Thursday, May 9, 2024

ಬಿಜೆಪಿಗೆ ಗುಡ್‌ಬೈ ಹೇಳಿದ ಸಂಸದ ಬಿ.ಎನ್.ಬಚ್ಚೇಗೌಡ!

ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಬಿಜೆಪಿ ಹಿರಿಯ ರಾಜಕಾರಣಿ ಹಾಗು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್​ ಬಚ್ಚೇಗೌಡ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೇ ನೀಡಿದ್ದಾರೆ.

ಇದನ್ನೂ ಓದಿ: BSY ಮೇಲೆ ಅಸಮಾಧಾನವಿದೆ : ಮಾಧುಸ್ವಾಮಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಬಿ.ಎನ್ ಬಚ್ಚೇಗೌಡ ತಲುಪಿಸಿದ್ದಾರೆ. ಈ ಪತ್ರದಲ್ಲಿ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ನನ್ನ ಸ್ವ ಇಚ್ಚೆಯಿಂದ ರಾಜಿನಾಮೆ ಸಲ್ಲಿಸುತ್ತಿದ್ದೇನೆ, 2008 ರಲ್ಲಿ ಬಿಜೆಪಿ ಪಕ್ಷದ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ಪಕ್ಷದಲ್ಲಿ ಶಾಸಕ, ಸಚಿವ ಹಾಗು 2019 ರಲ್ಲಿ ಸಂಸದನಾಗಿ ಸಾರ್ವಜನಿಕ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಮತ್ತು ಹಿರಿಯ ಮುಖಂಡರುಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

ಇದೀಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್​ ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಮಾಜಿ ಸಚಿವ ಡಾ. ಸುಧಾಕರ್ ಹಾಗು ಯಲಹಂಕ ಕ್ಷೇತ್ರದ ಶಾಸಕ ವಿಶ್ವನಾಥ್​ ಪುತ್ರ ಅಲೋಕ್​ ವಿಶ್ವನಾಥ್​ ಆಕಾಂಕ್ಷಿಗಳಾಗಿದ್ದಾರೆ, ಒಂದು ವೇಳೆ ತಮ್ಮ ಪುತ್ರ ಅಲೋಕ್​ ಗೆ ಟಿಕೆಟ್​ ಸಿಗದಿದ್ದರೇ ತಾವೇ ಸ್ಪರ್ಧಿಸುವ ಒಲವನ್ನು ಹೊಂದಿರುವುದಾಗಿ ಎಸ್​ ಆರ್​ ವಿಶ್ವನಾಥ್​ ಇತ್ತೀಚೆಗೆ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡಿದ್ದರು.

ಈಗಾಗಲೇ, ಕೇಂದ್ರ ಚುನಾವಣಾಧಿಕಾರಿಗಳು ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದ್ದು ಏಳು ಹಂತಗಳಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಿದ್ದಾರೆ.

RELATED ARTICLES

Related Articles

TRENDING ARTICLES