Sunday, April 28, 2024

ನಮ್ಮ ಮೆಟ್ರೋ 3ನೇ ಹಂತಕ್ಕೆ ಸಚಿವ ಸಂಪುಟ ಒಪ್ಪಿಗೆ: ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ‌, ಟ್ರಾಫಿಕ್‌ ಸಂಕಷ್ಟಗಳಿಗೆ ಪರಿಹಾರ ರೂಪವಾಗಿ ಬಂದಿರುವ ನಮ್ಮ ಮೆಟ್ರೋದ ಮೂರನೇ ಹಂತದ ಯೋಜನೆಯ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬೆಂಗಳೂರಿನ ಜೆ.ಪಿ. ನಗರದಿಂದ ಹೆಬ್ಬಾಳವನ್ನು ಸಂಪರ್ಕಿಸುವ ಸುಮಾರು 44 ಕಿ.ಮೀ. ಉದ್ದದ ಹೊರ ವರ್ತುಲ ಮೆಟ್ರೋ ರಿಂಗ್‌ ರೋಡ್‌ ಇದಾಗಿದೆ. ಈ ಯೋಜನೆಯನ್ನು ಸುಮಾರು 15,611 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ ಪ್ರಕರಣ: ಮೂವರೂ ಆರೋಪಿಗಳಿಗೆ ಜಾಮೀನು

ಮೆಟ್ರೋ ಮೂರನೇ ಹಂತ ಹಲವು ಪ್ರಮುಖ ಭಾಗಗಳನ್ನು ಸಂಪರ್ಕಿಸುತ್ತದೆ. ಹೆಬ್ಬಾಳ – ಗೊರುಗುಂಟೆಪಾಳ್ಯ-ಕನಕಪುರ ರಸ್ತೆ, ಜೆಪಿ ನಗರ ಮೆಟ್ರೋ ನಿಲ್ದಾಣಗಳು ಇದರಲ್ಲಿ ಬರಲಿವೆ. ಇದಕ್ಕೆ ಬೇಕಾಗುವ ಖರ್ಚಿನ ಮೊತ್ತದಲ್ಲಿ ಶೇ. 15-16 ಭಾಗವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಉಳಿದ ಶೇ. 85 ಭಾಗವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಸಂಪುಟ ಸಭೆಯ ಬಳಿಕ ವಿವರ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

RELATED ARTICLES

Related Articles

TRENDING ARTICLES