Saturday, May 18, 2024

ಅಣ್ಣಾಸಾಹೇಬ್ ಜೊಲ್ಲೆ ಪರ ಪತ್ನಿ ಶಶಿಕಲಾ ಜೊಲ್ಲೆ ಭರ್ಜರಿ ಪ್ರಚಾರ

ಚಿಕ್ಕೋಡಿ : ಚಿಕ್ಕೋಡಿ ಲೋಕಸಭಾ ಚುನಾವಣೆ ಹೈ ವೊಲ್ಟೇಜ್ ಕದನವಾಗಿದೆ. ಪ್ರತಿಷ್ಠಿತ ಕುಟುಂಬಗಳಾದ ಜೊಲ್ಲೆ ಹಾಗೂ ಜಾರಕಿಹೊಳಿ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿದೆ.

ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಪರ ಇಂದು ಪತ್ನಿ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮತಬೇಟೆ ನಡೆಸಿದ್ದಾರೆ. ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ನಿಪ್ಪಾಣಿ ಕ್ಷೇತ್ರದ ಭಿವಶಿ ಬೂದಿಹಾಳ, ಸೌಂದಲಗಾ, ಯಮಗರ್ಣಿ, ಬೂದಿಹಾಳ, ಕೊಡ್ನಿ ಗ್ರಾಮದಲ್ಲಿ ಸಭೆ ನಡೆಸಿ ಶಾಸಕಿ ಶಶಿಕಲಾ‌ ಮತಯಾಚನೆಯನ್ನು ಮಾಡಿದರು.

ಈ ವೇಳೆ ಮಾತನಾಡಿ, ಸಂಸದರು ಕಳೆದ 5 ವರ್ಷದಲ್ಲಿ 8,810 ಕೋಟಿಗೂ ಅಧಿಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಕೊರೋನಾ ಕಾಲದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ 8 ಕೋವಿಡ್ ಆಸ್ಪತ್ರೆ ಮಾಡಿ 2,500 ಅಧಿಕ ರೋಗಿಗಳು ಗುಣಮಖರಾಗಿದ್ದಾರೆ. ಹೀಗೆ ಹಲವಾರು ಕೇಂದ್ರ ಸರ್ಕಾರದ ಯೋಜನೆಗಳನ್ನೂ ಕೂಡ ಫಲಾನುಭವಿಗಳಿಗೆ ಮುಟ್ಟಿಸಿದ್ದಾರೆ. ಹೀಗಾಗಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮತಹಾಕಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಕಳೆದ 10 ವರ್ಷಗಳಲ್ಲಿ ಅಕ್ಷಯ ಪಾತ್ರೆಯಂತೆ 7 ಲಕ್ಷ ಕೋಟಿಗೂ ಅಧಿಕ ಅನುದಾನ ಬಂದಿದೆ. ಇದರಿಂದ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಯಾಗಿವೆ. ಮುಂದಿನ 5 ವರ್ಷ ದೇಶ ಇನ್ನು ಹೆಚ್ಚು ಅಭಿವೃದ್ಧಿ ಕಾಣಲು ಬಿಜೆಪಿಗೆ ಮತ ನೀಡಿ, ಪ್ರಚಂಡ ಬಹುಮತದಿಂದ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಗೆಲ್ಲಿಸಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES