Thursday, May 9, 2024

ಸುಧಾಕರ್ ಪರ ಮತ ಕೇಳಲ್ಲ, ವೇದಿಕೆ ಹಂಚಿಕೊಳ್ಳಲ್ಲ: ಎಸ್​ ಆರ್ ವಿಶ್ವನಾಥ್​

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ ಸುಧಾಕರ್ ಪರ ಮತ ಕೇಳಲ್ಲ, ಸುಧಾಕರ್ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಯಲಹಂಕ ಶಾಸಕ ಎಸ್​.ಆರ್​ ವಿಶ್ವನಾಥ್ ತಿಳಿಸಿದ್ದಾರೆ.

ಸಿಂಗನಾಯಕನಹಳ್ಳಿಯಲ್ಲಿರುವ ತಮ್ಮ ನಿವಾದ ಬಳಿ ಪ್ರತಿಕ್ರಿಯೆ ನೀಡಿರುವ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಡಾ.ಕೆ ಸುಧಾಕರ್ ಹೆಸರು ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದ ಹಲವೆಡೆ ಗೋಬ್ಯಾಕ್​ ಸುಧಾಕರ್ ಎನ್ನುವ ಮಾತುಗಳ ಜೊತೆಗೆ ಅಭ್ಯರ್ಥಿ ಬದಲಾವಣೆ ಮಾಡಿ ಬೇರೆಯವರಿಗೆ ಕೊಡಿ ಎನ್ನುವ ಮಾತುಗಳು ಕೇಳಿಬರುತ್ತಿದೆ ಎಂದರು.

ಇದನ್ನು ಓದಿ: ನಾನು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಲ್ಲ: ಮುನಿಸ್ವಾಮಿ

ಏನೇ ಆದರೂ ನಾನು ನರೇಂದ್ರ ಮೋದಿ ಪರವಾಗಿ ಮತಕೇಳುತ್ತೇನೆ. ನಾನು ಸುಧಾಕರ್ ಪರವಾಗಿ ಮತ ಕೇಳೋದಿಲ್ಲ, ಸುಧಾಕರ್ ಜೊತೆ ನಾನು ವೇದಿಕೆ ಹಂಚಿಕೊಳ್ಳಲ್ಲ, ಸುಧಾಕರ್ ಜೊತೆ ಚುನಾವಣಾ ಪ್ರಚಾರ ಮಾಡಲ್ಲ, ನಾನು ನೇರವಾಗಿ ಬಿಜೆಪಿ ಪಕ್ಷ ಹಾಗು ನರೇಂದ್ರ ಮೋದಿ ಪರವಾಗಿ ಮತಕೇಳುತ್ತೇನೆ. ಸುಧಾಕರ್ ಪರವಾಗಿ ಮತ ಕೇಳಲು ವೈಯುಕ್ತಿಕವಾಗಿ ನನಗೆ ಮುಜಗರ ಅಗುತ್ತದೆ.

ಚಿಕ್ಕಬಳ್ಳಾಪುರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ಬೂತ್ ಮಟ್ಟದಲ್ಲಿ ಚುನಾವಣೆಗೆ ಸಿದ್ದತೆ ಮಾಡಲು ನಮ್ಮ ಕಾರ್ಯಕರ್ತರಿಗೆ ತಿಳಿಸಿದ್ದೇನೆ. ನಮ್ಮ ಪ್ರಯತ್ನವನ್ನು ನಾವು ಮಾಡ್ತೇವೆ ಸೋಲು ಗೆಲುವು ಭಗವಂತನಿಗೆ ಬಿಟ್ಟಿದ್ದು ಎಂದು ಮಾರ್ಮಿಕವಾಗು ನುಡಿದಿದ್ದಾರೆ.

ಚುನಾವಣೆಯಲ್ಲಿ ಅಭ್ಯರ್ಥಿ ಸೋಲೋದು ಬೇಡ, ಮೋದಿಗೆ ನಮ್ಮ‌ ಕಾಣಿಕೆ ಇರಬೇಕು. ಅದರೇ ಜನ ವ್ಯಕ್ತಿ ನೋಡಿ ಮತ ಹಾಕುತ್ತಾರೆ ಅದರಲ್ಲಿ ವ್ಯತ್ಯಾಸ ಆದ್ರೆ ನಾವು ಜವಾಬ್ದಾರಿ ಹೊರಲ್ಲ. ಸುಧಾಕರ್ ಕೆಲವು ಕಡೆ ಲೂಸ್ ಟಾಕ್ ಮಾತಾಡೋದು ಕಡಿಮೆ ಮಾಡಬೇಕು. ಎಂಪಿ ಸೀಟು ಸಿಗಲಿಲ್ಲ ಅಂತ ನನಗೆ ಬೇಸರವಿಲ್ಲ, ಅಧಿಕಾರದ ಹಪಾಹಪಿ ಇಲ್ಲ, ಪಕ್ಷದ ವಿರುದ್ದ ಕೆಲಸ ಮಾಡುವ ಜಾಯಮಾನ ನಮ್ಮದಲ್ಲ, ಪಕ್ಷದ ವರಿಷ್ಠರು ಸುಧಾಕರ್ ಗೆ ಎಚ್ಚರಿಕೆ ಕೊಡಲಿ, ಚುನಾವಣೆಗೆ ಮಾತ್ರ ಸೀಮಿತ ಆಗದೆ ಪಕ್ಷ ಕಟ್ಟುವ ಕೆಲಸ ಮಾಡಲಿ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES