Saturday, April 27, 2024

ಹಿಂದುಳಿದ ದೇವರು, ಗ್ರಾಮ ದೇವತೆಗಳನ್ನ ಅಭಿವೃದ್ಧಿ ಮಾಡ್ತೀವಿ : ಡಿ.ಕೆ. ಶಿವಕುಮಾರ್

ಕಲಬುರಗಿ : ಹಿಂದುಳಿದ ದೇವರುಗಳು, ಗ್ರಾಮ ದೇವತೆಗಳಿಗೆ ಅಭಿವೃದ್ಧಿ ಮಾಡ್ತೇವೆ. ಜೂನ್, ಮೇ ತಿಂಗಳಲ್ಲಿ ನಮಗೆ ಬಹುಮತ ಬರುತ್ತೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ದೇವಸ್ಥಾನದ ಹಣ 10% ಪ್ರತಿಶತ ಪಡೆದು ಸಣ್ಣ ಸಣ್ಣ ದೇವಸ್ಥಾನ ಅಭಿವೃದ್ಧಿ ಮಾಡಬೇಕು ಅಂತ ಕಾಯ್ದೆ ಮಾಡಿದ್ದೇವೆ. ಆದ್ರೆ, ನಮಗೆ ಶಾಕ್ ಏನಂದ್ರೆ ಬಿಜೆಪಿಯವರು ಅದನ್ನು ವಿರೋಧ ಮಾಡಿದ್ರು ಎಂದು ಕುಟುಕಿದರು.

ಬೆಂಗಳೂರು ನಗರದಲ್ಲಿ ಏಳು ಸಾವಿರ ಬೋರ್ ಬತ್ತಿ ಹೋಗಿದೆ. ಕಾವೇರಿ ನೀರಿ ಸಮಪರ್ಕವಾಗಿ ಬೆಂಗಳೂರಿಗೆ ಸಿಗುತ್ತಿದೆ. ಎಲ್ಲಾ ಜಿಲ್ಲಾಧಿಕಾರಿ ಅಕೌಂಟ್​ನಲ್ಲಿ ಹಣ ಇಟ್ಟಿದ್ದೇವೆ. ನೀರಿನ ಸಮಸ್ಯೆ ಆದ್ರೆ ಎಲ್ಲೆಲ್ಲಿಂದ ನೀರು ಕೊಡಬೇಕು ಅನ್ನೋದು ಕೂಡ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ನಾವಾದ್ರೆ ಪಕ್ಷದಿಂದ ಹೋರ ಹಾಕ್ತಿದ್ದೆವು

ಅನಂತಕುಮಾರ್ ಹೆಗೆಡೆ ಸಂವಿಧಾನ ಬದಲಾವಣೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಇದನ್ನು ನೋಡಿದ್ರೆ ಮೌನಂ ಸಮ್ಮತಿ ಲಕ್ಷಣಂ ಅಂತ ಅನಿಸುತ್ತೆ. ನಾವಾದ್ರೆ ಇಷ್ಟೋತ್ತಿಗೆ ಪಾರ್ಟಿಯಿಂದ ಹೋರ ಹಾಕ್ತಿದ್ದೆವು. ಆದ್ರೆ, ಬಿಜೆಪಿಯವರು ಮಾತ್ರ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಿಲ್ಲ. ಇದರ ವಿರುದ್ದ ದೊಡ್ಡ ಮಟ್ಟದ ಹೋರಾಟ ಕೂಡ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ನಾವು ಡಿವೈಡ್ ಮಾಡಿಕೊಂಡಿದ್ದೇವೆ

ನೀತಿ ಸಂಹಿತೆ ಬರ್ತಿದೆ. ಹಾಗಾಗಿ ನಾವು ಡಿವೈಡ್ ಮಾಡಿಕೊಂಡಿದ್ದೇವೆ. ಹಾಗಾಗಿ, ಸಿಎಂ ಸಿದ್ದರಾಮಯ್ಯ ಕಲಬುರಗಿಗೆ ಬರ್ತಿಲ್ಲ. ನಾನು ಕಲಬುರಗಿಗೆ ಬಂದಿದ್ದೇನೆ, ಅವರು ಉಡುಪಿ ಹೋಗ್ತಿದ್ದಾರೆ. ನಾಳೆ ನಾನು ರಾಯಚೂರು ಹೋಗ್ತಿದ್ದೇನೆ, ಅವರು ಕ್ಯಾಬಿನೆಟ್ ಮೀಟಿಂಗ್ ಮಾಡ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

RELATED ARTICLES

Related Articles

TRENDING ARTICLES