Friday, May 3, 2024

ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ರಿಲೀಸ್ : ಇವರೇ ಪ್ರಧಾನಿ ಮೋದಿ ಎದುರಾಳಿ

ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಗೆ 46 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿದೆ.

ಉತ್ತರಪ್ರದೇಶ, ಮಹಾರಾಷ್ಟ್ರ ಸೇರಿದಂತೆ 13 ರಾಜ್ಯಗಳಿಂದ ಕಣಕ್ಕಿಳಿಯುವ 46 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಪ್ರಧಾನಿ ಮೋದಿ ಅವರು ಸ್ಪರ್ಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಅಜಯ್ ರೈ ಅವರು ಸ್ಪರ್ಧಿಸಲಿದ್ದಾರೆ.

ಉತ್ತರಪ್ರದೇಶ, ಮಹಾರಾಷ್ಟ್ರ, ಛತ್ತೀಸ್​ಗಢ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಣಿಪುರ, ಜಮ್ಮು-ಕಾಶ್ಮೀರ, ಅಸ್ಸಾಂ, ಅಂಡಮಾನ್​​ ನಿಕೋಬಾರ್, ಮಿಜೋರಾಂನ ಲೋಕಸಭಾ ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ತಿರುವಳ್ಳೂರಿನಿಂದ ಶಶಿಕಾಂತ್​​ ಸೇಂಥಿಲ್​

ರಾಜ್ ಗಡ್​ ಕ್ಷೇತ್ರದಿಂದ ದಿಗ್ವಿಜಯ್ ಸಿಂಗ್ ಸ್ಪರ್ಧೆ ಮಾಡಲಿದ್ದಾರೆ. ತಿರುವಳ್ಳೂರು ಲೋಕಸಭಾ ಕ್ಷೇತ್ರದಿಂದ ಶಶಿಕಾಂತ್​​ ಸೇಂಥಿಲ್​ ಅವರಿಗೆ ಟಿಕೆಟ್ ನೀಡಲಾಗಿದೆ. ವಾರಣಾಸಿಯಿಂದ ಯುಪಿ ಕಾಂಗ್ರೆಸ್​ ಅಧ್ಯಕ್ಷ ಅಜಯ್ ರೈ, ಸಹರಾನ್​ಪುರದಿಂದ ಇಮ್ರಾನ್ ಮಸೂದ್, ಹರಿದ್ವಾರದಿಂದ ವೀರೇಂದ್ರ ರಾವತ್ ಸ್ಪರ್ಧಿಸಲಿದ್ದಾರೆ.

ಉದಮ್​ಪುರ ಕ್ಷೇತ್ರದಿಂದ ಲಾಲ್ ಸಿಂಗ್

ಅಸ್ಸಾಂನ ಲಿಖಿಂಪುರ ಕ್ಷೇತ್ರದಿಂದ ಉದಯ್ ಶಂಕರ್ ಹಜರಿಕ, ಅಂಡಮಾನ್-ನಿಕೋಬರ್ ಐಸ್​ಲ್ಯಾಂಡ್ ಕ್ಷೇತ್ರದಿಂದ ಕುಲದೀಪ್ ರೈ ಶರ್ಮ, ಬಸ್ತರ್ ಕ್ಷೇತ್ರದಿಂದ ಕವಾಸಿ ಕಖ್ಮ, ಉದಮ್​ಪುರ ಕ್ಷೇತ್ರದಿಂದ ಲಾಲ್ ಸಿಂಗ್, ಜಮ್ಮು ಕ್ಷೇತ್ರದಿಂದ ರಾಮನ್ ಭಳ್ಳ ಅವರು ಕಣಕ್ಕಿಳಿಯಲಿದ್ದಾರೆ.

RELATED ARTICLES

Related Articles

TRENDING ARTICLES