Saturday, May 4, 2024

Tea And Coffee : ಅತಿಯಾಗಿ ಟೀ ಕುಡಿಯಬೇಡಿ.. ಈ ರೋಗಗಳು ಬರುತ್ತೆ ಹುಷಾರ್!

ಬೆಂಗಳೂರು : ಚಹಾದ ಚಟವು ವಿಷಕ್ಕಿಂತ ಕಡಿಮೆಯಲ್ಲ! ಅತಿಯಾಗಿ ಚಹಾ ಕುಡಿಯುವುದರಿಂದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಲವಾರು ರೋಗಗಳನ್ನು ಎದುರಿಸಬೇಕಾಗುತ್ತದೆ.

ಬಿಸಿ ಚಹಾ ಕುಡಿಯುವುದರ ಮೂಲಕ ದಿನವನ್ನು ಆರಂಭಿಸಿದರೆ ಮನಸ್ಸಿಗೆ ಶಾಂತಿ ಸಿಗುತ್ತೆ. ಹೀಗಾಗಿ, ಹೆಚ್ಚು ಜನ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಚಹಾ ಕುಡಿಯುತ್ತಾರೆ. ಚಹಾ ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಆದರೆ, ಅತಿಯಾಗಿ ಚಹಾ ಕುಡಿದರೆ ಅನಾರೋಗ್ಯಕ್ಕೆ ಒಳಗಾಗಬಹುದು.

ಹಾಗಿದ್ರೆ, ಚಹಾ ಕುಡಿಯುವುದರಿಂದ ಆರೋಗ್ಯದ ಮೇಲೆ ಆಗುವ ಅನಾನುಕೂಲಗಳೇನು? ಇಲ್ಲಿದೆ ನೋಡಿ ಮಾಹಿತಿ.

  • ನೀವು ದಿನಕ್ಕೆ 3 ಕಪ್​ಗಿಂತ ಹೆಚ್ಚು ಚಹಾವನ್ನು ಕುಡಿದರೆ, ದೇಹದಲ್ಲಿನ ಕಬ್ಬಿಣದ ಅಂಶವು ಕಡಿಮೆಯಾಗುತ್ತದೆ. ದೇಹದ ಕಾರ್ಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
  • ಅತಿಯಾಗಿ ಚಹಾ ಕುಡಿಯುವುದರಿಂದ ದೇಹ ಸೋಮಾರಿಯಾಗುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಹೆಚ್ಚು ಚಹಾ ಕುಡಿಯುವುದನ್ನು ನಿಲ್ಲಿಸಬೇಕು.
  • ಗರ್ಭಪಾತ ಹಾಗೂ ಕಡಿಮೆ ಜನನ ತೂಕದಂತಹ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆತಂಕ, ಒತ್ತಡ ಹಾಗೂ ಚಡಪಡಿಕೆ ಪ್ರಮುಖ ಕಾರಣಗಳಾಗಿವೆ.
  • ಹೆಚ್ಚು ಚಹಾ ಸೇವನೆಯಿಂದ ನಿದ್ರೆಗೆ ತೊಂದರೆಯಾಗುತ್ತದೆ. ಸರಿಯಾಗಿ ನಿದ್ರೆ ಬಾರದವರು ಹೆಚ್ಚು ಟೀ ಕುಡಿಯಬಾರದು.
  • ಬೊಜ್ಜು ಸಮಸ್ಯೆ ಉಂಟಾಗಬಹುದು. ಎದೆಯುರಿ ಹಾಗೂ ಆಸಿಡ್ ರಿಫ್ಲೆಕ್ಸ್​ ರೋಗಲಕ್ಷಣಗಳನ್ನು ಹೆಚ್ಚಿಸುತ್ತದೆ.

RELATED ARTICLES

Related Articles

TRENDING ARTICLES