಶಿವಮೊಗ್ಗದಲ್ಲಿ ಈಶ್ವರಪ್ಪ ಸೋಲುವುದು ಖಚಿತ. ಅವರು ಗೆಲ್ಲುವ ಪ್ರಶ್ನೆಯೇ ಇಲ್ಲ. ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲುತ್ತಾ ಎನ್ನುವ ಸಂಶಯವನ್ನು ಹುಟ್ಟು ಹಾಕುವಂತಿದೆ.

RELATED ARTICLES

Related Articles

TRENDING ARTICLES