Saturday, May 18, 2024

ಮಹಿಳಾ ಅಭಿಮಾನಿಯ ಫೋಟೋ ಹಂಚಿಕೊಂಡ ಸಚಿನ್​

ಮುಂಬೈ : ಟೀಂ ಇಂಡಿಯಾದ ಮಾಜಿ ಆಟಗಾರ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್​ ಅವರು ಮಹಿಳಾ ದಿನಾಚರಣೆ ಹಿನ್ನೆಲೆ ತಮ್ಮ ಎಕ್ಸ್​ ಖಾತೆಯಲ್ಲಿ ಭಾವುಕ ಕ್ಷಣವೊಂದರ ಫೋಟೊವನ್ನು ಹಂಚಿಕೊಂಡಿದ್ದೂ ಅಂದಿನ ಘಟನೆಯ ಕುರಿತು ಕಿರು ಟಿಪ್ಪಣಿಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಮತದಾರರು ಕಾಂಗ್ರೆಸ್‌ ಪರ ನಿಲ್ಲುತ್ತಾರೆ: ಸ್ಟಾರ್ ಚಂದ್ರು

“ವರ್ಷಗಳು ಉರುಳಿದಂತೆ ಭಾರತ ಮತ್ತು ಜಗತ್ತಿನಾದ್ಯಂತ ಕ್ರೀಡೆಯಲ್ಲಿ ಮಹಿಳೆಯರು ಮುಂಚೂಣಿಗೆ ಬರುತ್ತಿದ್ದು, ಇದು ತುಂಬಾ ಸ್ಫೂರ್ತಿದಾಯಕವಾಗಿದೆ. 26/11ರ ದಾಳಿಯ ನಂತರ, ಭಾರತವು ಇಂಗ್ಲೆಂಡ್ ಎದುರು ಪಂದ್ಯವೊಂದನ್ನು ಜಯಿಸಿತ್ತು ಹಾಗೂ ಇದು ಇಡೀ ದೇಶದ ಪಾಲಿಗೆ ಭಾವುಕ ಕ್ಷಣವಾಗಿತ್ತು. ಈ ಭಾವುಕ ಕ್ಷಣವನ್ನು ನಾನು ಮೊತ್ತಮೊದಲ ಬಾರಿಗೆ ಹಂಚಿಕೊಂಡಿದ್ದು ಮಹಿಳಾ ಮೈದಾನದ ಸಿಬ್ಬಂದಿಯೊಬ್ಬರ ಬಳಿ. ಆ ಕ್ಷಣ ನನ್ನ ಪಾಲಿಗೆ ಇಂದೂ ಕೂಡ ವಿಶೇಷವಾಗಿ ಉಳಿದಿದೆ” ಎಂದು ಸಚಿನ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಇಂದು ಮಹಿಳೆಯರು ಸಾಧಿಸುತ್ತಿರುವ ಸಾಧನೆಯನ್ನು ಕೂಡ ಕೊಂಡಾಂಡಿದ್ದಾರೆ.

ಈ ಫೋಟೊವನ್ನು ಹಂಚಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.

 

RELATED ARTICLES

Related Articles

TRENDING ARTICLES