Friday, May 3, 2024

BSY ಮೇಲೆ ಅಸಮಾಧಾನವಿದೆ : ಮಾಧುಸ್ವಾಮಿ

ಬೆಂಗಳೂರು: ಬಿ ಫಾರಂ ಬದಲಿಸಿ ಕಾಂಗ್ರೆಸ್​​ನವರು ಕರೆದರೂ, ಬಿಜೆಪಿಯವರು ಕರೆದರೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ತಾವು ಕಾಂಗ್ರೆಸ್ ಗೆ ಸೇರುವುದಾಗಿ ಯಾರೊಂದಿಗೂ ಹೇಳಿಲ್ಲ. ಆದರೆ, ಮನೆ ಬಾಗಿಲಿಗೆ ಬಂದವರ ಜತೆ ಸೌಜನ್ಯಯುತವಾಗಿ ಮಾತನಾಡಿ ಕಳುಹಿಸಿ್ದ್ದೇನೆ. ಬಿಜೆಪಿಯಿಂದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಬಂದಿದ್ದು ನಿಜ, ತಮಗೆ ಯಡಿಯೂರಪ್ಪನವರ ಮೇಲೆ ಅಸಮಾಧಾನ ಇರುವುದು ನಿಜವೆಂದು ಅಶೋಕ್ ಬಳಿ ಹೇಳಿ ಕಳುಹಿಸಿ್ದ್ದಾಗಿ ಮಾಧುಸ್ವಾಮಿ ಹೇಳಿದರು.

ಇದನ್ನೂ ಓದಿ: ಮಾರ್ಚ್​ 22ಕ್ಕೆ 5 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ: ಬಿಎಸ್​ ಯಡಿಯೂರಪ್ಪ

ತುಮಕೂರಿನಲ್ಲಿ ಬೆಳೆದವನಾಗಿ ಹೊರಗಿನವರಿಗೆ ಟಿಕೆಟ್ ಕೊಡೋದಕ್ಕೆ ನನ್ನ ಒಪ್ಪಿಗೆ ಇಲ್ಲ. ನನಗೆ ಕೊಡಬೇಕು ಅಂತಲ್ಲ, ಜಿಲ್ಲೆಯ ಯಾರಿಗೆ ಕೊಟ್ಟರು ತೊಂದರೆ ಇರಲಿಲ್ಲ. ಸೋಮಣ್ಣ ಮೇಲೆ ನನಗೆ ಯಾವುದೇ ಬೇಜಾರಿಲ್ಲ. ಅವರು ರಾಜ್ಯಸಭೆಗೆ ಹೋಗುತ್ತಾರೆ ಅಂದಾಗ ನಾನು ಸಂತೋಷಪಟ್ಟಿದ್ದೆ. ಆದರೆ ಇವರು ಜಾತಿ ಕಾರಣಕ್ಕೆ ಎಲ್ಲಾ ಕಡೆ ಹೋಗುತ್ತಿದ್ದರೆ ಸ್ಥಳೀಯರ ಸ್ಥಿತಿ ಏನು. ಹೊರಗಿನವರಿಗೆ ಪ್ರೋತ್ಸಾಹ ನೀಡುವ ಮನಸ್ಥಿತಿ ನನ್ನಲ್ಲಿಲ್ಲ. ಈಗ ತುಮಕೂರಿನ ಅಭಿವೃದ್ಧಿ ಅನ್ನೋ ಕಾರಣ ಕೊಡ್ತಿದ್ದಾರೆ. ಎಂಪಿ ಬಂದು ಸಮಗ್ರ ಅಭಿವೃದ್ಧಿ ಮಾಡ್ತಾರೆ ಅನ್ನೋದೆಲ್ಲ ಸುಳ್ಳು ಎಂದರು.

RELATED ARTICLES

Related Articles

TRENDING ARTICLES