Wednesday, May 22, 2024

ಪ್ಯಾರಿಸಿ ಒಲಿಂಪಿಕ್ಸ್​ 2024ರ ಉದ್ಘಾಟನೆಗೆ ಸಮಯ ನಿಗಧಿ

ಪ್ಯಾರಿಸ್ : ನೂರು ವರ್ಷಗಳ ಬಳಿಕ ಮತ್ತು ಮೂರನೇ ಬಾರಿಗೆ ಪ್ಯಾರೀಸ್​ ನಲ್ಲಿ  2024ನೇ ಸಾಲಿನ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಗಾಟನಾ ಸಮಾರಂಭಕ್ಕೆ ದಿನಾಂಕ ನಿಗಧಿಯಾಗಿದ್ದು ಜು.26ರಂದು ಸಂಜೆ 7.30ಕ್ಕೆ ಸೀನ್​ ನದಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ ನಲ್ಲಿ ಪೋಸ್ಟ್​ ಹಂಚಿಕೊಂಡಿದೆ. ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಮಹಿಳಾ ಅಭಿಮಾನಿಯ ಫೋಟೋ ಹಂಚಿಕೊಂಡ ಸಚಿನ್​

ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ. ಕಳೆದ ವಾರ ಕ್ರೀಡಾಪಟುಗಳು ಉಳಿದುಕೊಳ್ಳಲು ನಿರ್ಮಿಸಲಾಗಿರುವ ಕ್ರೀಡಾಗ್ರಾಮವನ್ನು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮಾಕ್ರನ್‌ ಅವರು ಪರಿಶೀಲಿಸಿದ್ದರು. ಈ ವೇಳೆ ಅವರು ಸೀನ್​ ನದಿ ಸ್ವಚ್ಛಗೊಂಡಿದ್ದು, ತಾನು ಕೂಡ ಈ ನದಿಯಲ್ಲಿ ಈಜುವುದಾಗಿ ಭರವಸೆ ನೀಡಿದ್ದರು.

ಒಲಿಂಪಿಕ್ಸ್‌ ಟೂರ್ನಿಯ  ಹಾಕಿ ಪಂದ್ಯಾವಳಿಯ ವೇಳಾಪಟ್ಟಿ ಕಳೆದ ವಾರ ಪ್ರಕಟಗೊಂಡಿತ್ತು. ಭಾರತೀಯ ಪುರುಷರ ತಂಡ ತನ್ನ ಮೊದಲ ಪಂದ್ಯವನ್ನು ಜುಲೈ 27ರಂದು ನ್ಯೂಜಿಲ್ಯಾಂಡ್​ ವಿರುದ್ಧ ಆಡಲಿದೆ.

RELATED ARTICLES

Related Articles

TRENDING ARTICLES