Saturday, May 18, 2024

ಡಿಬಾಸ್​ಗೆ ಡೈಮಂಡ್ ವಾಚ್ ಗಿಫ್ಟ್​, ಇದು ಎಷ್ಟು ಕೋಟಿ..? ಇದರ ಹಿನ್ನೆಲೆ ಗೊತ್ತಾ..?

ಫಿಲ್ಮಿಡೆಸ್ಕ್​:  ಡಿಬಾಸ್ ದರ್ಶನ್ ನಮ್ಮ ಕನ್ನಡ ಚಿತ್ರರಂಗದ ಪಾಲಿಗೆ ಕೊಹಿನೂರ್ ಡೈಮಂಡ್. ಆ ಬೆಲೆಕಟ್ಟಲಾಗದ ಡೈಮಂಡ್​ಗೊಂದು ದುಬಾರಿ ಡೈಮಂಡ್ ವಾಚ್ ಗಿಫ್ಟ್ ಸಿಕ್ಕಿದೆ. ಅದು ಎಷ್ಟು ಕೋಟಿ ಬೆಲೆ ಬಾಳುತ್ತೆ..? ಅಷ್ಟು ಕಾಸ್ಟ್ಲಿ ಗಿಫ್ಟ್ ಕೊಟ್ಟಿದ್ದಾದ್ರೂ ಯಾರು ಅನ್ನೋದ್ರ ಎಕ್ಸ್​​ಕ್ಲೂಸಿವ್ ಸ್ಟೋರಿ ನಿಮ್ಮ ಅಚ್ಚುಮೆಚ್ಚಿನ ಫಿಲ್ಮಿ ಪವರ್​​ನಲ್ಲಿ ಮಾತ್ರ.

ಲೂನಾದಿಂದ ಲ್ಯಾಂಬೋರ್ಗಿನಿ ವರೆಗೆ ದೈತ್ಯವಾಗಿ ಬೆಳೆದುನಿಂತ ದಾಸ ದರ್ಶನ್ ಕಥೆ ನಿಮಗೆಲ್ಲಾ ಗೊತ್ತೇಯಿದೆ. ಲೈಟ್ ಬಾಯ್ ಆಗಿದ್ದ ದರ್ಶನ್, ಇಂದು ದೊಡ್ಡ ಸೂಪರ್ ಸ್ಟಾರ್. ಹಣ, ಆಸ್ತಿ, ಅಂತಸ್ತು ಎಲ್ಲವೂ ಸಿಕ್ಕಾಯ್ತು. ಎಲ್ಲಕ್ಕಿಂತ ಮಿಗಿಲಾಗಿ ಕೋಟ್ಯಂತರ ಅಭಿಮಾನಿಗಳ ಒಡೆಯನಾಗಿದ್ದಾರೆ ಡಿಬಾಸ್. ಯಶಸ್ವಿ 56 ಚಿತ್ರಗಳನ್ನ ಮಾಡಿ ಮುಗಿಸಿರೋ ಈತ ನಂಬಿದವರ ಪಾಲಿನ ಯಜಮಾನ.

ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಪಾಲಿಗೆ ದರ್ಶನ್ ಹಿರಿಮಗ. ಬುಲ್ ಬುಲ್ ಚಿತ್ರದಲ್ಲಿ ಜೂನಿಯರ್ ಸೀನಿಯರ್ ಆಗಿ ಕೂಡ ಅಂಬಿ- ದಚ್ಚು ಜೋಡಿ ಮೋಡಿ ಮಾಡಿತ್ತು. ರೆಬೆಲ್ ಸ್ಟಾರ್ ಇಂದು ನಮ್ಮೊಂದಿಗೆ ಇಲ್ಲವಾದ್ರೂ ಅಂಬಿ ಕುಟುಂಬದ ಪಾಲಿಗೆ ಈತ ಫ್ಯಾಮಿಲಿ ಮೆಂಬರ್. ಸುಮಕ್ಕ ಸಂಸದೆ ಆಗೋಕೆ ಸಹ ದರ್ಶನ್ ಸಾಕಷ್ಟು ಸಾಥ್ ನೀಡಿದ್ರು. ಆಕೆಯನ್ನ ಸದಾ ಮದರ್ ಇಂಡಿಯಾ ಅಂತ ದಚ್ಚು ಕರೆದ್ರೆ, ಸಮಲತಾ ಕೂಡ ಅಭಿ ನನ್ನ ಎರಡನೇ ಮಗ, ದರ್ಶನ್ ನನ್ನ ದೊಡ್ಡ ಮಗ ಅಂತ ಸಾಕಷ್ಟು ಸಲ ಬಹಿರಂಗವಾಗೇ ಹೇಳಿದ್ದಾರೆ.

ಇದನ್ನೂ ಓದಿ: ‘ತಲೈವಾ’ಗೆ ಸಂಕಷ್ಟ : ರಜನಿಕಾಂತ್ ‘ಕೂಲಿ’ ಚಿತ್ರಕ್ಕೆ ಇಳಯರಾಜ ಲೀಗಲ್ ನೋಟಿಸ್

ಇದನ್ನೆಲ್ಲಾ ಈಗ್ಯಾಕೆ ಹೇಳ್ತಿದ್ದೀವಿ ಅಂದ್ರೆ, ನಿನ್ನೆ ಡಿಬಾಸ್ ದರ್ಶನ್ ಒಂದು ದುಬಾರಿ ವಾಚ್​​ನಿಂದ ಗಮನ ಸೆಳೆದರು. ಪೆಟ್ಟಾಗಿರೋ ಎಡಗೈಯಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು ಅವ್ರು ಕಟ್ಟಿದ್ದ ಡೈಮಂಡ್ ವಾಚ್. ಗೋಲ್ಡ್ ಹಾಗೂ ಡೈಮಂಡ್ ಮಿಶ್ರಿತ ವಾಚ್​​ನ ಸ್ವತಃ ದರ್ಶನ್ ಅವರೇ ಬಿಚ್ಚಿ, ಪಕ್ಕದಲ್ಲೇ ಕೂತಿದ್ದ ರಾಕ್​ಲೈನ್ ವೆಂಕಟೇಶ್ ಅವರಿಗೆ ಹಾಗೂ ಮಾಸ್ತಿ ಅವ್ರ ಕೈಗಿಟ್ಟರು. ಅಲ್ಲದೆ, ಅದ್ರ ಬಗ್ಗೆ ಒಂದು ಸಣ್ಣ ಮಾಹಿತಿ ಕೂಡ ನೀಡಿದ್ರು.

ಒಂದು ಕೋಟಿಗೂ ಅಧಿಕ ಬೆಲೆ ಬಾಳುವ ಈ ಡೈಮಂಡ್ ವಾಚ್​ನ ಸ್ವತಃ ಮದರ್ ಇಂಡಿಯಾ ಸುಮಲತಾ ಅವರೇ ದರ್ಶನ್​ಗೆ ಇತ್ತೀಚೆಗೆ ಗಿಫ್ಟ್ ಆಗಿ ನೀಡಿದ್ರಂತೆ. ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ ಈ ವಾಚ್​​ ರೆಬೆಲ್​ಸ್ಟಾರ್ ಅಂಬರೀಶ್​​ರ ಅಚ್ಚುಮೆಚ್ಚಿನ ವಾಚ್ ಅಂತೆ. ಫಾರಿನ್​​ನಲ್ಲಿ ಖರೀದಿಸಿರೋ ಈ ವಾಚ್, ಇದೀಗ ಡಿಬಾಸ್ ಕೈಯಲ್ಲಿರೋದು ಸಖತ್ ಇಂಟರೆಸ್ಟಿಂಗ್ ಅನಿಸಿತು. ಇದು ನಿಜಕ್ಕೂ ತಾಯಿ- ಮಗನ ಬಾಂಧವ್ಯದ ಕೈಗನ್ನಡಿ ಅಂದ್ರೆ ತಪ್ಪಾಗಲ್ಲ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES