Friday, May 3, 2024

ನಾನು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಲ್ಲ: ಮುನಿಸ್ವಾಮಿ

ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರಕ್ಕೆ ನಾನು ಜೆಡಿಎಸ್​ ಟಿಕೆಟ್​ ಆಕಾಂಕ್ಷಿಯಲ್ಲ, ಕೋಲಾರದ ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡುವ ಉದ್ದೇಶದಿಂದಷ್ಟೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಬಂದಿದ್ದೇನೆ ಎಂದು ಬಿಜೆಪಿ ಮುಖಂಡ ಮುನಿಸ್ವಾಮಿ ಸ್ಪಷ್ಟಪಡಿಸಿದರು.

ನಗರದಲ್ಲಿ ಈ ಕುರಿತು ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೋಲಾರ ಕ್ಷೇತ್ರಕ್ಕಾಗಿ ಜೆಡಿಎಸ್​ ಪಟ್ಟುಹಿಡಿದ್ದರಿಂದ ಕೇಂದ್ರ ಗೃಹಸಚಿವ ಅಮಿತ್​ ಷಾ ನನಗೆ ಕರೆ ಮಾಡಿ ಪಕ್ಷದಲ್ಲಿ ಉನ್ನತ ಹುದ್ದೆಯ ಅವಕಾಶ ಕೊಡುವ ಭರವಸೆ ನೀಡಿದರು ಹೀಗಾಗಿ ಕ್ಷೇತ್ರ ತ್ಯಾಗ ಮಾಡಿದ್ದೇನೆ.

ಇದನ್ನೂ ಓದಿ: ಬಿಜೆಪಿ ಮತ್ತೊಂದು ವಿಕೆಟ್ ಪತನ: ಪರಿಷತ್​ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ!

ಈ ಚುನಾವಣೆಯಲ್ಲಿ ಹತಾಶನಾಗದೇ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತೇವೆ. ಕೋಲಾರ ಕ್ಷೇತ್ರ ನನ್ನ ಕರ್ಮಭೂಮು, ರಾಜಕೀಯ ಚಟುವಟಕೆ ಎಂದಿನಂತೆ ಮುಂದುವರೆಯುತ್ತದೆ. ಸಂಘ ಪರಿವಾರ ಬಿಜೆಪಿ ನನ್ನ ಕೆಲಸವನ್ನು ಗುರುತಿಸಿ ಮೆಚ್ಚಿದೆ ಎಂದರು.

ಕುಮಾರಸ್ವಾಮಿಯವರ ಜೊತೆ ಕೋಲಾರದ ಸದ್ಯದ ರಾಜಕಾರಣದ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಿದ್ದೇನೆ, ಸ್ವಪಕ್ಷದಲ್ಲೆ ಇದ್ದು ಅನ್ಯ ಪಕ್ಷದಲ್ಲಿ ಕೆಲಸ ಮಾಡುವವರು ಯಾರು, ಯಾವ ಅಭ್ಯರ್ಥಿಯನ್ನು ನಿಲ್ಲಿಸಿದರೇ ಗೆಲುವು ಸುಲಭ ಇನ್ನುಳಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದ್ದೇನೆ. ಎನ್​ಡಿಎ ಮೈತ್ರಿ ಅಭ್ಯರ್ಥಿಯಾಗಿ ಯಾರನ್ನೇ ನಿಲ್ಲಿಸಿದರು ಅವರ ಪರವಾಗಿ ನಮ್ಮ ಮುಖಂಡರು ಕೆಲಸ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

RELATED ARTICLES

Related Articles

TRENDING ARTICLES